ಕ್ರಿಕೆಟಿಗ ಸಂದೀಪ್ ಶರ್ಮಾ ಪತ್ನಿ ನಮ್ಮ ಬೆಂಗಳೂರಿನವರು..! ಓದಿದ್ದು ಇದೇ ಕಾಲೇಜ್

First Published | Apr 23, 2024, 4:03 PM IST

ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಭರ್ಜರಿಯಾಗಿಯೇ ಸಾಗುತ್ತಿದೆ. ಇದೀಗ ಮುಂಬೈ ಇಂಡಿಯನ್ಸ್ ಎದುರು ರಾಜಸ್ಥಾನ ರಾಯಲ್ಸ್ ಪರ ವೇಗಿ ಸಂದೀಪ್ ಶರ್ಮಾ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ನಾವಿಂದು ಸಂದೀಪ್ ಶರ್ಮಾ ಅವರ ಬ್ಯೂಟಿಫುಲ್ ಪತ್ನಿಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ರಾಯಲ್ಸ್ ಪರ ಸಂದೀಪ್ ಶರ್ಮಾ ಶಿಸ್ತುಬದ್ದ ದಾಳಿ ನಡೆಸುವ ಮೂಲಕ 5 ವಿಕೆಟ್ ಕಬಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಸಂದೀಪ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ಅಪಾಯಕಾರಿ ಬ್ಯಾಟರ್‌ಗಳಾದ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್ ಹಾಗೂ ಗೆರಾಲ್ಡ್ ಕೋಟ್ಜೀ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದರು.

Tap to resize

ಸಂದೀಪ್ ಶರ್ಮಾ ಮುಂಬೈ ಇಂಡಿಯನ್ಸ್ ಎದುರು ಕೇವಲ 18 ರನ್ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಈ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ತಾವಾಡಿದ ಮೊದಲ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಇನ್ನು ಸಂದೀಪ್ ಶರ್ಮಾ ಅವರ ಯಶಸ್ಸಿನ ನಿಜವಾದ ಶಕ್ತಿ ಅವರ ಪತ್ನಿ ತಾಷಾ ಸಾತ್ವಿಕ್. ನಾವಿಂದು ಸಂದೀಪ್ ಶರ್ಮಾ ಅವರ ಪತ್ನಿ ಯಾರು? ಅವರ ಲವ್ ಸ್ಟೋರಿಯ ಬಗ್ಗೆ ತಿಳಿಯೋಣ ಬನ್ನಿ.

ಸಂದೀಪ್ ಶರ್ಮಾ ಅವರ ಪತ್ನಿ ತಾಷಾ ಸಾತ್ವಿಕ್ ಓರ್ವ ವೃತ್ತಿಪರ ಆಭರಣ ವಿನ್ಯಾಸಕಿಯಾಗಿದ್ದಾರೆ. ತಾಷಾ ಸಾತ್ವಿಕ್ ಅಭರಣಗಳ ಡಿಸೈನ್ ಮಾಡುವುದು ಮಾತ್ರವಲ್ಲದೇ, ಬ್ಲಾಗಿಂಗ್ ಹಾಗೂ ಡಿಟಿಟಲ್ ಮಾರ್ಕೆಟಿಂಗ್ ಹಾಗೂ ಉದ್ಯಮಿ ಕೂಡಾ ಹೌದು.

ಇನ್ನು ತಾಷಾ ಸಾತ್ವಿಕ್ ಅವರು ಮೂಲತಃ ನಮ್ಮ ಬೆಂಗಳೂರಿನವರು ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. ತಾಷಾ ಬೆಂಗಳೂರಿನ ಬಿಷಪ್ ಕಾಟನ್ ಸ್ಕೂಲ್‌ನಲ್ಲಿ ವಿದ್ಯಾಭಾಸ ಮಾಡಿದ್ದಾರೆ.

ಇನ್ನು ತಾಷಾ ಸಾತ್ವಿಕ್ 2014ರಲ್ಲಿ ನ್ಯಾಷನಲ್ ಇನ್ಸ್‌ಟಿಟ್ಯೂಟ್‌ ಆಫ್ ಫ್ಯಾಷನ್ ಟೆಕ್ನಾಲಜಿಯಲ್ಲಿ ಜ್ಯುವೆಲರಿ ಡಿಸೈನಿಂಗ್‌ನಲ್ಲಿ ಪದವಿ ಪಡೆದುಕೊಂಡರು. 2013ರಲ್ಲಿ ತಾಷಾ ಧವನಂ ಜ್ಯುವೆಲರ್ಸ್‌ನಲ್ಲಿ ಇಂಟರ್ನಿಯಾಗಿ ಕೆಲಸ ಮಾಡಿದರು.

ಇನ್ನು ಇದಾದ ಬಳಿಕ ಟಾಟಾ ಕಂಪನಿಯ ಜ್ಯುವೆಲರಿ ಉದ್ದಿಮೆಯಾಗಿರು ತನಿಷ್ಕ್ ಜ್ಯುವೆಲರ್ಸ್‌ನಲ್ಲೂ ತಾಷಾ ಸಾತ್ವಿಕ್ 6 ತಿಂಗಳ ಇಂಟರ್ನ್‌ಶಿಪ್ ಪೂರ್ಣಗೊಳಿಸಿದರು. 

ಈ ನಡುವೆ ತಾಷಾ ಸಾತ್ವಿಕ್ ಹಾಗೂ ಕ್ರಿಕೆಟಿಗ ಸಂದೀಪ್ ಶರ್ಮಾ ನಡುವೆ ಗೆಳೆತನ ಬೆಳೆಯುತ್ತದೆ. ಸಾಕಷ್ಟು ಸಮಯಗಳ ಕಾಲ ಈ ಜೋಡಿ ಡೇಟಿಂಗ್ ನಡೆಸಿದರೂ, ಈ ವಿಚಾರವನ್ನು ಎಲ್ಲೂ ಬಹಿರಂಗ ಪಡಿಸಿರಲಿಲ್ಲ.

ಇನ್ನು ಜೋಡಿ 2018ರಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡರು. ಇದಾದ ಬಳಿಕ ಸಂದೀಪ್ ಶರ್ಮಾ ಹಾಗೂ ತಾಷಾ ಸಾತ್ವಿಕ್ 2021ರ ಆಗಸ್ಟ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಸಂದೀಪ್ ಶರ್ಮಾ ಪತ್ನಿ ತಾಷಾ ಸಾತ್ವಿಕ್ ಕಳೆದ ವರ್ಷವಷ್ಟೇ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಸಂದೀಪ್ ಶರ್ಮಾ ಹಾಗೂ ತಾಷಾ ಸಾತ್ವಿಕ್ ತಂದೆ-ತಾಯಿಯ ಸುಖವನ್ನು ಅನುಭವಿಸುತ್ತಿದ್ದಾರೆ.

ತಾಷಾ ಸಾತ್ವಿಕ್ ಮೂಲತಃ ಬೆಂಗಳೂರಿನವರಾದರೇ, ಸಂದೀಪ್ ಶರ್ಮಾ ಪಂಜಾಬ್ ಮೂಲದ ಪಟಿಯಾಲದವರು. ಆದರೂ ಈ ಜೋಡಿ ಅನ್ಯೂನ್ಯವಾದ ದಾಂಪತ್ಯ ಜೀವನವನ್ನು ನಡೆಸುತ್ತಾ ಬಂದಿದ್ದಾರೆ.

Latest Videos

click me!