ಸಾರಾ ಜತೆ ಗಿಲ್‌ ಬ್ರೇಕಪ್‌, ಸ್ಪಾನಿಷ್‌ ಹುಡ್ಗಿಯೊಂದಿಗೆ ಡೇಟಿಂಗ್‌, ಮ್ಯಾಚ್‌ ನೋಡಲು ಬಂದ ಕ್ಯೂಟ್‌ ಬೆಡಗಿ ಯಾರು?

First Published | Apr 22, 2024, 6:05 PM IST

ಭಾರತೀಯ ಕ್ರಿಕೆಟಿಗ ಶುಭ್‌ಮನ್ ಗಿಲ್ ಪ್ರಸ್ತುತ ಐಪಿಎಲ್ 2024 ರ ಪಂದ್ಯಾವಳಿಯಲ್ಲಿ ತಮ್ಮ ಪ್ರದರ್ಶನ ತೋರುತ್ತಿದ್ದಾರೆ. ಪ್ರತೀ ಬಾರಿ ತನ್ನ ವೈಯಕ್ತಿಕ ವಿಚಾರಕ್ಕೆ ಸುದ್ದಿಯಾಗುವ ಶುಭ್‌ ಮನ್‌ ಈಗ ಸಾರಾ ಜೊತೆ ಬ್ರೇಕಪ್‌ ಬಳಿಕ ಸ್ಪಾನೀಷ್ ನಟಿಯೊಂದಿಗೆ ಡೇಟಿಂಗ್‌ನಲ್ಲಿದ್ದಾರೆಂದು ಸುದ್ದಿಯಾಗಿದೆ.

ಭಾರತೀಯ ಕ್ರಿಕೆಟ್ ತಂಡದ ಯುವ  ಆಟಗಾರ ಶುಭಮನ್ ಗಿಲ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಪುತ್ರಿ  ಸಾರಾ ತೆಂಡೂಲ್ಕರ್‌ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿ ಸಾಕಷ್ಟು ಹರಡಿತ್ತು. ಇಬ್ಬರೂ ಸಾಕಷ್ಟು ಕಡೆ ಒಟ್ಟಿಗೇ ಕಾಣಿಸಿಕೊಂಡಿದ್ದರು. 

ಇದಾದ ಬಳಿಕ ಇಬ್ಬರೂ ಬೇರೆಯಾಗಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಈ ಸುದ್ದಿ ಹರಡಲು ಕಾರಣ  ಡೇಟಿಂಗ್ ಆ್ಯಪ್‌ನಲ್ಲಿ ಶುಭಮನ್ ಪ್ರೊಫೈಲ್ ಹೊಂದಿರುವುದು ನೆಟ್ಟಿಗರಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಮಾತ್ರವಲ್ಲ ಸಾರಾಗೆ ಬೇರೆ ಬಾಯ್‌ ಫ್ರೆಂಡ್‌ ಇದ್ದಾನೆ ಗಿಲ್ ಅವರ ಆತ್ಮೀಯ ಸ್ನೇಹಿತ ಖುಷ್ಪ್ರೀತ್ ಸಿಂಗ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿತ್ತು.

Tap to resize

ಇದೀಗ ಶುಭ್‌ಮನ್ ಗಿಲ್ ಬ್ರೇಕಪ್‌ ಬಳಿಕ  ಸ್ಪ್ಯಾನಿಷ್ ಹುಡುಗಿಯನ್ನು ಪ್ರೀತಿಸುತ್ತಿದ್ದಾರೆ ಎಂದು ಸುದ್ದಿ ಹಬ್ಬಿದೆ. ಕ್ರಿಕೆಟಿಗ ಗಿಲ್ ಮಾರಿಯಾ ಅರೋಯೋಗ್ ಎಂಬ ಸ್ಪ್ಯಾನಿಷ್ ಹುಡುಗಿಯೊಂದಿಗೆ ಡೇಟಿಂಗ್ ಪ್ರಾರಂಭಿಸಿದ್ದಾರೆ ಎಂದು ಸುದ್ದಿಯಾಗಿದೆ.
 

ಗುಜರಾತ್ ಟೈಟನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ ನೋಡಲು ಗಿಲ್ ಮಾರಿಯಾ ಅರೋಯೋಗ್ ಬಂದಿದ್ದಳು ಎಂದು ಮೀಮ್ಸ್, ಟ್ರೋಲ್‌ ಪೇಜ್‌ಗಳಲ್ಲಿ ಗುಲ್ಲೆದ್ದಿದೆ. ಪಂದ್ಯವನ್ನು ವೀಕ್ಷಿಸುತ್ತಿರುವ ಹುಡುಗಿಯೊಬ್ಬಳ ವಿಡಿಯೋ ವೈರಲ್ ಆಗಿದೆ.

