Published : Jun 28, 2025, 10:33 AM ISTUpdated : Jun 28, 2025, 11:01 AM IST
ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ದೇಶಿ ಕ್ರಿಕೆಟ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಕುರಿತಂತೆ ರೂಲ್ಸ್‌ನಲ್ಲಿ ಮತ್ತಷ್ಟು ಬದಲಾವಣೆಗಳನ್ನು ಮಾಡಿದೆ. ಇದು ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತಿರಬೇಕಾದ ಇಂಟ್ರೆಸ್ಟಿಂಗ್ ಸಂಗತಿಗಳೆನಿಸಿವೆ.
ಕಳೆದ ತಿಂಗಳಷ್ಟೇ ಐಸಿಸಿ ಬೌಂಡರ್ ಲೈನ್ ಕ್ಯಾಚ್‌ಗೆ ಸಂಬಂಧಿಸಿದಂತೆ ಪರಿಷ್ಕೃತ ರೂಲ್ಸ್ ಘೋಷಿಸಿತ್ತು. ಇದೀಗ ಮತ್ತಷ್ಟು ಪರಿಷ್ಕೃತ ಕ್ರಿಕೆಟ್ ರೂಲ್ಸ್ ಪರಿಚಯಿಸಿದೆ.
28
ಪಂದ್ಯದ ವೇಳೆ ತಲೆಗೆ ಪೆಟ್ಟು ಬಿದ್ದು ಹೊರಗುಳಿಯುವ(ಕನ್ಕಶನ್ ಸಬ್‌ಸ್ಟಿಟ್ಯೂಟ್) ಆಟಗಾರ 7 ದಿನಗಳ ನಂತರವವೇ ಕ್ರಿಕೆಟ್‌ಗೆ ಮರಳಬೇಕು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ತಿಳಿಸಿದೆ.
38
ಬೌಂಡರಿ ಲೈನ್ ಕ್ಯಾಚ್, ಚೆಂಡು ಬಳಕೆ ಸೇರಿದಂತೆ ಹಲವು ನಿಮಯಗಳಲ್ಲಿ ಬದಲಾವಣೆ ತಂದಿರುವ ಐಸಿಸಿ ಶುಕ್ರವಾರ ಮತ್ತಷ್ಟು ನಿಯಮಗಳನ್ನು ಪರಿಷ್ಕರಣೆ ಮಾಡಿದೆ. ಈ ನಿಮಯಗಳು ಮುಂದಿನ ತಿಂಗಳಿಂದ ಜಾರಿಗೆ ಬರಲಿದೆ.
ಎಲ್ಲಾ ತಂಡಗಳು ಕನ್ಕಶನ್ ಸಬ್‌ಸ್ಟಿಟ್ಯೂಟ್ ಆಟಗಾರರನ್ನು ಪಂದ್ಯ ಆರಂಭಕ್ಕೂ ಮುನ್ನವೇ ಸಲ್ಲಿಸಬೇಕು. ಪಂದ್ಯದ ವೇಳೆ ಯಾವುದಾದರೂ ಆಟಗಾರ ಕನ್ಕಶನ್‌ಗೆ ಒಳಗಾದರೆ ಅವರು ಮುಂದಿನ 7 ದಿನಗಳ ಕಾಲ ಆಡುವಂತಿಲ್ಲ ಎಂದು ತಿಳಿಸಿದೆ.
58
ಇನ್ನು, ವೈಡ್ ಬಾಲ್‌ನಲ್ಲೂ ಹೊಸ ನಿಯಮ ಜಾರಿಯಾಗಲಿದೆ. ಬೌಲರ್ ಚೆಂಡು ಎಸೆಯುವ ಸಂದರ್ಭ ಬ್ಯಾಟರ್ ಎಲ್ಲಿರುತ್ತಾನೊ, ಆ ಸ್ಥಳವನ್ನೇ ಗುರುತಿಸಿ ವೈಡ್ ಕರೆ ನೀಡಲಾಗುತ್ತದೆ.
68
ಚೆಂಡು ಎಸೆದ ಮೇಲೆ ಬ್ಯಾಟರ್ ಅತ್ತಿತ್ತ ಹೋದರೂ, ಚೆಂಡು ಎಸೆಯುವಾಗ ಬ್ಯಾಟರ್ ಇರುವ ಸ್ಥಳದ ಆಧಾರದಲ್ಲಿ ವೈಡ್ ಘೋಷಿಸಲಾಗುತ್ತದೆ.
78
ಅಲ್ಲದೆ, ದೇಸಿ ಕ್ರಿಕೆಟ್‌ಗಳಲ್ಲಿ ಬದಲಿ ಆಟಗಾರರಿಗೂ ಬೌಲಿಂಗ್, ಬ್ಯಾಟಿಂಗ್ ಅವಕಾಶ ನೀಡಲು ಐಸಿಸಿ ನಿರ್ಧರಿಸಿದೆ.
88
ಈ ಮೊದಲು ಕನ್ಕಶನ್ ಬದಲಿ ಆಟಗಾರನಿಗೆ ಮಾತ್ರ ಬ್ಯಾಟಿಂಗ್, ಬೌಲಿಂಗ್ ಅವಕಾಶವಿತ್ತು. ಇನ್ನು ಮುಂದೆ ಯಾವುದೇ ರೀತಿಯ ಗಾಯಕ್ಕೂ ಬದಲಿ ಆಟಗಾರನಿಗೆ ಈ ನಿಯಮ ಅನ್ವಯವಾಗಲಿದೆ.