ಕೊಲಂಬೊ: ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಮ್ಯಾಚ್ ಇಂದು ನಡೆಯಲಿದೆ. ಈ ಮ್ಯಾಚ್‌ನಲ್ಲಿ ಆಟಗಾರರ ನಡುವೆ ಶೇಕ್‌ಹ್ಯಾಂಡ್ ಇರುತ್ತಾ ಎನ್ನುವ ಪ್ರಶ್ನೆಗೆ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಉತ್ತರಿಸಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಲವು ಸರ್ಕಸ್‌ಗಳ ನಡುವೆ ಇಂದು ಭಾರತ ಹಾಗೂ ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಮ್ಯಾಚ್ ನಿಗದಿಯಾಗಿದೆ. ಮೊದಲು ಭಾರತದ ಮ್ಯಾಚ್ ಬಾಯ್ಕಾಟ್ ಮಾಡುವುದಾಗಿ ಬೆದರಿಸಿದ್ದ ಪಾಕಿಸ್ತಾನ, ಐಸಿಸಿ ವಾರ್ನಿಂಗ್‌ಗೆ ಬೆಚ್ಚಿಬಿದ್ದು ಇಂದು ಭಾರತ ಎದುರು ಮ್ಯಾಚ್ ಆಡಲು ಒಪ್ಪಿಕೊಂಡಿದೆ.
26
ಇಂದು ಸಂಜೆ 7 ಗಂಟೆಯಿಂದ ಪಂದ್ಯ ಆರಂಭ
ಇಂದಿನ ಪಂದ್ಯವು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಇದಕ್ಕೂ ಅರ್ಧಗಂಟೆ ಮೊದಲು ಅಂದರೆ ಸಂಜೆ 6.30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಈ ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ.
36
ಇಂದು ಶೇಕ್‌ಹ್ಯಾಂಡ್ ಇರುತ್ತಾ?
ಇನ್ನು ಕೆಲ ತಿಂಗಳ ಹಿಂದಷ್ಟೇ ನಡೆದ ಏಷ್ಯಾಕಪ್ ಟೂರ್ನಿಯ ವೇಳೆಯಲ್ಲಿ ಭಾರತೀಯ ಆಟಗಾರರು ಪಹಲ್ಗಾಂ ಉಗ್ರದಾಳಿಯನ್ನು ಖಂಡಿಸಿ ಪಾಕಿಸ್ತಾನ ಆಟಗಾರರ ಜತೆ ಹಸ್ತಲಾಘವ ಮಾಡಲು ನಿರಾಕರಿಸುತ್ತಾ ಬಂದಿದ್ದಾರೆ. ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉಭಯ ದೇಶದ ಕ್ಯಾಪ್ಟನ್ಸ್ ಪ್ರತಿಕ್ರಿಯೆ ನೀಡಿದ್ದಾರೆ.
ಪಹಲ್ಗಾಂ ಉಗ್ರ ದಾಳಿ ಬಳಿಕ ಭಾರತೀಯ ಕ್ರಿಕೆಟಿಗರು ಪಾಕಿಸ್ತಾನ ಆಟಗಾರರಿಗೆ ಹಸ್ತಲಾಘವ ನಿರಾಕರಿಸುತ್ತಿದ್ದಾರೆ. ಭಾನುವಾರದ ಪಂದ್ಯದಲ್ಲೂ ಭಾರತೀಯರ ‘ನೋ ಶೇಕ್‌ಹ್ಯಾಂಡ್’ ನಿಲುವು ಬದಲಾಗುವ ಸಾಧ್ಯತೆಯಿಲ್ಲ ಎನ್ನಲಾಗುತ್ತಿದೆ. ಈ ನಡುವೆ, ಉಭಯ ತಂಡಗಳ ಆಟಗಾರರು ಕೂಡಾ ಶೇಕ್‌ಹ್ಯಾಂಡ್ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.
56
ಯಾವುದೇ ಗುಟ್ಟು ಬಿಟ್ಟುಕೊಡದ ಸೂರ್ಯಕುಮಾರ್ ಯಾದವ್
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಎದುರಾದ ಪ್ರಶ್ನೆಗೆ ಉತ್ತರಿಸಿದ ಸೂರ್ಯಕುಮಾರ್ ಯಾದವ್, ‘24 ಗಂಟೆ ಕಾಯಿರಿ. ಅದರ ಬಗ್ಗೆ ಈಗ ಚಿಂತೆ ಯಾಕೆ? ನಾವು ಕ್ರಿಕೆಟ್ ಆಡಲು ಬಂದಿದ್ದೇವೆ’ ಎಂದಿದ್ದಾರೆ.
66
ಪಾಕ್ ಕ್ಯಾಪ್ಟನ್ ಹೇಳಿದ್ದೇನು?
ಪಾಕ್‌ನ ಸಲ್ಮಾನ್ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಅದರ ಬಗ್ಗೆ ನಾಳೆ ನೋಡೋಣ’ ಎಂದು ಹೇಳಿದ್ದಾರೆ. ಹೀಗಾಗಿ ಇಂದು ನಡೆಯಲಿರುವ ಹೈವೋಲ್ಟೇಜ್ ಮ್ಯಾಚ್‌ನಲ್ಲಿ ಶೇಕ್‌ಹ್ಯಾಂಡ್ ಇರುತ್ತೋ ಇಲ್ಲವೋ ಎನ್ನುವುದಕ್ಕೆ ಮ್ಯಾಚ್ ಮುಗಿಯುವವರೆಗೂ ಕಾಯಲೇಬೇಕಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.