WPL 2023: ಡಬ್ಲ್ಯು​ಪಿ​ಎ​ಲ್‌​ನಲ್ಲಿ ನವ ತಾರೆ​ಯರ ಉದ​ಯ..!

ಮುಂಬೈ(ಮಾ.28): ಚೊಚ್ಚಲ ಆವೃತ್ತಿಯ ವುಮೆನ್ಸ್‌ ಪ್ರೀಮಿ​ಯರ್‌ ಲೀಗ್‌​(ಡಬ್ಲ್ಯುಪಿಎಲ್‌) ಯಶಸ್ವಿ ಮುಕ್ತಾ​ಯ​ಗೊಂಡಿದ್ದು, ನಿರೀ​ಕ್ಷೆ​ಯಂತೆಯೇ ಹಲವು ಯುವ, ಉದ​ಯೋ​ನ್ಮುಖ ಆಟ​ಗಾ​ರ​ರನ್ನು ಕ್ರಿಕೆಟ್‌ ಜಗ​ತ್ತಿಗೆ ಪರಿ​ಚ​ಯಿ​ಸಿದೆ. ದಿಗ್ಗಜೆ ಆಟ​ಗಾರ್ತಿ​ಯರ ನಡು​ವೆಯೂ ಹಲವು ಪ್ರತಿ​ಭಾನ್ವಿತ ಆಟ​ಗಾ​ರ್ತಿ​ಯರು ಟೂರ್ನಿ​ಯ​ಲ್ಲಿ ಸಿಕ್ಕ ಅವ​ಕಾ​ಶ​ಗ​ಳ​ನ್ನು ಸಮ​ರ್ಥ​ವಾಗಿ ಬಳ​ಸಿ​ಕೊಂಡಿದ್ದು, ಭವಿ​ಷ್ಯದ ತಾರೆ​ಗ​ಳಾಗಿ ಮೂಡಿ​ಬಂದಿ​ದ್ದಾರೆ. ಡಬ್ಲ್ಯುಪಿಎಲ್‌ನಲ್ಲಿ ಸಿಕ್ಕಿರುವ ಸೀಮಿತ ಅವಕಾಶದಲ್ಲಿ ಅಗಾಧ ಸಾಮರ್ಥ್ಯ ಪ್ರದರ್ಶಿಸಿರುವ ದೇಶದ ಕೆಲ ಆಟ​ಗಾ​ರ್ತಿ​ಯರ ಪರಿ​ಚಯ ಇಲ್ಲಿ​ದೆ.

1. ಶ್ರೇಯಾಂಕ ಪಾಟೀ​ಲ್‌

ಕರ್ನಾ​ಟ​ಕದ 20 ವರ್ಷದ ಶ್ರೇಯಾಂಕಾ ತಮ್ಮ ಆಲ್ರೌಂಡ್‌ ಪ್ರದ​ರ್ಶ​ನದ ಮೂಲ​ಕವೇ ಗಮನ ಸೆಳೆ​ದಿ​ದ್ದಾರೆ. ರಾಷ್ಟ್ರೀಯ ಟೂರ್ನಿ​ಗ​ಳಲ್ಲಿ ಮಿಂಚಿದ್ದ ಅವರು ಡಬ್ಲ್ಯು​ಪಿ​ಎ​ಲ್‌​ನಲ್ಲಿ ಆರ್‌​ಸಿಬಿ ಪರ ಆಡಿದ್ದು, ತಮ್ಮ ಆಕ​ರ್ಷಕ ಹೊಡೆತ, ಸ್ಪಿನ್‌ ಕೈಚ​ಳ​ಕದ ಮೂಲಕ ಭರ​ವಸೆ ಮೂಡಿ​ಸಿ​ದ್ದಾ​ರೆ. 7 ಇನ್ನಿಂಗ್‌್ಸ​ಗ​ಳಲ್ಲಿ 151.2ರ ಸ್ಟ್ರೈಕ್‌​ರೇ​ಟ್‌​ನಲ್ಲಿ 62 ರನ್‌ ಗಳಿ​ಸಿರುವ ಅವ​ರು 6 ವಿಕೆಟ್‌ ಕೂಡಾ ಪಡೆ​ದಿ​ದ್ದಾರೆ.
 

2. ಸಾಯಿಕಾ ಇಸಾ​ಖ್‌

ಕೋಲ್ಕ​ತಾದ ಸಾಯಿಕಾ ಇಸಾಖ್‌ ಮುಂಬೈ ತಂಡ ಚಾಂಪಿ​ಯನ್‌ ಆಗು​ವಲ್ಲಿ ಪ್ರಮುಖ ಪಾತ್ರ ವಹಿ​ಸಿದ ಬೌಲರ್‌. ಎಡಗೈ ಆಫ್‌ ಸ್ಪಿನ್ನರ್‌ ಆಗಿ​ರುವ ಇಸಾಖ್‌ 10 ಪಂದ್ಯ​ಗ​ಳಲ್ಲಿ 15 ವಿಕೆ​ಟ್‌​ಗ​ಳನ್ನು ಪಡೆ​ದಿದ್ದು, ಟೂರ್ನಿ​ಯ ಗರಿಷ್ಠ ವಿಕೆಟ್‌ ಗಳಿ​ಕೆ​ದಾರರ ಪಟ್ಟಿಯಲ್ಲಿ 2ನೇ ಸ್ಥಾನ​ದ​ಲ್ಲಿ​ದ್ದಾರೆ. ಗುಜ​ರಾತ್‌ ವಿರುದ್ಧ 11 ರನ್‌ಗೆ 4 ವಿಕೆಟ್‌ ಕಿತ್ತಿದ್ದು ಶ್ರೇಷ್ಠ ಸಾಧನೆ.


3. ಕನಿಕಾ ಅಹು​ಜಾ

ಈ ಬಾರಿ ಆರ್‌​ಸಿಬಿ ಪರ ಮಿಂಚಿದ ಮತ್ತೋರ್ವ ಯುವ ಪ್ರತಿಭೆ ಕನಿಕಾ ಅಹುಜಾ. ಪಂಜಾ​ಬ್‌ನ 21 ವರ್ಷದ ಕನಿಕಾ 132ರ ಸ್ಟೆ್ರೖಕ್‌​ರೇ​ಟ್‌​ನಲ್ಲಿ 98 ರನ್‌ ಗಳಿ​ಸಿದ್ದು, 5ರ ಎಕಾ​ನ​ಮಿ​ಯಲ್ಲಿ ಬೌಲ್‌ ಮಾಡಿ 2 ವಿಕೆಟ್‌ ಪಡೆ​ದಿ​ದ್ದಾರೆ. ಯುಪಿ ವಿರು​ದ್ಧದ ಪಂದ್ಯ​ದಲ್ಲಿ ನಿರ್ಣಾ​ಯಕ ಘಟ್ಟ​ದಲ್ಲಿ 30 ಎಸೆ​ತ​ಗ​ಳಲ್ಲಿ 46 ರನ್‌ ಸಿಡಿಸಿ ತಂಡದ ಟೂರ್ನಿ​ಯಲ್ಲಿ ಆರ್‌​ಸಿ​ಬಿಯ ಮೊದಲ ಗೆಲು​ವಿಗೆ ನೆರ​ವಾ​ಗಿ​ದ್ದರು.
 

