ದಿನೇಶ್ ಕಾರ್ತಿಕ್‌ -ಹಾರ್ದಿಕ್ ಪಾಂಡ್ಯ: ಬೇರೆ ಧರ್ಮೀಯರನ್ನು ವರಿಸಿದ ಕ್ರಿಕೆಟರ್ಸ್!

First Published | Oct 15, 2020, 5:52 PM IST

ಖ್ಯಾತ ಜ್ಯುವೆಲ್ಲರಿ ಬ್ರ್ಯಾಂಡ್ ತನೀಷ್ಕ್ ಜಾಹೀರಾತು ಸಾಮಾಜಿಕ ಮಾಧ್ಯಮಗಳು ವಿವಾದದಲ್ಲಿ ಸಿಲುಕಿದೆ. ಇದು ಲವ್‌ ಜಿಹಾದ್‌ ಪ್ರಮೋಟ್‌ ಮಾಡುತ್ತಿದೆ ಎಂದು ಇದರ ಪರ, ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ ಧರ್ಮದ ಬಗ್ಗೆ ತಲೆಕೆಡಿಸಿಕೊಳ್ಳದೆ ಅನ್ಯ ಧರ್ಮದವರನ್ನು ಮದುವೆಯಾಗಿ 'ಪ್ರೀತಿಗೆ ಯಾವುದೇ ಗಡಿಗಳಿಲ್ಲ' ಎಂಬುದಕ್ಕೆ ಉದಾಹರಣೆಯಾಗಿದ್ದಾರೆ ಭಾರತೀಯ ಕ್ರಿಕೆಟರ್ಸ್‌. ಹಲವು ಆಟಗಾರರು ತಮ್ಮ ಧರ್ಮದ ಹೊರಗಿನ ಬಾಳಸಂಗಾತಿಯನ್ನು ಆರಸಿಕೊಂಡಿದ್ದಾರೆ. ದಿನೇಶ್ ಕಾರ್ತಿಕ್‌ -ಹಾರ್ದಿಕ್ ಪಾಂಡ್ಯ  ಬೇರೆ ಧರ್ಮದವರನ್ನು ಮದುವೆಯಾದ ಭಾರತೀಯ ಕ್ರಿಕೆಟಿಗರು. 

ಖ್ಯಾತ ಜ್ಯುವೆಲ್ಲರಿ ಬ್ರ್ಯಾಂಡ್ ತನೀಷ್ಕ್ಜಾಹೀರಾತು ಸಾಮಾಜಿಕ ಮಾಧ್ಯಮಗಳು ವಿವಾದದಲ್ಲಿ ಸಿಲುಕಿದೆ. ಇದು ಲವ್‌ ಜಿಹಾದ್‌ ಪ್ರಮೋಟ್‌ ಮಾಡುತ್ತಿದೆ ಎಂದು ಇದರ ವಿರುದ್ಧ ನೆಟಿಜನ್‌ಗಳು ಕಿಡಿಕಾರಿದ್ದಾರೆ. ಭಾವನೆಗಳನ್ನು ಹರ್ಟ್‌ ಮಾಡಿ ಕೋಮು ಹಾನಿ ಉಂಟುಮಾಡುತ್ತಿದೆ ಎಂದು ತನೀಶ್ಕ್ ಬ್ರಾಂಡ್‌ ಬಾಯ್‌ಕಾಟ್‌ ಮಾಡುವ ಟ್ರೆಂಡ್‌ ಸೃಷ್ಟಿಯಾಗಿದೆ.
ಆದರೆ ಧರ್ಮದ ಬಗ್ಗೆ ತಲೆಕೆಡಿಸಿಕೊಳ್ಳದೇ ಬೇರೆ ಧರ್ಮದವರನ್ನು ಮದುವೆಯಾಗಿ, 'ಪ್ರೀತಿಗೆ ಯಾವುದೇ ಗಡಿಗಳಿಲ್ಲ' ಎಂಬುದಕ್ಕೆ ಉದಾಹರಣೆಯಾಗಿದ್ದಾರೆ ಈ ಭಾರತೀಯ ಕ್ರಿಕೆಟರ್ಸ್‌.
Tap to resize

