ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಸೆಲೆಕ್ಟ್ ಮಾಡಿದ ಸಂಜಯ್ ಮಂಜ್ರೇಕರ್; ಕೊಹ್ಲಿ, ಪಾಂಡ್ಯಗಿಲ್ಲ ಸ್ಥಾನ..!

First Published | Apr 26, 2024, 4:13 PM IST

ಬೆಂಗಳೂರು: ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹೀಗಿರುವಾಗಲೇ ಹಲವು ಮಾಜಿ ಕ್ರಿಕೆಟಿಗರು ಬಲಿಷ್ಠ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸುತ್ತಾ ಬಂದಿದ್ದಾರೆ. ಇದೀಗ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ವೀಕ್ಷಕವಿವರಣೆಗಾರ ಸಂಜಯ್ ಮಂಜ್ರೇಕರ್ 15 ಆಟಗಾರರ ಭಾರತ ಕ್ರಿಕೆಟ್‌ ತಂಡ ಪ್ರಕಟಿಸಿದ್ದು, ಅಚ್ಚರಿಯ ರೀತಿಯಲ್ಲಿ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಅವರನ್ನೇ ಕೈಬಿಟ್ಟಿದ್ದಾರೆ. ಸಂಜಯ್ ಮಂಜ್ರೇಕರ್ ಆಯ್ಕೆ ಮಾಡಿದ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವುದನ್ನು ನೋಡೋಣ ಬನ್ನಿ
 

1. ರೋಹಿತ್ ಶರ್ಮಾ:

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಚುಟುಕು ಕ್ರಿಕೆಟ್‌ನಲ್ಲಿ ಈಗಾಗಲೇ 11 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ. ರೋಹಿತ್ ಶರ್ಮಾ ನಾಯಕನಾಗಿ ಹಾಗೂ ಆರಂಭಿಕನಾಗಿ ಮಿಂಚಬೇಕಿದೆ.

2. ಯಶಸ್ವಿ ಜೈಸ್ವಾಲ್:

ಪ್ರತಿಭಾನ್ವಿತ ಎಡಗೈ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್, ಮುಂಬೈ ಇಂಡಿಯನ್ಸ್ ಎದುರು ಭರ್ಜರಿ ಶತಕ ಸಿಡಿಸಿ ಲಯಕ್ಕೆ ಮರಳಿದ್ದು, ರೋಹಿತ್ ಜತೆ  ಇನಿಂಗ್ಸ್ ಆರಂಭಿಸಲಿ ಎಂದು ಮಂಜ್ರೇಕರ್ ಹೇಳಿದ್ದಾರೆ.
 

Tap to resize

3. ಸಂಜು ಸ್ಯಾಮ್ಸನ್:

ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್, ಸದ್ಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟರ್‌ಗೆ ಮಂಜ್ರೇಕರ್ ತಂಡದಲ್ಲಿ ಮಣೆಹಾಕಿದ್ದಾರೆ.

4 ಸೂರ್ಯಕುಮಾರ್ ಯಾದವ್:

ಭಾರತದ ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್ ಕೂಡಾ ಭಾರತ ತಂಡದಲ್ಲಿ ಸ್ಥಾನ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಫಿಟ್ನೆಸ್ ಸಮಸ್ಯೆಯಿಂದ ಐಪಿಎಲ್‌ನ ಆರಂಭಿಕ ಕೆಲ ಪಂದ್ಯಗಳಿಂದ ಹೊರಗುಳಿದಿದ್ದ ಸೂರ್ಯ, ಇದೀಗ ಭರ್ಜರಿಯಾಗಿಯೇ ಫಾರ್ಮ್‌ಗೆ ಮರಳಿದ್ದಾರೆ.
 

