Published : Mar 03, 2025, 06:18 PM ISTUpdated : Mar 03, 2025, 07:31 PM IST
ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಭಾರತ ತಂಡದ ಆಟಗಾರ, ತಮಿಳುನಾಡಿನ ವರುಣ್ ಚಕ್ರವರ್ತಿ 5 ವಿಕೆಟ್ ಕಿತ್ತು ಪಂದ್ಯ ಶ್ರೇಷ್ಠರಾಗಿ ಮಿಂಚಿದ್ದಾರೆ. ಈ ವರುಣ್ ಚಕ್ರವರ್ತಿ ಯಾರು ಅಂತ ನೋಡೋಣ.
ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ವರುಣ್ ಚಕ್ರವರ್ತಿ 5 ವಿಕೆಟ್ ಪಡೆದರು. ದುಬೈನಲ್ಲಿ 4 ವರ್ಷಗಳ ಹಿಂದೆ ಅವಮಾನಗೊಂಡ ಅದೇ ಜಾಗದಲ್ಲಿ ಪಂದ್ಯ ಶ್ರೇಷ್ಠರಾಗಿದ್ದಾರೆ.
26
ವರುಣ್ ಚಕ್ರವರ್ತಿ
ತಮಿಳುನಾಡಿನ 33 ವರ್ಷದ ವರುಣ್ ಚಕ್ರವರ್ತಿ ತಮ್ಮ ಮ್ಯಾಜಿಕ್ ಸ್ಪಿನ್ ಬೌಲಿಂಗ್ ಮೂಲಕ ನ್ಯೂಜಿಲೆಂಡ್ ತಂಡವನ್ನು ಸಂಪೂರ್ಣವಾಗಿ ಕಟ್ಟಿಹಾಕಿದರು. ವರುಣ್ ಚಕ್ರವರ್ತಿ ಹುಟ್ಟಿ ಬೆಳೆದ ಆರಂಭಿಕ ದಿನಗಳು ಕರ್ನಾಟಕದ ಬೀದರ್‌ನಲ್ಲಿ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ.
36
ವರುಣ್ ಚಕ್ರವರ್ತಿ 5 ವಿಕೆಟ್
ವರುಣ್ ಚಕ್ರವರ್ತಿ ಹುಟ್ಟಿದ್ದು ಆಗಸ್ಟ್ 29, 1991ರಲ್ಲಿ, ಬೀದರ್‌ನಲ್ಲಿ ಹುಟ್ಟಿದ ವರುಣ್ ಚಕ್ರವರ್ತಿ ಬಾಲ್ಯದ ಕೆಲ ವರ್ಷಗಳನ್ನು ಬೀದರ್‌ನಲ್ಲೇ ಕಳೆದಿದ್ದಾರೆ. ಆದರೆ ತಂದೆ ವಿನೋದ್ ಚಕ್ರವರ್ತಿಗೆ ಸ್ಥಳಾಂತರಗೊಂಡ ಕಾರಣ ತಮಿಳುನಾಡಿನಲ್ಲಿ ಶಾಲಾ ಕಾಲೇಜು ಪೂರೈಸಿದ್ದರು.
46
ಚೆನ್ನೈನ ಎಸ್ಆರ್‌ಎಂ ವಿಶ್ವಿವಿದ್ಯಾಲಯದಲ್ಲಿ ಆರ್ಕಿಟೆಕ್ಟ್ ಪದವಿ ಪಡೆದಿರುವ ವರುಣ್ ಚಕ್ರವರ್ತಿಗೆ ಕ್ರಿಕೆಟ್ ಎಂದರೆ ಪಂಚ ಪ್ರಾಣವಾಗಿತ್ತು.ವರುಣ್ ಚಕ್ರವರ್ತಿ ಒಂಬತ್ತು ವರ್ಷಗಳ ಹಿಂದೆ, ಒಂದು ಕಟ್ಟಡ ನಿರ್ಮಾಣ ಕಂಪನಿಯಲ್ಲಿ ಬಿಲ್ಡಿಂಗ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು.
56
2021ರಲ್ಲಿ ದುಬೈನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದರು. ಆದರೆ 3 ಪಂದ್ಯಗಳಲ್ಲಿಯೂ ಅವರಿಂದ ಸರಿಯಾಗಿ ಆಡಲು ಸಾಧ್ಯವಾಗಲಿಲ್ಲ.
66
ಆದರೆ ಇದೀಗ ಅದೇ ದುಬೈ ಮೈದಾನದಲ್ಲಿ ಕಿವೀಸ್ ಎದುರು ಮಾರಕ ದಾಳಿ ನಡೆಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುವಲ್ಲಿ ಯಶಸ್ವಿಯಾದರು.