ಟಿ20 ವಿಶ್ವಕಪ್‌ ಟೂರ್ನಿಯಲ್ಲಿ 20 ಅಲ್ಲ, ಬರೋಬ್ಬರಿ 32 ತಂಡ ಕಣಕ್ಕೆ?

Published : Jul 20, 2025, 02:08 PM IST

ಸಿಂಗಾಪುರ: 2026ರ ಐಸಿಸಿ ಟಿ20 ವಿಶ್ವಕಪ್ ಬಳಿಕ ಚುಟುಕು ವಿಶ್ವಕಪ್‌ನಲ್ಲಿ ತಂಡಗಳನ್ನು ಹೆಚ್ಚಿಸಲು ಐಸಿಸಿ ಚಿಂತನೆ ನಡೆಸುತ್ತಿದೆ. ಈ ಕುರಿತಾದ ಮಹತ್ವದ ಅಪ್‌ಡೇಟ್ ಇಲ್ಲಿದೆ ನೋಡಿ.

PREV
16

ಟಿ20 ವಿಶ್ವಕಪ್ ತಂಡಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌(ಐಸಿಸಿ) ಚಿಂತನೆ ನಡೆಸುತ್ತಿದೆ.

26

2026ರ ಬಳಿಕ ಟಿ20 ವಿಶ್ವಕಪ್‌ನಲ್ಲಿ 32 ತಂಡಗಳನ್ನು ಆಡಿಸುವ ಬಗ್ಗೆ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ವರದಿಯಾಗಿದೆ.

36

ಕಳೆದ ವರ್ಷ 4 ತಂಡಗಳನ್ನು ಹೆಚ್ಚಿಸಿ ಒಟ್ಟು 20 ತಂಡಗಳ ನಡುವೆ ವಿಶ್ವಕಪ್‌ ಆಡಿಸಲಾಗಿತ್ತು. 2026ರ ವಿಶ್ವಕಪ್‌ನಲ್ಲೂ 20 ತಂಡಗಳನ್ನೇ ಆಡಿಸುವ ಸಾಧ್ಯತೆ ಹೆಚ್ಚು.

46

ಆದರೆ 2028ರಲ್ಲಿ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ ಗಮನದಲ್ಲಿಟ್ಟುಕೊಂಡು 2026ರ ಬಳಿಕ ಟಿ20 ವಿಶ್ವಕಪ್‌ಗೆ ಇನ್ನೂ 12 ತಂಡಗಳನ್ನು ಸೇರಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ಬಗ್ಗೆ ಭಾನುವಾರ ಅಂತಿಮ ನಿರ್ಧಾರ ಹೊರಬೀಳಬಹುದು.

56

ಇನ್ನು, ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ ಕ್ರಿಕೆಟ್‌ ತಂಡಗಳ ಅರ್ಹತೆ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದೆ. ಪ್ರತಿ ಖಂಡಗಳಿಂದ ರ್‍ಯಾಂಕಿಂಗ್‌ ಆಧಾರದಲ್ಲಿ ತಂಡಗಳನ್ನು ಆಯ್ಕೆ ಮಾಡಲು ನಿರ್ಧರಿಸಿದೆ ಎನ್ನಲಾಗುತ್ತಿದೆ.

66

ಹೀಗಾದರೆ ರ್‍ಯಾಂಕಿಂಗ್‌ನಲ್ಲಿ ಮುಂಚೂಣಿಯಲ್ಲಿರುವ ಭಾರತ ಏಷ್ಯಾ ಖಂಡದಿಂದ ನೇರವಾಗಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿದೆ ಎಂದು ವರದಿಯಾಗಿದೆ.

Read more Photos on
click me!

Recommended Stories