ಧೋನಿ ಕೈಚಳಕ ಪಿಕ್‌ ಪಾಕೆಟ್ ಮಾಡೋರಿಗಿಂತ ಫಾಸ್ಟ್: ರವಿಶಾಸ್ತ್ರಿ ಅಚ್ಚರಿ ಹೇಳಿಕೆ!

Published : Jun 10, 2025, 05:03 PM IST

ಬೆಂಗಳೂರು: ಮಹೇಂದ್ರ ಸಿಂಗ್ ಧೋನಿ, ಭಾರತದ ದಿಗ್ಗಜ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಇದೀಗ ಧೋನಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ ಒಲಿದು ಬಂದಿದೆ. ಇದರ ಬೆನ್ನಲ್ಲೇ ಧೋನಿ ಬಗ್ಗೆ ರವಿಶಾಸ್ತ್ರಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

PREV
17

ಮಹೇಂದ್ರ ಸಿಂಗ್ ಧೋನಿ ಹಾಲ್ ಆಫ್ ಫೇಮ್ ಪ್ರಶಸ್ತಿಗೆ ಭಾಜನರಾದ 11ನೇ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

27

ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ಕ್ಯಾಪ್ಟನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ.

37

ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ ಎಸ್ ಧೋನಿ, ತಮ್ಮ ಶಾಂತ ಸ್ವಭಾವದ ಮೂಲಕವೇ ತಮ್ಮ ಅಭಿಮಾನಿಗಳಿಗೆ ಪ್ರೇರಣೆಯಾಗಿದ್ದಾರೆ.

47

ಇನ್ನು ಧೋನಿಯಷ್ಟು ಶಾಂತ ಸ್ವಭಾವದ ಮತ್ತೊಬ್ಬ ಕ್ರಿಕೆಟಿಗನನ್ನು ನಾನೆಲ್ಲಿಯೂ ನೋಡಿಲ್ಲ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

57

ಧೋನಿ ಶೂನ್ಯಕ್ಕೆ ಔಟಾದರೂ, ಶತಕ ಬಾರಿಸಿದರೂ, ವಿಶ್ವಕಪ್ ಗೆದ್ದರೂ, ದ್ವಿಶತಕ ಬಾರಿಸಿದರೂ ಯಾವತ್ತೂ ಮೈಮರೆಯುವುದಿಲ್ಲ. ಶಾಂತ ಸ್ವಭಾವದಲ್ಲೇ ಇರುತ್ತಾರೆ ಎಂದು ಶಾಸ್ತ್ರಿ ಹೇಳಿದ್ದಾರೆ.

67

ಇನ್ನು ಇದೇ ವೇಳೆ ವಿಕೆಟ್ ಕೀಪಿಂಗ್‌ನಲ್ಲಿ ಧೋನಿಯ ಕೈಚಳಕದ ಬಗ್ಗೆ ರವಿಶಾಸ್ತ್ರಿ ಮನಬಿಚ್ಚಿ ಶ್ಲಾಘಿಸಿದ್ದಾರೆ. ವಿಕೆಟ್ ಹಿಂದೆ ಧೋನಿಯ ಕೈ, ಜೇಬುಗಳ್ಳತನ ಮಾಡುವವರಿಗಿಂತ ಚುರುಕಾಗಿರುತ್ತದೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

77

ಜೂನ್ 9ರಂದು ನಡೆದ ಐಸಿಸಿ ಹಾಲ್ ಆಫ್ ಫೇಮ್ ಕಾರ್ಯಕ್ರಮದಲ್ಲಿ ಧೋನಿ ಸೇರಿದಂತೆ 7 ದಿಗ್ಗಜ ಕ್ರಿಕೆಟಿಗರಿಗೆ ಹಾಲ್ ಆಫ್ ಫೇಮ್ ಪ್ರಶಸ್ತಿ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಟೀಂ ಇಂಡಿಯಾ ಮಾಜಿ ಹೆಡ್‌ಕೋಚ್ ರವಿಶಾಸ್ತ್ರಿ, ಧೋನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read more Photos on
click me!

Recommended Stories