ಮತ್ತೆ ಇಂಡೋ-ಪಾಕ್ ಪಂದ್ಯ, ಐಸಿಸಿ ಟಿ20 ವಿಶ್ವಕಪ್ ಮಹಿಳಾ ಟೂರ್ನಿ ವೇಳಾಪಟ್ಟಿ ಪ್ರಕಟ

Published : Feb 24, 2026, 08:47 PM IST

ಮತ್ತೆ ಇಂಡೋ-ಪಾಕ್ ಪಂದ್ಯ, ಐಸಿಸಿ ಟಿ20 ವಿಶ್ವಕಪ್ ಮಹಿಳಾ ಟೂರ್ನಿ ವೇಳಾಪಟ್ಟಿ ಪ್ರಕಟ, ಮತ್ತೊಂದು ಮೆಗಾ ಫೈಟ್‌ಗೆ ವೇದಿಕೆ ಸಜ್ಜಾಗಿದೆ. ಭಾರತ ಪಾಕಿಸ್ತಾನ ಪಂದ್ಯ ಯಾವತ್ತೂ? ಟೂರ್ನಿ ವೇಳಾಪಟ್ಟಿ ಇಲ್ಲಿದೆ.

PREV
15
ಐಸಿಸಿ ಟಿ20 ಮಹಿಳಾ ವಿಶ್ವಕಪ್ ಟೂರ್ನಿ

ಐಸಿಸಿ ಟಿ20 ವಿಶ್ವಕಪ್ ಮಹಿಳಾ ಟೂರ್ನಿ ವೇಳಾಪಟ್ಟಿ ಪ್ರಕಟಗೊಂಡಿದೆ. ಈ ಬಾರಿ 12 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದೆ. ಜೂನ್ 12ರಿಂದ ಟೂರ್ನಿ ಆರಂಭಗೊಂಡರೆ, ಫೈನಲ್ ಪಂದ್ಯ ಜುಲೈ 5ರಂದು ನಡೆಯಲಿದೆ. ಈ ಬಾರಿಯ ಮಹಿಳಾ ಟಿ20 ವಿಶ್ವಕಪ್ ಟೂರ್ನಿ 2026 ಇಂಗ್ಲೆಂಡ್ ಆತಿಥ್ಯವಹಿಸಿದೆ.

25
ಭಾರತ ಪಾಕಿಸ್ತಾನ ಪಂದ್ಯ

ಟಿ20 ವಿಶ್ವಕಪ್ ಮಹಿಳಾ ಟೂರ್ನಿಯ ಪ್ರಮುಖ ಆಕರ್ಷಣೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ. ಜೂನ್ 14ರಂದು ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ. ಇಂಗ್ಲೆಂಡ್‌ನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಭಾರತ ತನ್ನ ಮೊದಲ ಪಂದ್ಯವನ್ನೇ ಬದ್ಧವೈರಿಗಳ ವಿರುದ್ದ ಆಡಲಿದೆ.

35
ಗ್ರೂಪ್ ಎ ವಿಭಾಗದಲ್ಲಿ ಭಾರತ -ಪಾಕಿಸ್ತಾನ

ಎರಡು ಗ್ರೂಪ್ ಮಾಡಲಾಗಿದೆ. ಪ್ರತಿ ಗೂಪ್‌ನಲ್ಲಿ 6 ತಂಡಗಳಿವೆ. ಎ ಗ್ರೂಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳಿವೆ. ಇನ್ನು ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ಬಾಂಗ್ಲಾದೇಶ ಹಾಗೂ ನೆದರ್ಲೆಂಡ್ ತಂಡಗಳಿವೆ. ಇನ್ನು ಗ್ರೂಪ್ ಬಿಯಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ, ಐರ್ಲೆಂಡ್, ಸ್ಕಾಟ್‌ಲೆಂಡ್ ತಂಡಗಳಿವೆ.

45
ಉದ್ಘಾಟನಾ ಪಂದ್ಯ

ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಹಾಗೂ ಶ್ರೀಲಂಕಾ ಹೋರಾಟ ಮಾಡಲಿದೆ. ಜೂನ್ 12ರಂದು ಈ ಉದ್ಘಾಟನಾ ಪಂದ್ಯ ಆಯೋಜನೆಗೊಂಡಿದೆ. ಜುಲೈ 5ರಂದು ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ.

55
ಚೊಚ್ಚಲ ಟ್ರೋಫಿ ಮೇಲೆ ಭಾರತ ಮಹಿಳಾ ತಂಡದ ಕಣ್ಣು

ಟಿ20 ವಿಶ್ವಕಪ್ ಮಹಿಳಾ ಟೂರ್ನಿಯಲ್ಲಿ ಭಾರತ ಇದುವರೆಗೂ ಟ್ರೋಫಿ ಗೆದ್ದಿಲ್ಲ. 2024ರ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ಗೆಲುವು ಸಾಧಿಸಿದೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಟಿ20 ಮಹಿಳಾ ಟೂರ್ನಿಯಲ್ಲಿ ಅಧಿಪತ್ಯ ಸಾಧಿಸಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories