ಧರ್ಮಶಾಲಾದಲ್ಲಿಂದು ಭಾರತ-ಆಫ್ಘಾನಿಸ್ತಾನ ಮ್ಯಾಚ್ ನಡೆಯೋದೇ ಡೌಟ್..! ಬಯಲಾಯ್ತು ಇಂಟ್ರೆಸ್ಟಿಂಗ್ ಮಾಹಿತಿ

Published : Jun 13, 2026, 01:37 PM IST

India vs Afghanistan 1st ODI: ಭಾರತ ಕ್ರಿಕೆಟ್ ತಂಡವು ಇಂದಿನಿಂದ ಮುಂಬರುವ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಸಿದ್ದತೆ ಆರಂಭಿಸುತ್ತಿದೆ. ಇಂದಿನಿಂದ ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಹೀಗಿರುವಾಗಲೇ ಮೊದಲ ಪಂದ್ಯ ನಡೆಯೋದೇ ಅನುಮಾನ ಎನಿಸಿದೆ.

PREV
16
ಭಾರತ-ಆಫ್ಘಾನಿಸ್ತಾನ ಏಕದಿನ ಸರಣಿ

ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ಇಲ್ಲಿನ HPCA ಸ್ಟೇಡಿಯಂ ಆತಿಥ್ಯ ವಹಿಸಿದೆ. ಈ ಸರಣಿಯು ಹಲವು ಕಾರಣಗಳಿಗೆ ವಿಶೇಷ ಎನಿಸಿಕೊಂಡಿದೆ.

26
ಧರ್ಮಶಾಲಾದಲ್ಲಿಂದು ಮ್ಯಾಚ್ ನಡೆಯೋದು ಡೌಟ್

ಇನ್ನು ಎಲ್ಲವೂ ಅಂದುಕೊಂಡಂತೆ ಆಗಿದ್ದರೇ ಇಂದು ಒಂದು ಗಂಟೆಗೆ ಟಾಸ್ ನಡೆಯಬೇಕಿತ್ತು. ಆದರೆ ಮಳೆಯ ಕಾರಣದಿಂದ ಇನ್ನೂ ಟಾಸ್ ಪ್ರಕ್ರಿಯೆ ನಡೆದಿಲ್ಲ. ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಇಂದಿನ ಪಂದ್ಯ ಆಯೋಜನೆಯಾಗುವುದು ಅನುಮಾನ ಎನ್ನಲಾಗುತ್ತಿದೆ.

36
ಧರ್ಮಶಾಲಾದಲ್ಲಿಂದು 60-70% ಮಳೆ ಸುರಿಯುವ ಸಾಧ್ಯತೆ

ಹೌದು, ಧರ್ಮಶಾಲಾದ ಸ್ಥಳೀಯ ಹವಾಮಾನ ವರದಿಯ ಪ್ರಕಾರ, ಇಂದಿನ ಪಂದ್ಯ ನಡೆಯುವ ವೇಳೆ ಸರಿಸುಮಾರು 60 ರಿಂದ 70 ಪ್ರತಿಶತ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಮೊದಲ ಏಕದಿನ ಮ್ಯಾಚ್ ರದ್ದಾಗುವ ಸಾಧ್ಯತೆ ದಟ್ಟವಾಗಿದೆ.

46
ಕೊಹ್ಲಿ-ಪಾಂಡ್ಯ ಸ್ಥಾನ ತುಂಬೋರು ಯಾರು?

ಆಫ್ಘಾನಿಸ್ತಾನ ಎದುರಿನ ಸರಣಿಯಿಂದ ಈಗಾಗಲೇ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಸಮಸ್ಯೆಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ಅವರ ಸ್ಥಾನದಲ್ಲಿ ಯಾವ ಆಟಗಾರರು ಕಣಕ್ಕಿಳಿಯಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.

56
ಭಾರತ-ಆಫ್ಘಾನಿಸ್ತಾನ ಮುಖಾಮುಖಿ

ಇನ್ನು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತ ಹಾಗೂ ಆಫ್ಘಾನಿಸ್ತಾನ ತಂಡಗಳು ಒಟ್ಟು 4 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ 3-0 ಮುನ್ನಡೆ ಸಾಧಿಸಿದೆ. ಇನ್ನೊಂದು ಪಂದ್ಯ ಟೈನಲ್ಲಿ ಕೊನೆಯಾಗಿತ್ತು.

66
ಭಾರತ ಗೆಲುವಿನ ಫೇವರೇಟ್

ಈ ಸರಣಿಯಲ್ಲಿ ಮೇಲ್ನೋಟಕ್ಕೆ ಭಾರತವೇ ಗೆಲುವಿನ ಫೇವರೇಟ್ ಎನಿಸಿಕೊಂಡಿದ್ದರೂ, ಆಫ್ಘಾನಿಸ್ತಾನ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಏಕೈಕ ಟೆಸ್ಟ್‌ ಪಂದ್ಯದಲ್ಲಿ ಹೀನಾಯ ಸೋಲು ಕಂಡಿರುವ ಆಫ್ಘಾನಿಸ್ತಾನ ತಂಡವು, ಇದೀಗ ಏಕದಿನ ಸರಣಿಯಲ್ಲಿ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories