ICC T20 & ODI Team Of The Year : ಐಸಿಸಿ ವರ್ಷದ ತಂಡ ಪ್ರಕಟ, ಭಾರತೀಯರಿಗಿಲ್ಲ ಸ್ಥಾನ..!

First Published | Jan 20, 2022, 3:40 PM IST

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು (International Cricket Council) ಪ್ರಕಟಿಸಿದ ವರ್ಷದ ಟಿ20 ತಂಡಕ್ಕೆ ಪಾಕಿಸ್ತಾನದ ಕ್ರಿಕೆಟಿಗ ಬಾಬರ್ ಅಜಂ (Babar Azam) ನಾಯಕರಾಗಿ ಆಯ್ಕೆಯಾಗಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡದ (Pakistan Cricket Team) ನಾಯಕರಾಗಿರುವ ಬಾಬರ್ ಅಜಂ, ಕಳೆದೊಂದು ವರ್ಷದಲ್ಲಿ ಟಿ20 ಕ್ರಿಕೆಟ್‌ನಲ್ಲಿ (T20I Cricket) ಸ್ಥಿರ ಪ್ರದರ್ಶನ ತೋರುವ ಮೂಲಕ ಗಮನ ಸೆಳೆದಿದ್ದಾರೆ. 2021ರ ಐಸಿಸಿ ಟಿ20 ವರ್ಷದ ತಂಡದಲ್ಲಿ ಭಾರತದ ಯಾವೊಬ್ಬ ಆಟಗಾರನೂ ಸ್ಥಾನ ಪಡೆಯಲು ಯಶಸ್ವಿಯಾಗಿಲ್ಲ. ಆದರೆ ಐಸಿಸಿ ವರ್ಷದ ಮಹಿಳಾ ತಂಡದಲ್ಲಿ ಸ್ಮೃತಿ ಮಂಧನಾ (Smriti Mandhana) ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಭಾರತದ ತಾರಾ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ 2021ರ ಐಸಿಸಿ ವರ್ಷದ ಮಹಿಳಾ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಪುರುಷರ ವರ್ಷದ ಟಿ20 ತಂಡದಲ್ಲಿ ಭಾರತದ ಒಬ್ಬರೂ ಆಟಗಾರರಿಗೆ ಸ್ಥಾನ ದೊರೆತಿಲ್ಲ.

ಭಾರತ ಟಿ20 ತಂಡದ ಉಪನಾಯಕಿಯಾಗಿರುವ ಸ್ಮೃತಿ, 2021ರಲ್ಲಿ 9 ಪಂದ್ಯಗಳಲ್ಲಿ 255 ರನ್‌ ಕಲೆಹಾಕಿದರು. ವರ್ಷದ ಮಹಿಳಾ ತಂಡಕ್ಕೆ ಇಂಗ್ಲೆಂಡ್‌ನ ನಥಾಲಿ ಶೀವರ್‌ ನಾಯಕಿಯಾದರೆ, ಪುರುಷರ ತಂಡಕ್ಕೆ ಪಾಕಿಸ್ತಾನದ ಬಾಬರ್‌ ಆಜಂ ನಾಯಕರಾಗಿ ಆಯ್ಕೆಯಾಗಿದ್ದಾರೆ.

Tap to resize

ಐಸಿಸಿ ಪ್ರಕಟಿಸಿದ 2021ನೇ ಸಾಲಿನ ವರ್ಷದ ತಂಡದಲ್ಲಿ ಇದೇ ಮೊದಲ ಬಾರಿಗೆ ಎನ್ನುವಂತೆ ಭಾರತದ ಯಾವ ಕ್ರಿಕೆಟ್ ಆಟಗಾರನು ಸ್ಥಾನ ಪಡೆಯಲು ಯಶಸ್ವಿಯಾಗಿಲ್ಲ. ಅಪರೂಪ ಎನ್ನುವಂತೆ ಐಸಿಸಿ ವರ್ಷದ ಏಕದಿನ ತಂಡದಲ್ಲೂ ಭಾರತ ಯಾವ ಆಟಗಾರರನೂ ತಂಡದಲ್ಲಿ ಸ್ಥಾನಗಿಟ್ಟಿಸಿರಲಿಲ್ಲ.
 