ಹಲವು ಆಟಗಾರು ಅನ್ಯ ಧರ್ಮೀಯರನ್ನುವರಿಸಿಕೊಂಡಿದ್ದಾರೆ. ದಿನೇಶ್ ಕಾರ್ತಿಕ್‌ -ಹಾರ್ದಿಕ್ ಪಾಂಡ್ಯಬೇರೆ ಧರ್ಮದವರನ್ನು ಮದುವೆಯಾದ ಭಾರತೀಯ ಕ್ರಿಕೆಟಿಗರು.
ಅಜಿತ್ ಅಗರ್ಕರ್-ಫಾತಿಮಾ:ಭಾರತದ ಮಾಜಿ ಪಾಸ್ಟ್‌ ಬೌಲರ್‌ ಅಗರ್ಕರ್ ತನ್ನ ನಿಜವಾದ ಪ್ರೀತಿಯನ್ನು ಮುಸ್ಲಿಂ ಮಹಿಳೆ ಫಾತಿಮಾಳಲ್ಲಿ ಕಂಡುಕೊಂಡಿದ್ದಾರೆ. ಕ್ರಿಕೆಟ್ ಅಭಿಮಾನಿ ಫಾತಿಮಾ ಅಗರ್ಕರ್ ಕ್ಲೋಸ್‌ ಫ್ರೆಂಡ್‌ ಸಹೋದರಿಯಾಗಿದ್ದರು. 2007ರಲ್ಲಿ ಮದುವೆಯಾದ ಈ ಜೋಡಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ.
ಜಹೀರ್ ಖಾನ್-ಸಾಗರಿಕಾ ಘಾಟ್ಗೆ:ಭಾರತದ ಮಾಜಿ ಫಾಸ್ಟ್‌ ಬೌಲರ್ ಮುಸ್ಲಿಂ. 2017ರಲ್ಲಿ ಅವರು ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ಜೊತೆ ನಿಶ್ಚಿತಾರ್ಥದ ವಿಷಯ ಆನೌಸ್ಸ್‌ ಮಾಡಿ ಎಲ್ಲರಿಗೂ ಸರ್‌ಪ್ರೈಸ್‌ ನೀಡಿದ್ದರು. ಈ ಮುಸ್ಲಿಂ ಹಿಂದೂ ಕಪಲ್‌ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಮನ್ಸೂರ್ ಅಲಿ ಖಾನ್-ಶರ್ಮಿಳಾ ಟಾಗೋರ್:ಮುಸ್ಲಿಂ ಧರ್ಮದವರಾದ ಪಟೌಡಿ ಭೋಪಾಲ್‌ನ ಗೌರವಾನ್ವಿತ ನವಾಬ್ ಕುಟುಂಬದವರಾಗಿದ್ದರು. ಬಾಲಿವುಡ್ ನಟಿ ಶರ್ಮಿಳಾ ಸರಳ ಹಿಂದೂ-ಬಂಗಾಳಿ ಕುಟುಂಬಕ್ಕೆ ಸೇರಿದವರಾಗಿದ್ದರು. ಅದೇನೇ ಇದ್ದರೂ, ಈ ಜೋಡಿಯು 1969 ರಲ್ಲಿ ವಿವಾಹವಾದರು, ಅವರ ಮಗ ಸೈಫ್ ಅಲಿ ಖಾನ್ ಕೂಡ ಈ ವಿಷಯದಲ್ಲಿ ತಂದೆಯ ಹೆಜ್ಜೆಗಳನ್ನು ಅನುಸರಿಸಿದರು.