4. ದಯಾ​ಲನ್‌ ಹೇಮ​ಲ​ತಾ

ರಾಷ್ಟ್ರೀಯ ತಂಡ​ದಲ್ಲಿ ಆಡಿ ಅನು​ಭ​ವ​ವಿ​ರುವ ಚೆನ್ನೈನ ದಯಾ​ಲನ್‌ ಹೇಮ​ಲತಾ ಈ ಬಾರಿ ಗುಜ​ರಾತ್‌ ಪರ ಮಿಂಚಿ​ದ್ದಾರೆ. ತಂಡ ನಾಕೌ​ಟ್‌​ಗೇ​ರಲು ವಿಫ​ಲ​ವಾ​ದರೂ ಹೇಮ​ಲತಾ 8 ಪಂದ್ಯ​ಗ​ಳಲ್ಲಿ 151 ರನ್‌ ಗಳಿ​ಸಿ​ ಗಮನ ಸೆಳೆ​ದಿ​ದ್ದಾರೆ. ಯುಪಿ ವಿರು​ದ್ಧದ ಕೊನೆ ಪಂದ್ಯ​ದ​ಲ್ಲಿ 172.73ರ ಸ್ಟ್ರೈಕ್‌​ರೇ​ಟ್‌​ನ​ಲ್ಲಿ ಕೇವಲ 33 ಎಸೆ​ತ​ಗ​ಳ​ಲ್ಲಿ 57 ರನ್‌ ಗಳಿ​ಸಿ​ದ್ದಾ​ರೆ.
 

5. ಕಿರಣ್‌ ನವ್‌​ಗೀರೆ

ಕಿರಣ್‌ ನವ್‌​ಗೀರೆ ಯು.ಪಿ.​ವಾ​ರಿ​ಯ​ರ್ಸ್‌ ಪರ ತಮ್ಮ ಮೊದಲ ಇನ್ನಿಂಗ್‌್ಸನಲ್ಲೇ ಸ್ಫೋಟಕ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದರು. ಆ ಪಂದ್ಯ​ದಲ್ಲಿ 53 ರನ್‌ ಸಿಡಿ​ಸಿದ್ದ ಅವರು ಒಟ್ಟು 9 ಪಂದ್ಯ​ಗ​ಳಲ್ಲಿ 155 ರನ್‌ ಕಲೆ​ಹಾ​ಕಿ​ದ್ದಾ​ರೆ. ತಮ್ಮ ಬ್ಯಾಟ್‌ಗೆ ಪ್ರಾಯೋ​ಜ​ಕ​ರಿ​ಲ್ಲದ ಕಾರಣ ಬ್ಯಾಟ್‌ ಮೇಲೆ ತಾವೇ ಸ್ಕೆಚ್‌ ಪೆನ್‌ನಲ್ಲಿ ‘ಎಂಎಸ್‌ಡಿ7’ ಎಂದು ಬರೆದು ಗಮನ ಸೆಳೆ​ದಿದ್ದರು.
 

6. ತ​ನುಜಾ ಕನ್ವಾ​ರ್‌

ಈ ಬಾರಿ ಬೌಲಿಂಗ್‌​ನಲ್ಲಿ ಭರ​ವಸೆ ಮೂಡಿ​ಸಿ​ದ ಆಟ​ಗಾ​ರ್ತಿ​ಯ​ರಲ್ಲಿ ಹಿಮಾ​ಚಲ ಪ್ರದೇ​ಶದ ತನುಜಾ ಕೂಡಾ ಒಬ್ಬ​ರು. ಟೂರ್ನಿ​ಯಲ್ಲಿ ಗುಜ​ರಾತ್‌ ಜೈಂಟ್ಸ್‌ ಪರ ಆಡಿದ ಎಡಗೈ ಸ್ಪಿನ್ನರ್‌ ತನುಜಾ 5 ವಿಕೆಟ್‌ ಪಡೆ​ದಿ​ದ್ದಾರೆ. 27 ಓವರ್‌ ಬೌಲ್‌ ಮಾಡಿ​ರುವ ಅವರು 63 ಡಾಟ್‌ ಬಾಲ್‌ ಎಸೆ​ದಿ​ದ್ದಾರೆ. ಡೆಲ್ಲಿ ಕ್ಯಾಪಿ​ಟಲ್ಸ್‌ ವಿರುದ್ಧ 29 ರನ್‌ಗೆ 2 ವಿಕೆಟ್‌ ಪಡೆ​ದಿ​ದ್ದಾ​ರೆ.

Latest Videos

click me!