ಇನ್ನು ಕೇವಲ ಭಾರತೀಯ ಆಟಗಾರರು ಮಾತ್ರವಲ್ಲ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡದ ಆಟಗಾರರು ಸಹಾ ಐಸಿಸಿ ವರ್ಷದ ಏಕದಿನ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.  

ಐಸಿಸಿ ವರ್ಷದ ಏಕದಿನ ತಂಡದಲ್ಲಿ ಪಾಕಿಸ್ತಾನದ ಬಾಬರ್ ಅಜಂ, ಫಖರ್ ಜಮಾನ್ ಜತೆಗೆ ದಕ್ಷಿಣ ಆಫ್ರಿಕಾದ ಕೆಲವು ಆಟಗಾರರು, ಬಾಂಗ್ಲಾದೇಶದ ಮೂವರು ಆಟಗಾರರು ಹಾಗೂ ಶ್ರೀಲಂಕಾ ಮತ್ತು ಐರ್ಲೆಂಡ್ ತಂಡದ ಆಟಗಾರರು ವರ್ಷದ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
 

2021ರ ಐಸಿಸಿ ವರ್ಷದ ಏಕದಿನ ತಂಡದಲ್ಲಿ ಭಾರತೀಯರು ಸ್ಥಾನ ಪಡೆಯದೇ ಇರಲು ನಿಜವಾದ ಕಾರಣವೂ ಇದೆ. ಯಾಕೆಂದರೆ 2021ರಲ್ಲಿ ಭಾರತ ಕೇವಲ 6 ಪಂದ್ಯಗಳನ್ನಷ್ಟೇ ಆಡಿದ್ದು, ನಾಲ್ಕರಲ್ಲಿ ಗೆಲುವಿನ ನಗೆ ಬೀರಿತ್ತು.

2021ರಲ್ಲಿ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚು ಏಕದಿನ ಪಂದ್ಯಗಳನ್ನಾಡಿರಲಿಲ್ಲ. ತವರಿನಲ್ಲಿ ಇಂಗ್ಲೆಂಡ್ ಎದುರು(2-1) ಹಾಗೂ ಶ್ರೀಲಂಕಾ ಪ್ರವಾಸದಲ್ಲಿ(2-1) ಅಂತರದಲ್ಲಿ ಭಾರತ ತಂಡವು ಏಕದಿನ ಸರಣಿಯನ್ನು ಜಯಿಸಿತ್ತು. 

ಐಸಿಸಿ ಪುರುಷರ ಟಿ20 ತಂಡ: ಜೋಸ್‌ ಬಟ್ಲರ್‌, ಮೊಹಮದ್‌ ರಿಜ್ವಾನ್‌, ಬಾಬರ್‌ ಆಜಂ(ನಾಯಕ), ಮಾರ್ಕ್ರಮ್‌, ಮಿಚೆಲ್‌ ಮಾರ್ಶ್‌‍, ಡೇವಿಡ್‌ ಮಿಲ್ಲರ್‌, ತಬ್ರೇಜ್‌ ಶಮ್ಸಿ, ಜೋಶ್‌ ಹೇಜಲ್‌ವುಡ್‌, ವನಿಂಡು ಹಸರಂಗ, ಮುಸ್ತಾಫಿಜುರ್‌, ಶಾಹೀನ್‌ ಅಫ್ರಿದಿ.

ಐಸಿಸಿ ಪುರುಷರ ಟಿ20 ತಂಡ: ಜೋಸ್‌ ಬಟ್ಲರ್‌, ಮೊಹಮದ್‌ ರಿಜ್ವಾನ್‌, ಬಾಬರ್‌ ಆಜಂ(ನಾಯಕ), ಮಾರ್ಕ್ರಮ್‌, ಮಿಚೆಲ್‌ ಮಾರ್ಶ್‌‍, ಡೇವಿಡ್‌ ಮಿಲ್ಲರ್‌, ತಬ್ರೇಜ್‌ ಶಮ್ಸಿ, ಜೋಶ್‌ ಹೇಜಲ್‌ವುಡ್‌, ವನಿಂಡು ಹಸರಂಗ, ಮುಸ್ತಾಫಿಜುರ್‌, ಶಾಹೀನ್‌ ಅಫ್ರಿದಿ.

Latest Videos

click me!