ವಿನೋದ್ ಕಾಂಬ್ಳಿ-ನೋಯೆಲ್ ಲೂಯಿಸ್ ಮತ್ತು ಆಂಡ್ರಿಯಾ ಹೆವಿಟ್:ಕಾಂಬ್ಲಿ ಎರಡು ಬಾರಿ ಮದುವೆಯಾದರು. ಭಾರತೀಯ ಬ್ಯಾಟ್ಸ್‌ಮನ್‌ಗೆ ಕ್ರಿಶ್ಚಿಯನ್ ಧರ್ಮದ ಬಗ್ಗೆ ಮೋಹವಿತ್ತು. 1998 ರಲ್ಲಿ ಪತ್ನಿ ನೋಯೆಲ್ಲಾ ಜೊತೆಯ ಮೊದಲ ವಿವಾಹವು ಹೆಚ್ಚು ಕಾಲ ಉಳಿಯಲಿಲ್ಲ. ಆದಾಗ್ಯೂ, ವಿಚ್ಛೇದನದ ನಂತರ, ಆಂಡ್ರಿಯಾರನ್ನು ಮದುವೆಯಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಬದಲಾದರು.
ಮೊಹಮ್ಮದ್ ಕೈಫ್-ಪೂಜಾ ಯಾದವ್:ಟೀಮ್‌ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್ ಕೈಫ್ ಮುಸ್ಲಿಂ ಹಿನ್ನೆಲೆಯವರು. ಅವರು ಪೂಜಾ ಯಾದವ್ ಎಂಬಹಿಂದೂ ಹುಡುಗಿಯನ್ನು ಪ್ರೀತಿಸಿ 2011 ರಲ್ಲಿ ಮದುವೆಯಾಗಿದ್ದಾರೆ. ಪೂಜಾ ಪತ್ರಕರ್ತರಾಗಿದ್ದು, ನೋಯ್ಡಾ ಮೂಲದವರು.
ಹಾರ್ದಿಕ್ ಪಾಂಡ್ಯ-ನಟಾಸಾ ಸ್ಟಾಂಕೋವಿಕ್:ಈ ಲಿಸ್ಟ್‌ಗೆ ಈ ಜೋಡಿ ಹೊಸ ಸೇರ್ಪಡೆ, ಭಾರತೀಯ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸೆರ್ಬಿಯಾದ ಮಹಿಳೆಯನ್ನು ಮದುವೆಯಾಗಿದ್ದಾರೆ. ನಟಾಸಾ ಸೆರ್ಬಿಯಾ ಮೂಲದ ನಟಿ ಕಮ್ ಮಾಡೆಲ್ ಆಗಿದ್ದು, ಬಾಲಿವುಡ್ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ
ದಿನೇಶ್ ಕಾರ್ತಿಕ್-ದೀಪಿಕಾ ಪಲ್ಲಿಕಲ್:ಕಾರ್ತಿಕ್ ಮಾಜಿ ಪತ್ನಿ ನಿಕಿತಾ ಅವರಿಗೆ ಡಿವೋರ್ಸ್ ಮಾಡಿದ ನಂತರ ದೀಪಿಕಾ ಅವರ ಜೀವನದಲ್ಲಿ ಬಂದರು. ಭಾರತೀಯ ಮಹಿಳಾ ಸ್ಕ್ವ್ಯಾಷ್ ಆಟಗಾರ್ತಿ ಕ್ರಿಶ್ಚಿಯನ್ ಹಿನ್ನೆಲೆಯಿಂದ ಬಂದವರಾಗಿದ್ದರೆ, ಕಾರ್ತಿಕ್ ಶುದ್ಧ ಹಿಂದೂ. ಅದೇನೇ ಇದ್ದರೂ, ಈ ಕಪಲ್‌ ಸಂತೋ‍ಷವಾಗಿ ಜೊತೆಯಾಗಿದ್ದಾರೆ.

Latest Videos

click me!