5. ರಿಷಭ್ ಪಂತ್:

ಅಪಘಾತದಿಂದಾಗಿ ಒಂದು ವರ್ಷಗಳ ಕಾಲ ಕ್ರಿಕೆಟ್‌ನಿಂದ ಹೊರಗುಳಿದಿದ್ದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಐಪಿಎಲ್‌ ಮೂಲಕ ಭರ್ಜರಿಯಾಗಿಯೇ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

6. ಕೆ ಎಲ್ ರಾಹುಲ್:

ಸಂಜಯ್ ಮಂಜ್ರೇಕರ್ ಆಯ್ಕೆ ಮಾಡಿದ ತಂಡದಲ್ಲಿ ಕನ್ನಡಿಗ ವಿಕೆಟ್ ಕೀಪರ್ ಬ್ಯಾಟರ್ ಕೆ ಎಲ್ ರಾಹುಲ್‌ಗೂ ಮಣೆ ಹಾಕಿದ್ದಾರೆ. ಲಖನೌ ತಂಡದ ನಾಯಕ ರಾಹುಲ್ ಮೂರನೇ ವಿಕೆಟ್ ಕೀಪರ್ ಬ್ಯಾಟರ್ ಎನಿಸಿದ್ದಾರೆ.
 

7. ರವೀಂದ್ರ ಜಡೇಜಾ:

ಟೀಂ ಇಂಡಿಯಾದ ಮತ್ತೋರ್ವ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಜಾದೂ ಈ ಬಾರಿಯ ಐಪಿಎಲ್‌ನಲ್ಲೂ ಮುಂದುವರೆಸಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಜಡ್ಡೂ ತಂಡದ ಆಸ್ತಿ ಎಂದರೆ ಅತಿಶಯೋಕ್ತಿಯಾಗಲಾರದು.
 

8. ಕೃನಾಲ್ ಪಾಂಡ್ಯ:

ಮಂಜ್ರೇಕರ್ ಆಯ್ಕೆ ಮಾಡಿದ ತಂಡದಲ್ಲಿ ಅಚ್ಚರಿ ಎನ್ನುವಂತೆ ಹಾರ್ದಿಕ್ ಪಾಂಡ್ಯ ಅವರನ್ನು ಕೈಬಿಟ್ಟು ಸಹೋದರ ಕೃನಾಲ್‌ ಪಾಂಡ್ಯ ಅವರನ್ನು ಆಯ್ಕೆ ಮಾಡಿದ್ದಾರೆ. ಕೃನಾಲ್ ಪಾಂಡ್ಯ ಬೌಲಿಂಗ್ ಆಲ್ರೌಂಡರ್ ಆಗಿದ್ದಾರೆ.
 

9. ಯುಜುವೇಂದ್ರ ಚಹಲ್:

17ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಅತಿ ಅಪಾಯಕಾರಿ ಸ್ಪಿನ್ನರ್ ಎನಿಸಿಕೊಂಡಿರುವ ಚಹಲ್, ಪರ್ಪಲ್ ಕ್ಯಾಪ್‌ನಲ್ಲಿ ಬುಮ್ರಾಗೆ ಸಡ್ಡು ಹೊಡೆಯುತ್ತಿದ್ದು, ಚುಟುಕು ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಮೊದಲ ಆಯ್ಕೆಯ ಸ್ಪಿನ್ನರ್ ಆಗಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

10.  ಕುಲ್ದೀಪ್ ಯಾದವ್:

ಸದ್ಯ ಒಳ್ಳೆಯ ಫಾರ್ಮ್‌ನಲ್ಲಿರುವ ಲೆಗ್‌ಸ್ಪಿನ್ನರ್ ಕುಲ್ದೀಪ್ ಯಾದವ್, ಈಗಾಗಲೇ ಈ ಐಪಿಎಲ್ ಟೂರ್ನಿಯಲ್ಲಿ ಮೊದಲ 6 ಪಂದ್ಯಗಳನ್ನಾಡಿ 12 ವಿಕೆಟ್ ಕಬಳಿಸಿದ್ದಾರೆ. ಕುಲ್ದೀಪ್  ಅವರಿಗೂ ಮಂಜ್ರೇಕರ್ ತಮ್ಮ ತಂಡದಲ್ಲಿ ಮಣೆ ಹಾಕಿದ್ದಾರೆ.
 

