ಸಮಸ್ತಿಪುರ(ಬಿಹಾರ): ಭಾರತ ಅಂಡರ್-19 ವಿಶ್ವಕಪ್ ಹೀರೋ ವೈಭವ್ ಸೂರ್ಯವಂಶಿ 10ನೇ ಕ್ಲಾಸ್ ಎಕ್ಸಾಂಗೆ ಚಕ್ಕರ್ ಹೊಡೆಯಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಯಾಕೆ ಹೀಗೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಡೀಟೈಲ್ಸ್
ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಈ ಬಾರಿ 10ನೇ ತರಗತಿ ಪರೀಕ್ಷೆ ಬರೆಯಲಿದ್ದಾರೆಂದು ಕೆಲ ದಿನಗಳ ಹಿಂದೆ ಸುದ್ದಿಯಾಗಿತ್ತು. ಆದರೆ ತರಬೇತಿ, ಪಂದ್ಯಗಳ ಕಾರಣದಿಂದ ಅವರು ಪರೀಕ್ಷೆ ಬರೆಯಲ್ಲ ಎಂದು ವರದಿಯಾಗಿದೆ.
26
ಫೆಬ್ರವರಿ 17ರಿಂದ 10ನೇ ಕ್ಲಾಸ್ ಎಕ್ಸಾಂ ನಿಗದಿಯಾಗಿತ್ತು
ಫೆ.17ರಿಂದ ವೈಭವ್ ಪರೀಕ್ಷೆ ಎದುರಿಸಬೇಕಾಗಿತ್ತು. ಫೆಬ್ರವರಿ 17ರಿಂದ ಮಾರ್ಚ್ 11ರವರೆಗೆ ಎಕ್ಸಾಂ ನಿಗದಿಯಾಗಿತ್ತು. ಈಗಾಗಲೇ ಅವರಿಗೆ ಪ್ರವೇಶ ಪತ್ರಿಕೆ, ಪರೀಕ್ಷಾ ಕೇಂದ್ರವನ್ನೂ ನಿಗದಿಪಡಿಸಲಾಗಿತ್ತು. ಎಡಗೈ ಬ್ಯಾಟರ್ ಇದೀಗ ಪರೀಕ್ಷೆಯಿಂದ ಹಿಂದೆ ಸರಿಯಲು ತೀರ್ಮಾನಿಸಿದ್ದಾರೆ.
36
ಹಾಲ್ ಟಿಕೆಟ್ ಪಡೆದುಕೊಂಡಿದ್ದ ವೈಭವ್
ವೈಭವ್ ಸೂರ್ಯವಂಶಿ ಅವರ ಎಕ್ಸಾಂ ಫಾರಂ ಭರ್ತಿ ಮಾಡಿದ್ದರು. ಇದರ ಜತೆಗೆ ಆಡ್ಮಿಷನ್ ಕಾರ್ಡ್ ಕೂಡಾ ಅವರಿಗೆ ತಲುಪಿಸಲಾಗಿದೆ. ಅವರು ಪೋದಾರ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಎಕ್ಸಾಂ ಬರೆಯಲು ಎಕ್ಸಾಂ ಸೆಂಟರ್ ಕೂಡಾ ನಿಗದಿಯಾಗಿತ್ತು ಎಂದು ಮಾಡೆಸ್ಟಿ ಸ್ಕೂಲ್‌ನ ಡೈರೆಕ್ಟರ್ ಆರ್ದಶ್ ಕುಮಾರ್ ಪಿಂಟೋ ಹೇಳಿದ್ದಾರೆ.
ಬಿಹಾರದ ಪೋದಾರ್ ಇಂಟರ್‌ನ್ಯಾಷನಲ್ ಶಾಲೆಯ ವಿದ್ಯಾರ್ಥಿಯಾಗಿರುವ ಕ್ರಿಕೆಟಿಗನ ಬಗ್ಗೆ ಪ್ರಾಂಶುಪಾಲ ನೀಲ್ ಕಿಶೋರ್ ಮಾತನಾಡಿದ್ದು, ‘ವೈಭವ್‌ಗೆ ಯಾವುದೇ ರೀತಿಯ ವಿಶೇಷ ಉಪಚಾರ(VIP ಟ್ರೀಟ್‌ಮೆಂಟ್) ಇರುವುದಿಲ್ಲ’ ಎಂದು ಖಡಕ್ ಎಚ್ಚರಿಕೆ ನೀಡಿದ್ದರು.
56
ಕ್ರಿಕೆಟ್‌ನಲ್ಲಿ ಬ್ಯುಸಿಯಾಗಿರುವ ವೈಭವ್
ಆದರೆ ವೈಭವ್ ಕೆಲ ಸಮಯಗಳಿಂದ ಕ್ರಿಕೆಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಪಠ್ಯ ಅಭ್ಯಾಸದ ಕಡೆಗೆ ಹೆಚ್ಚಿಗೆ ಗಮನ ನೀಡುವುದಕ್ಕೆ ಸಾಧ್ಯವಾಗಿಲ್ಲ. ಹಾಗಾಗಿ ಪರೀಕ್ಷೆಗೆ ಗೈರಾಗುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
66
ಅಂಡರ್-19 ವಿಶ್ವಕಪ್ ಹೀರೋ ವೈಭವ್
ಇತ್ತೀಚೆಗಷ್ಟೇ ನಡೆದ ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ಭಾರತ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಟೂರ್ನಿಯಲ್ಲಿ ಒಂದು ಶತಕ ಹಾಗೂ 3 ಅರ್ಧಶತಕ ಸಹಿತ 439 ರನ್ ಬಾರಿಸಿ ಸರಣಿಶ್ರೇಷ್ಠ ಪ್ರಶಸ್ತಿ ಜಯಿಸಿದ್ದರು. ಇದಷ್ಟೇ ಅಲ್ಲದೇ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಲು ವೈಭವ್ ರೆಡಿಯಾಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.