1. ರೋಹಿತ್ ಶರ್ಮಾ
ನಾಯಕನಾಗಿ ಅತ್ಯಂತ ಯಶಸ್ವಿಯಾಗಿ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್ ಶರ್ಮಾ, ಬ್ಯಾಟಿಂಗ್‌ನಲ್ಲಿ ದೊಡ್ಡ ಮೊತ್ತ ಬಾರಿಸಲು ವಿಫಲರಾಗಿದ್ದು, ಕೊನೆಯ ಪಂದ್ಯದಲ್ಲಿ ಅಬ್ಬರಿಸಲು ಕಾಯುತ್ತಿದ್ದಾರೆ.
2. ಋತುರಾಜ್ ಗಾಯಕ್ವಾಡ್
ಮಹಾರಾಷ್ಟ್ರ ಮೂಲದ ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಗಾಯಕ್ವಾಡ್ ವಿಂಡೀಸ್ ಎದುರಿನ ಪಂದ್ಯದಲ್ಲಿ ಬೆಂಚ್ ಕಾಯಿಸಿದ್ದು, ಇದೀಗ ಮೂರನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಜತೆ ಇನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತ ಎನಿಸಿದೆ.
3. ಇಶಾನ್ ಕಿಶನ್
ಆರಂಭಿಕನಾಗಿ ಇಶಾನ್ ಕಿಶನ್ ಮೊದಲೆರಡು ಪಂದ್ಯಗಳಲ್ಲಿ ವಿಫಲವಾಗಿದ್ದರೂ ಸಹಾ, ಪಂತ್ ವಿಶ್ರಾಂತಿ ಪಡೆದಿರುವುದರಿಂದ ಕಿಶನ್ ಇಂದಿನ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.
4. ಸೂರ್ಯಕುಮಾರ್ ಯಾದವ್
ಟೀಂ ಇಂಡಿಯಾ ಪ್ರತಿಭಾನ್ವಿತ ಬ್ಯಾಟರ್ ಸೂರ್ಯಕುಮಾರ್, ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಳ್ಳುತ್ತಿದ್ದು, ಮಧ್ಯಮ ಕ್ರಮಾಂಕದಲ್ಲಿ ನಂಬಿಗಸ್ಥ ಬ್ಯಾಟರ್ ಎನಿಸಿಕೊಳ್ಳುವತ್ತ ದಿಟ್ಟ ಹೆಜ್ಜೆಯಿಡುತ್ತಿದ್ದಾರೆ.
5. ಶ್ರೇಯಸ್ ಅಯ್ಯರ್
ಕೊನೆಯ ಪಂದ್ಯದಿಂದ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿರುವುದರಿಂದ ಆ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ. ಮೊದಲೆರಡು ಟಿ20 ಪಂದ್ಯಗಳಿಂದ ಶ್ರೇಯಸ್ ಅಯ್ಯರ್ ಹೊರಗುಳಿದಿದ್ದರು.
6. ವೆಂಕಟೇಶ್ ಅಯ್ಯರ್
ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯನ್ನು ಅವಕಾಶ ಎನ್ನುವಂತೆ ಬಳಸಿಕೊಳ್ಳುತ್ತಿರುವ ವೆಂಕಟೇಶ್ ಅಯ್ಯರ್, ಮ್ಯಾಚ್ ಫಿನಿಶರ್ ಆಗುವತ್ತ ದಿಟ್ಟ ಹೆಜ್ಜೆ ಹಾಕುತ್ತಿದ್ದಾರೆ. ಇದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.
7. ಶಾರ್ದೂಲ್ ಠಾಕೂರ್
ಮೊದಲೆರಡು ಪಂದ್ಯಗಳಲ್ಲಿ ದೀಪಕ್ ಚಹರ್ ಕಣಕ್ಕಿಳಿದಿದ್ದರು. ಆದರೆ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿಲ್ಲ. ಹೀಗಾಗಿ ದೀಪಕ್ ಚಹರ್‌ಗೆ ವಿಶ್ರಾಂತಿ ನೀಡಿ ಶಾರ್ದೂಲ್ ಠಾಕೂರ್‌ಗೆ ತಂಡದಲ್ಲಿ ಅವಕಾಶ ದೊರೆಯುವ ಸಾಧ್ಯತೆಯಿದೆ.
(photo source- instagram)
8. ಹರ್ಷಲ್ ಪಟೇಲ್
ಟೀಂ ಇಂಡಿಯಾ ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿರುವ ಹರ್ಷಲ್ ಪಟೇಲ್ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಮೊದಲೆರಡು ಪಂದ್ಯದಲ್ಲಿ ಹರ್ಷಲ್ ಪಟೇಲ್ ಮೊನಚಾದ ದಾಳಿ ನಡೆಸಿ ಗಮನ ಸೆಳೆದಿದ್ದಾರೆ.
9. ಭುವನೇಶ್ವರ್ ಕುಮಾರ್
ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್, ಎರಡನೇ ಪಂದ್ಯದ ನಿರ್ಣಾಯಕ ಘಟ್ಟದಲ್ಲಿ ಮಿಂಚಿನ ಬೌಲಿಂಗ್ ನಡೆಸುವ ಮೂಲಕ ಗೆಲುವು ಭಾರತದತ್ತ ವಾಲುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇಂದು ಮತ್ತೊಮ್ಮೆ ಭುವಿ ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ.
10. ಯುಜುವೇಂದ್ರ ಚಹಲ್
ಟೀಂ ಇಂಡಿಯಾ ಅನುಭವಿ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್, ಅಗತ್ಯ ಸಂದರ್ಭದಲ್ಲಿ ವಿಕೆಟ್ ಕಬಳಿಸುವ ಮೂಲಕ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಇದೀಗ ಮೂರನೇ ಪಂದ್ಯದಲ್ಲೂ ತಮ್ಮ ಫಾರ್ಮ್ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ.
11. ರವಿ ಬಿಷ್ಣೋಯ್
ಭಾರತ ಕ್ರಿಕೆಟ್ ತಂಡದ ಯುವ ಪ್ರತಿಭಾನ್ವಿತ ಲೆಗ್ ಸ್ಪಿನ್ನರ್ ಬಿಷ್ಣೋಯ್ ಸ್ಥಿರ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದು, ಇದೀಗ ಕೆರಿಬಿಯನ್ನರನ್ನು ಕೊನೆಯ ಪಂದ್ಯದಲ್ಲೂ ಕಾಡಲು ಸಜ್ಜಾಗಿದ್ದಾರೆ.