11. ಜಸ್ಪ್ರೀತ್ ಬುಮ್ರಾ:

ಭಾರತದ ನಂ.1 ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಸದ್ಯ ಐಪಿಎಲ್‌ನಲ್ಲೂ ಅದ್ಭುತ ಪ್ರದರ್ಶನ ತೋರಿ ಪರ್ಪಲ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಬುಮ್ರಾ ಭಾರತ ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ.
 

12. ಮೊಹಮ್ಮದ್ ಸಿರಾಜ್:

ಮೊಹಮ್ಮದ್ ಸಿರಾಜ್, ಈ ಬಾರಿಯ ಐಪಿಎಲ್‌ನಲ್ಲಿ ಲಯ ಕಳೆದುಕೊಂಡಿದ್ದಾರೆ. ಆದರೆ ಚುಟುಕು ಕ್ರಿಕೆಟ್‌ನಲ್ಲಿ ಸಾಕಷ್ಟು ಅನುಭವಿ ಹೊಂದಿರುವ ಸಿರಾಜ್‌ಗೆ  ಮಂಜ್ರೇಕರ್ ತಮ್ಮ ನೆಚ್ಚಿನ ತಂಡದಲ್ಲಿ ಮಣೆ ಹಾಕಿದ್ದಾರೆ.
 

13. ಆವೇಶ್ ಖಾನ್:

ಐಪಿಎಲ್‌ನಲ್ಲಿ ಶಿಸ್ತುಬದ್ದ ದಾಳಿ ನಡೆಸುತ್ತಿರುವ ಬಲಗೈ ವೇಗಿ ಆವೇಶ್ ಖಾನ್‌ಗೂ ಸಂಜಯ್ ಮಂಜ್ರೇಕರ್ ತಮ್ಮ ಕನಸಿನ ಟಿ20 ತಂಡದಲ್ಲಿ ಸ್ಥಾನ ನೀಡಿದ್ದಾರೆ.
 

14. ಮಯಾಂಕ್ ಯಾದವ್:

ಲಖನೌ ಸೂಪರ್ ಜೈಂಟ್ಸ್ ತಂಡದ ಮಾರಕ ವೇಗಿ ಮಯಾಂಕ್ ಯಾದವ್ ತಮ್ಮ ವೇಗದ ದಾಳಿಯ ಮೂಲಕವೇ ಗಮನ ಸೆಳೆದಿದ್ದು, ಮಂಜ್ರೇಕರ್ ಯುವ ವೇಗಿಗೆ ತಂಡದಲ್ಲಿ ಮಣೆ ಹಾಕಿದ್ದಾರೆ.
 

15. ಹರ್ಷಿತ್ ರಾಣಾ:

ಕೋಲ್ಕತಾ ನೈಟ್ ರೈಡರ್ಸ್ ತಂಡದ ಯುವ ವೇಗಿ ಹರ್ಷಿತ್ ರಾಣಾ ಕೂಡಾ ಈ ಬಾರಿಯ ಐಪಿಎಲ್‌ನಲ್ಲಿ ಕರಾರುವಕ್ಕಾದ ದಾಳಿ ನಡೆಯುತ್ತಿದ್ದಾರೆ. ಆವೇಶ್ ಖಾನ್ ಅವರಂತ ಆಟಗಾರರನ್ನು ಕೈಬಿಟ್ಟು ಹರ್ಷಿತ್ ರಾಣಾಗೆ ಮಂಜ್ರೇಕರ್ ತಂಡದಲ್ಲಿ ಸ್ಥಾನ ನೀಡಿದ್ದಾರೆ.
 

Latest Videos

click me!