ಭಾರತ ವೆಸ್ಟ್ ಇಂಡೀಸ್ ಪಂದ್ಯದಲ್ಲಿ ಗೆಲ್ಲೋದು ಯಾರು? ಭವಿಷ್ಯ ಹೇಳಿದ ಖ್ಯಾತ ಜ್ಯೋತಿಷಿ ಲೋಬೋ, ಗೆದ್ದವರು ಸೆಮಿಫೈನಲ್ ಟಿಕೆಟ್ ಗಿಟ್ಟಿಸಿದರೆ, ಸೋತವರು ಟೂರ್ನಿಯಿಂದ ಔಟ್. ಹಾಗಾದರೆ ಜ್ಯೋತಿಷಿ ಹೇಳಿದ ಭವಿಷ್ಯವೇನು?
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಸೂಪರ್ 8 ಪಂದ್ಯ ಇದೀಗ ತೀವ್ರ ಕುತೂಹಲ ತೆರಳಿಸಿದೆ. ಈ ಪಂದ್ಯ ಕ್ವಾರ್ಟರ್ ಫೈನಲ್ ಸ್ವರೂಪ ಪಡೆದುಕೊಂಡಿದೆ. ಗೆದ್ದವರು ಸೆಮಿಫೈನಲ್ ಪ್ರವೇಶ ಪಡೆದರೆ, ಸೋತವರು ಟೂರ್ನಿಯಿಂದ ಹೊರಬೀಳಲಿದ್ದಾರೆ. ಹೀಗಾಗಿ ಇಂದಿನ (ಮಾ.01) ಭಾರತ ವೆಸ್ಟ್ ಇಂಡೀಸ್ ಹೋರಾಟ ತೀವ್ರ ಜಿದ್ದಾಜಿದ್ದಿನಿಂದ ಕೂಡಿದೆ.
25
ಜ್ಯೋತಿಷಿ ಗ್ರೀನ್‌ಸ್ಟೋನ್ ಲೋಬೋ ಭವಿಷ್ಯ
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಸೂಪರ್ 8 ಪಂದ್ಯದ ಫಲಿತಾಂಶ ಕುರಿತು ಖ್ಯಾತ ಜ್ಯೋತಿಷಿ ಗ್ರೀನ್‌ಸ್ಟೋನ್ ಲೋಬೋ ಭವಿಷ್ಯ ನುಡಿದಿದ್ದಾರೆ. ವೆಸ್ಟ್ ಇಂಡೀಸ್ ಬಲಿಷ್ಠ ತಂಡ ಅನ್ನೋದರಲ್ಲಿ ಎರಡು ಮಾತಿಲ್ಲ. ಗ್ರಹಗತಿ ಪ್ರಕಾರ, ಇಂದು ಭಾರತದ ವಿರುದ್ದ ವೆಸ್ಟ್ ಇಂಡೀಸ್‌ಗೆ ನಿರೀಕ್ಷಿತ ಹೋರಾಟ ನೀಡಲು ಸಾಧ್ಯವಾಗುದಿಲ್ಲ. ಭಾರತ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶ ಮಾಡಲಿದೆ ಎಂದಿದ್ದಾರೆ.
35
ಸಂಜು ಸ್ಯಾಮ್ಸನ್ 1994 ಪವರ್
ಸೌತ್ ಆಫ್ರಿಕಾ ವಿರುದ್ದ ಭಾರತ ಮುಗ್ಗರಿಸಿದೆ. ಆದರೆ ಜ್ಯೋತಿಷ್ಯ ಲೆಕ್ಕಾಚಾರ ಪ್ರಕಾರ ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ ಭಾರತಕ್ಕೆ ಯಾವುದೇ ಆತಂಕ ನೀಡುವುದಿಲ್ಲ. 1994ನೇ ಇಸವಿ ಭಾರತದ ಗೆಲುವಿಗೆ ನೆರವಾಗಲಿದೆ ಎಂದಿದ್ದಾರೆ. ಸಂಜು ಸ್ಯಾಮ್ಸನ್ ಡೇಟ್ ಆಫ್ ಬರ್ತ್ 1994. ಇಂದು ಸಂಜು ಸ್ಯಾಮ್ಸನ್ ತಂಡದಲ್ಲಿ ಆಡುವುದು ಭಾರತದ ಗೆಲುವನ್ನು ಮತ್ತಷ್ಟು ಸುಲಭವವಾಗಿಸಲಿದೆ ಎಂದಿದ್ದಾರೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಈ ರೋಚಕ ಪಂದ್ಯದ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಸಂಜೆ 7ಗಂಟೆಗೆ ಪಂದ್ಯ ಆರಂಭಗೊಳ್ಳಲಿದೆ. 6.30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಈ ಪಂದ್ಯದಲ್ಲಿ ಟಾಸ್ ಕೂಡ ಅತ್ಯಂತ ಮುಖ್ಯವಾಗಲಿದೆ. ಟೀಂ ಇಂಡಿಯಾ ಹಾಗೂ ವೆಸ್ಟ್ ಇಂಡೀಸ್ ಉತ್ತಮ ಅಭ್ಯಾಸ ಮಾಡಿದೆ.
55
ಸ್ಪಿನ್ ಅಸ್ತ್ರ
ಕಳೆದ ಟಿ20 ವಿಶ್ವಕಪ್ ಟೂರ್ನಿಯಿಂದ ಇಲ್ಲೀವರೆಗೆ ವೆಸ್ಟ್ ಇಂಡೀಸ್ ತಂಡ ರಿಸ್ಟ್ ಸ್ಪಿನ್ ದಾಳಿಗೆ 67 ವಿಕೆಟ್ ಕಳೆದುಕೊಂಡಿದೆ. ಭಾರತ ವರುಣ್ ಚಕ್ರವರ್ತಿ ಅಸ್ತ್ರ ಪ್ರಯೋಗಿಸಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಚಕ್ರವರ್ತಿ ಮುಖ್ಯ ಪಾತ್ರ ನಿರ್ವಹಿಸಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.