ಇನ್ನು ಆ ಹುಡುಗಿ ಹಾಲಿವುಡ್‌ ನಟಿ ಅನಾ ಡಿ ಅರ್ಮಾಸ್ ಎಂದು ಸಾಕಷ್ಟು ಮೀಮ್ಸ್ ಗಳು ಹರಿದಾಡುತ್ತಿದೆ. ಆದರೆ ಹಾಲಿವುಡ್‌ ನಟಿ ಅನಾ ಡಿ ಅರ್ಮಾಸ್ ನಂತೆಯೇ ಕಾಣುವ ಮತ್ತೊಬ್ಬಳು ಹುಡುಗಿ ಪಂದ್ಯ ನೋಡಲು ಬಂದಿರುವುದು ಎಂದು ಬಳಿಕ ಸ್ಪಷ್ಟವಾಗಿದೆ.
 

ಇಷ್ಟೆಲ್ಲ ಸುದ್ದಿ ಹರಡಿರುವುದು ಗುಜರಾತ್ ಟೈಟನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಗಳಲ್ಲಿ ಈ ಹುಡುಗಿ ಕಾಣಿಸಿಕೊಂಡಿರುವ ಬಗ್ಗೆ. ನಿಜವಾಗಲೂ ಆಕೆ ಗಿಲ್ ಪ್ರಿಯತಮೆ ಮಾರಿಯಾ ಅರೋಯೋಗ್ ಅಥವಾ ಪಂದ್ಯ ವೀಕ್ಷಿಸಲು ಬಂದು ಕ್ರಿಕೆಟ್‌ ಅಭಿಮಾನಿಯೇ ಎಂಬುದು ಸ್ಪಷ್ಟವಾಗಿಲ್ಲ.

ಇನ್ನು ಇದಕ್ಕೂ ಮುನ್ನ ಸಾರಾ ಅಲಿಖಾನ್‌ ಜೊತೆ ಗಿಲ್ ಡೇಟಿಂಗ್ ನಲ್ಲಿ ಇದ್ದಾರೆ ಎಂದು ಸುದ್ದಿಯಾಗಿತ್ತು. ಒಟ್ಟಿಗೆ ಕಾಣಿಸಿಕೊಂಡಿದ್ದರು ಕೂಡ. ಆದರೆ ಕಾಫಿ ವಿಥ್ ಕರಣ್‌ ಶೋ ನಲ್ಲಿ ಸಾರಾ ಅಲಿಖಾನ್ ಡೇಟಿಂಗ್ ಬಗ್ಗೆ ಸ್ಪಷ್ಟನೆ ನೀಡಿ. ಗಿಲ್‌ ಡೇಟಿಂಗ್ ನಲ್ಲಿರುವುದು ನಿಜ. ಆದರೆ ಸಾರಾ ಅನ್ನುವ ಹೆಸರು ಕೂಡ ನಿಜ. ನನ್ನ ಹೆಸರನ್ನು ತಪ್ಪಾಗಿ ಅಥೈಸಿಕೊಳ್ಳಲಾಗುತ್ತಿದೆ ಎಂದು ಸಾರಾ ತೆಂಡೂಲ್ಕರ್ ಜತೆಗೆ ಡೇಟಿಂಗ್‌ ನಲ್ಲಿರುವ ಬಗ್ಗೆ ಹಿಂಟ್‌ ಕೊಟ್ಟಿದ್ದರು.

ಈ ಹಿಂದೆ ತನ್ಮಯ್ ಭಟ್ ಹೋಸ್ಟ್ ಮಾಡಿದ ಸಂದರ್ಶನದಲ್ಲಿ ಗಿಲ್ ನಾನಿನ್ನೂ ಸಿಂಗಲ್‌ ಎಂದಿದ್ದರು. ಆಗ ಸಾರಾ-ಗಿಲ್‌ ಬ್ರೇಕಪ್‌ ಬಗ್ಗೆ ಸುದ್ದಿಯಾಗಿತ್ತು.  ಸಾರಾ ಜೊತೆ ಬ್ರೇಕಪ್‌, ಸ್ಪಾನಿಷ್‌ ಹುಡುಗಿ ಡೇಟಿಂಗ್  ಈ ಎಲ್ಲಾ ರೂಮರ್‌ ಗಳಿಗೆ ಸ್ವತಃ ಕ್ರಿಕೆಟಿಗ ಶುಭ್‌ಮನ್ ಗಿಲ್ ಉತ್ತರ ಕೊಡುವವರೆಗೆ ಇಂತಹ ರೂಮರ್‌ ಗಳಿಗೆ ಕಮ್ಮಿ ಇಲ್ಲ.

Latest Videos

click me!