Probable 11 ರಿಂಕು ಬೆನ್ನಲ್ಲೇ ಮತ್ತೊಬ್ಬ ಫಿನೀಶರ್ ಔಟ್, ಭಾರತ ವಿಂಡೀಸ್ ಪಂದ್ಯಕ್ಕೆ ಕುಲ್ದೀಪ್ ವಾಪಸ್

Published : Feb 28, 2026, 05:30 PM IST

Probable 11 ರಿಂಕು ಬೆನ್ನಲ್ಲೇ ಮತ್ತೊಬ್ಬ ಫಿನೀಶರ್ ಔಟ್, ಭಾರತ ವಿಂಡೀಸ್ ಪಂದ್ಯಕ್ಕೆ ಕುಲ್ದೀಪ್ ವಾಪಸ್ ಸಾಧ್ಯತೆ ಇದೆ. ಕ್ವಾರ್ಟರ್‌ಫೈನಲ್ ಸ್ವರೂಪ ಪಡೆದುಕೊಂಡಿರುವ ಈ ಪಂದ್ಯದಲ್ಲಿ ಭಾರತದ ಸಂಭಾವ್ಯ ಪ್ಲೇಯಿಂಗ್ 11 

PREV
15
ಗೆದ್ದ ತಂಡಕ್ಕೆ ಸೆಮಿಫೈನಲ್ ಟಿಕೆಟ್

ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹೋರಾಟ ಕಠಿಣವಾಗುತ್ತಿದೆ. ಜಿಂಬಾಬ್ವೆ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಸೆಮಿಫೈನಲ್ ಆಸೆ ಜೀವಂತವಾಗಿರಿಸಿದೆ. ಇದೀಗ ವೆಸ್ಟ್ ಇಂಡೀಸ್ ಸವಾಲು. ಮಾರ್ಚ್ 1 ರಂದು ಭಾರತ ಹಾಗೂ ವೆಸ್ಟ್ ಇಂಡೀಸ್ ಹೋರಾಟ ನಡೆಸಲಿದೆ. ಇದು ಕ್ವಾರ್ಟರ್‌ಫೈನಲ್ ಸ್ವರೂಪ ಪಡೆದುಕೊಂಡಿದೆ. ಕಾರಣ ಗೆದ್ದ ತಂಡಕ್ಕೆ ಸೆಮಿಫೈನಲ್ ಟಿಕೆಟ್ ಸಿಗಲಿದೆ. ಸೋತ ತಂಡ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬೀಳಲಿದೆ.

25
ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆ ಸಾಧ್ಯತೆ

ದಕ್ಷಿಣ ಆಫ್ರಿಕಾ ವಿರುದ್ಧ ಸೋತರೂ, ಜಿಂಬಾಬ್ವೆ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಭಾರತ ಕಮ್‌ಬ್ಯಾಕ್ ಮಾಡಿತ್ತು. ಆದರೆ, ವೆಸ್ಟ್ ಇಂಡೀಸ್‌ನಂತಹ ಬಲಿಷ್ಠ ತಂಡದ ವಿರುದ್ಧ ಆಡುವಾಗ, ಟೀಮ್ ಇಂಡಿಯಾ ತನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕೆಲವು ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಇದೆ.

35
ದುಬೆಗೆ ರೆಸ್ಟ್, ಕುಲ್ದೀಪ್ ಯಾದವ್

ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ಗೆ ತಲೆನೋವಾಗಿರೋದು ಆರನೇ ಬೌಲರ್‌ನ ಪ್ರದರ್ಶನ. ಕಳೆದ ಮೂರು ಮ್ಯಾಚ್‌ಗಳಲ್ಲಿ ಆರನೇ ಬೌಲರ್ ಆಗಿ ಆಡಿದ್ದ ಶಿವಂ ದುಬೆ ಸಿಕ್ಕಾಪಟ್ಟೆ ರನ್ ಬಿಟ್ಟುಕೊಟ್ಟಿದ್ದರು. ವೆಸ್ಟ್ ಇಂಡೀಸ್‌ನ ಪವರ್‌ಫುಲ್ ಬ್ಯಾಟಿಂಗ್ ಲೈನ್-ಅಪ್ ಮುಂದೆ ದುಬೆಗೆ ಬೌಲಿಂಗ್ ಕೊಟ್ಟರೆ ಅದು ದುಬಾರಿಯಾಗುವ ಸಾಧ್ಯತೆ ಹೆಚ್ಚು. ಹೀಗಾಗಿ, ದುಬೆ ಬದಲು ಸ್ಪೆಷಲಿಸ್ಟ್ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

