ಜೊಹಾನ್ಸ್‌ಬರ್ಗ್: ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ಕ್ರಿಕೆಟ್ ತಂಡಗಳ ನಡುವಿನ ಫ್ರೀಡಂ ಟ್ರೋಫಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಡಿಸೆಂಬರ್ 26ರಿಂದ ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಅರಂಭವಾಗಲಿದೆ. ಈ ಟೆಸ್ಟ್ ಸರಣಿಯಲ್ಲಿ ಉಭಯ ತಂಡದ ಆಟಗಾರರು ಕೆಲವು ಮೈಲಿಗಲ್ಲುಗಳನ್ನು ನೆಡಲು ಸಜ್ಜಾಗಿದ್ದಾರೆ. ಅಷ್ಟಕ್ಕೂ ಯಾವ ಕ್ರಿಕೆಟಿಗರು ಏನೆಲ್ಲಾ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
1. ಎರಡು ಸಾವಿರ ಟೆಸ್ಟ್ ರನ್ ಮೇಲೆ ಕಣ್ಣಿಟ್ಟಿದ್ದಾರೆ ಏಯ್ಡನ್ ಮಾರ್ಕ್‌ರಮ್: ದಕ್ಷಿಣ ಆಫ್ರಿಕಾದ ಬ್ಯಾಟರ್ ಏಯ್ಡನ್ ಮಾರ್ಕ್‌ರಮ್ ಇದುವರೆಗೂ ಟೆಸ್ಟ್ ಕ್ರಿಕೆಟ್‌ನಲ್ಲಿ 1,824 ರನ್ ಬಾರಿಸಿದ್ದಾರೆ.
210
ಇನ್ನು ಮಾರ್ಕ್‌ರಮ್ ಕೇವಲ 176 ರನ್ ಬಾರಿಸಿದರೆ, 2,000 ರನ್ ಬಾರಿಸಿದ ಬ್ಯಾಟರ್‌ಗಳ ಕ್ಲಬ್ ಸೇರಲಿದ್ದಾರೆ. ಇದರ ಜತೆಗೆ ರೆಡ್ ಬಾಲ್ ಕ್ರಿಕೆಟ್‌ನಲ್ಲಿ 2 ರನ್ ಬಾರಿಸಿದ ದಕ್ಷಿಣ ಆಫ್ರಿಕಾದ 32ನೇ ಬ್ಯಾಟರ್ ಎನ್ನುವ ಕೀರ್ತಿಗೆ ಮಾರ್ಕ್‌ರಮ್ ಭಾಜನರಾಗಲಿದ್ದಾರೆ
310
2. ಇನ್ನೂರು ವಿಕೆಟ್ ಕ್ಲಬ್ ಸೇರಲು ತುದಿಗಾಲಿನಲ್ಲಿ ನಿಂತ ವೇಗಿ ಮೊಹಮ್ಮದ್ ಶಮಿ
ಟೀಂ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು. ಇದೀಗ ಹರಿಣಗಳ ನಾಡಿನಲ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದು, 200 ವಿಕೆಟ್‌ಗಳ ಕ್ಲಬ್ ಸೇರಲು ಶಮಿ ಕಾತರರಾಗಿದ್ದಾರೆ.
410
ಸದ್ಯ ಮೊಹಮ್ಮದ್ ಶಮಿ 195 ಟೆಸ್ಟ್ ವಿಕೆಟ್ ಕಬಳಿಸಿದ್ದು, ಇನ್ನು ಕೇವಲ 5 ವಿಕೆಟ್ ಪಡೆದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ 200+ ವಿಕೆಟ್ ಕಬಳಿಸಿದ ಭಾರತದ 11ನೇ ಬೌಲರ್ ಎನ್ನುವ ಗೌರವಕ್ಕೆ ಬಲಗೈ ವೇಗಿ ಪಾತ್ರರಾಗಲಿದ್ದಾರೆ.
510
3. ವಿಕೆಟ್ ಕೀಪರ್ ಪಂತ್‌ಗೂ ಬೇಕಿದ ಮೂರು ಬಲಿ..!
ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಕೂಡಾ ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು. ಇದೀಗ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಗೆ ತಂಡ ಕೂಡಿಕೊಂಡಿದ್ದಾರೆ.
610
ಪಂತ್ ಇನ್ನು ಕೇವಲ 3 ಬಲಿ ಪಡೆದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ 100 ಬಲಿ ಪಡೆದ ಭಾರತದ 6ನೇ ವಿಕೆಟ್ ಕೀಪರ್ ಎನಿಸಿಕೊಳ್ಳಲಿದ್ದಾರೆ. ಈ ಮೊದಲು ಎಂ.ಎಸ್. ಧೋನಿ. ಸಯ್ಯದ್ ಕಿರ್ಮಾನಿ, ಕಿರಣ್ ಮೋರೆ, ನಯನ್ ಮೋಂಗಿಯಾ ಹಾಗೂ ವೃದ್ದಿಮಾನ್ ಸಾಹ 100+ ಬಲಿ ಪಡೆದಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಅಜಿಂಕ್ಯ ರಹಾನೆ, ಕಳಫೆ ಬ್ಯಾಟಿಂಗ್ ಪ್ರದರ್ಶನದ ಮೂಲಕ ಉಪನಾಯಕ ಪಟ್ಟವನ್ನು ಕಳೆದುಕೊಂಡಿದ್ದಾರೆ. ಆದರೆ ಇದೀಗ ರಹಾನೆ ಫೀಲ್ಡಿಂಗ್‌ನಲ್ಲಿ ಸೆಂಚುರಿ ಬಾರಿಸಲು ಸಜ್ಜಾಗಿದ್ದಾರೆ.
810
ಆದರೆ ಫೀಲ್ಡಿಂಗ್‌ನಲ್ಲಿ ಅಜಿಂಕ್ಯ ರಹಾನೆ ಇನ್ನು ಮೂರು ಕ್ಯಾಚ್ ಪಡೆದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ 100 ಕ್ಯಾಚ್ ಪಡೆದ ಭಾರತದ ಆರನೇ ಕ್ಷೇತ್ರರಕ್ಷಕ ಎನ್ನುವ ಕೀರ್ತಿಗೆ ಮುಂಬೈ ಮೂಲದ ಆಟಗಾರ ಪಾತ್ರರಾಗಲಿದ್ದಾರೆ.
910
5. ಶತಕದ ಹಳಿಗೆ ಮರಳಲು ಕೊಹ್ಲಿ ರೆಡಿ
ಅಜಿಂಕ್ಯ ರಹಾನೆ ಅವರಂತೆ ವಿರಾಟ್ ಕೊಹ್ಲಿ ಕೂಡಾ ಶತಕ ಬಾರಿಸಲು ಪರದಾಡುತ್ತಿದ್ದಾರೆ. ಕಳೆದೆರಡು ವರ್ಷಗಳಿಂದ ಕೊಹ್ಲಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಲು ಸಾಧ್ಯವಾಗಿಲ್ಲ.
1010
ಕೊಹ್ಲಿ ಬ್ಯಾಟಿಂಗ್ ರೀತಿಯೇ ಫೀಲ್ಡಿಂಗ್‌ನಲ್ಲೂ ಶತಕ ಪೂರೈಸಲು ಸಜ್ಜಾಗಿದ್ದಾರೆ. ವಿರಾಟ್ ಫೀಲ್ಡಿಂಗ್‌ನಲ್ಲಿ ಇನ್ನು ನಾಲ್ಕು ಕ್ಯಾಚ್ ಹಿಡಿದರೆ, ಕ್ಯಾಚ್‌ನಲ್ಲಿ ಸೆಂಚುರಿ ಬಾರಿಸಿದಂತಾಗುತ್ತದೆ. ಕೊಹ್ಲಿ ಹಾಗೂ ರಹಾನೆ ಇಬ್ಬರಲ್ಲಿ ಯಾರು ಮೊದಲು ಕ್ಯಾಚ್‌ನಲ್ಲಿ ಸೆಂಚುರಿ ಬಾರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.