45
ಏಳನೇ ಕ್ರಮಾಂಕ ಸಸ್ಪೆನ್ಸ್

ಈಡನ್ ಗಾರ್ಡನ್ಸ್ ಪಿಚ್‌ನಲ್ಲಿ ಕುಲದೀಪ್ ಅವರ ಸ್ಪಿನ್ ಭಾರತಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ ಅಂತ ನಿರೀಕ್ಷಿಸಲಾಗಿದೆ. ಆದರೆ, ದುಬೆ ಬದಲು ಕುಲದೀಪ್ ಬಂದರೆ ತಂಡದ ಬ್ಯಾಟಿಂಗ್ ಬಲ ಸ್ವಲ್ಪ ಕಡಿಮೆ ಆಗುತ್ತೆ. ಏಳನೇ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ ಆಡುತ್ತಾರೆ, ಅವರ ನಂತರ ಬ್ಯಾಟಿಂಗ್ ಲೈನ್-ಅಪ್ ದುರ್ಬಲವಾಗುತ್ತೆ. ಈ ಕಾರಣಕ್ಕೆ, ದುಬೆ ಬದಲು ವಾಷಿಂಗ್ಟನ್ ಸುಂದರ್‌ಗೆ ಚಾನ್ಸ್ ಕೊಡ್ತಾರಾ ಅಂತಾನೂ ಫ್ಯಾನ್ಸ್ ಕಾಯ್ತಿದ್ದಾರೆ.

55
ಬ್ಯಾಟಿಂಗ್ ಬಲ

ಬ್ಯಾಟಿಂಗ್ ವಿಚಾರಕ್ಕೆ ಬಂದರೆ, ಜಿಂಬಾಬ್ವೆ ವಿರುದ್ಧ ಮಾಡಿದ ಬದಲಾವಣೆಗಳು ಭಾರತಕ್ಕೆ ಲಾಭ ತಂದುಕೊಟ್ಟಿದ್ದವು. ಹೀಗಾಗಿ, ವಿಂಡೀಸ್ ವಿರುದ್ಧವೂ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಜೋಡಿಯೇ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಇಶಾನ್ ಕಿಶನ್ ಮೂರನೇ ಕ್ರಮಾಂಕದಲ್ಲಿ ಬಂದರೆ, ಸೂರ್ಯಕುಮಾರ್ ಯಾದವ್ ನಾಲ್ಕನೇ ಸ್ಥಾನದಲ್ಲಿ ಆಡಲಿದ್ದಾರೆ. ನಂತರ ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮಾ ಕಣಕ್ಕಿಳಿಯಲಿದ್ದಾರೆ. ಈಗಾಗಲೇ ಗ್ರೂಪ್ 1ರಿಂದ ದಕ್ಷಿಣ ಆಫ್ರಿಕಾ ಮತ್ತು ಗ್ರೂಪ್ 2ರಿಂದ ಇಂಗ್ಲೆಂಡ್ ಸೆಮಿಫೈನಲ್ ತಲುಪಿವೆ. ನಾಳಿನ ಪಂದ್ಯ ಗೆದ್ದರೆ ಭಾರತಕ್ಕೂ ಸೆಮಿಫೈನಲ್ ಟಿಕೆಟ್ ಸಿಗಲಿದೆ. ಬ್ಯಾಟಿಂಗ್‌ಗೆ ಸ್ವರ್ಗವಾಗಿರುವ ಕೋಲ್ಕತ್ತಾ ಪಿಚ್‌ನಲ್ಲಿ ಅಭಿಮಾನಿಗಳು ಭರ್ಜರಿ ರನ್ ಮಳೆ ನಿರೀಕ್ಷಿಸಬಹುದು.

ಬ್ಯಾಟಿಂಗ್ ಬಲ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories