Happy Birthday Yuzvendra Chahal: ಲೆಗ್‌ ಸ್ಪಿನ್ನರ್‌ ಚಹಲ್‌ ಕುರಿತಾದ 8 ಇಂಟ್ರೆಸ್ಟಿಂಗ್ ಸಂಗತಿಗಳಿವು

First Published Jul 23, 2022, 1:43 PM IST

ಬೆಂಗಳೂರು: ಟೀಂ ಇಂಡಿಯಾದ ತಾರಾ ಲೆಗ್‌ ಸ್ಪಿನ್ನರ್ ಯುಜುವೇಂದ್ರ ಚಹಲ್ ಶನಿವಾರವಾದ ಇಂದು(ಜು.23) ತಮ್ಮ 32ನೇ ವಸಂತಕ್ಕೆ ಕಾಲಿರಿಸಿದ್ದಾರೆ. ತಮ್ಮ ಚಾಣಾಕ್ಷ ಬೌಲಿಂಗ್ ಕೈ ಚಳಕದ ಮೂಲಕ ಹಲವು ಪಂದ್ಯಗಳಲ್ಲಿ ಭಾರತಕ್ಕೆ ಏಕಾಂಗಿಯಾಗಿ ಗೆಲುವು ತಂದುಕೊಟ್ಟಿರುವ ಯುಜುವೇಂದ್ರ ಚಹಲ್‌ಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬರಲಾರಂಭಿಸಿವೆ. ಯುಜುವೇಂದ್ರ ಚಹಲ್ 32ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರು ಕುರಿತಾದ 8 ಇಂಟ್ರೆಸ್ಟಿಂಗ್ ಸಂಗತಿಗಳನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.
 

ಯುಜುವೇಂದ್ರ ಚಹಲ್‌ ಜುಲೈ 23, 1990ರಲ್ಲಿ ಹರ್ಯಾಣದ ಜಿಂದ್‌ ಜಿಲ್ಲೆಯಲ್ಲಿ ಜನಿಸಿದ್ದರು. ಚಹಲ್‌ ಇದೀಗ ಭಾರತ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. 

ಯುಜುವೇಂದ್ರ ಚಹಲ್ ಭಾರತ ಕ್ರಿಕೆಟ್ ತಂಡದ ಪರ 127 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿ 192 ವಿಕೆಟ್ ಕಬಳಿಸಿದ್ದಾರೆ. ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿವೇಗವಾಗಿ 50 ವಿಕೆಟ್ ಕಬಳಿಸಿದ ಹಿರಿಮೆ ಚಹಲ್‌ ಅವರದ್ದು.
 

Latest Videos


ಚೆಸ್ ಹಾಗೂ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಏಕೈಕ ಆಟಗಾರರೆಂದೇ ಅದು ಯುಜುವೇಂದ್ರ ಚಹಲ್. ಚಹಲ್ 7 ವರ್ಷದವರಾಗಿದ್ದಾಗಲೇ ಚೆಸ್ ಆಡಲು ಆರಂಭಿಸಿದ್ದರು. ಚಹಲ್ ಹಲವು ವಯೋಮಾನಗಳ ವಿಭಾಗದ ಚೆಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಜಯಿಸಿದ್ದಾರೆ.

ಯುಜುವೇಂದ್ರ ಚಹಲ್ 12 ವರ್ಷದೊಳಗಿನವರ ನ್ಯಾಷನಲ್ ಚಿಲ್ಡ್ರೆನ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಇದಾದ ಬಳಿಕ 2002ರಲ್ಲಿ ಏಷ್ಯನ್ ಯೂತ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಟಾಪ್ 20 ಯಲ್ಲಿ ಸ್ಥಾನ ಪಡೆದಿದ್ದರು.ಇದರ ಜತೆಗೆ ಅಂಡರ್ 16 ವಿಭಾಗದಲ್ಲಿ ಗ್ರೀಸ್‌ನಲ್ಲಿ ನಡೆದ ವಿಶ್ವ ಯುವ ಚಾಂಪಿಯನ್‌ಶಿಪ್‌ನಲ್ಲೂ ಭಾರತವನ್ನು ಪ್ರತಿನಿಧಿಸಿದ್ದರು.
 

ಚೆಸ್‌ನಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿದ್ದ ಚಹಲ್‌, ಕ್ರಿಕೆಟ್‌ನತ್ತ ಅನಿವಾರ್ಯವಾಗಿ ಒಲವು ತೋರಬೇಕಾಗಿ ಬಂತು. ಚೆಸ್‌ ಕ್ರೀಡೆಯಲ್ಲೇ ಮುಂದುವರೆಯಲು ಯುಜುವೇಂದ್ರ ಚಹಲ್‌ಗೆ ಸರಿಯಾದ ಸ್ಪಾನ್ಸರ್ಸ್‌ ಸಿಗದಿದ್ದರಿಂದಾಗಿ ಅವರು ಕ್ರಿಕೆಟ್‌ನತ್ತ ಮುಖ ಮಾಡಬೇಕಾಗಿ ಬಂತು.

ಚಹಲ್ ಅವರನ್ನು ಐಪಿಎಲ್‌ನಲ್ಲಿ 2011ರಲ್ಲಿ ಮೊದಲು ಮುಂಬೈ ಇಂಡಿಯನ್ಸ್ ತಂಡ ಖರೀದಿಸಿತ್ತು. ಆದರೆ ಐಪಿಎಲ್‌ನಲ್ಲಿ ಚಹಲ್ ಒಂದೇ ಒಂದು ಪಂದ್ಯವನ್ನಾಡಲು ಅವಕಾಶ ಸಿಗಲಿಲ್ಲ. ಚಹಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2014ರಲ್ಲಿ ಖರೀದಿಸಿತು. 2014ರಿಂದ 2021ರ ವರೆಗೆ ಚಹಲ್‌ ಆರ್‌ಸಿಬಿ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು.

ಇನ್ನು 2022ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪಾಲಾಗಿದ್ದ ಯುಜುವೇಂದ್ರ ಚಹಲ್, 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸುವ ಮೂಲಕ ಪರ್ಪಲ್‌ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು. ರಾಜಸ್ಥಾನ ರಾಯಲ್ಸ್‌ ಪರ 17 ಪಂದ್ಯಗಳನ್ನಾಡಿ 27 ವಿಕೆಟ್ ಪಡೆದಿದ್ದರು.
 

ಯುಜುವೇಂದ್ರ ಚಹಲ್‌ 2016ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಬಳಿಕ ಹಿಂತಿರುಗಿ ನೋಡುವ ಪ್ರಮೆಯವೇ ಬರಲಿಲ್ಲ. ಕ್ರಿಕೆಟ್‌ನಲ್ಲಿ ಭಾರತ ಅದ್ಭುತ ಪ್ರದರ್ಶನ ತೋರಿದ್ದರಿಂದ ಚಹಲ್ ಅವರನ್ನು ಭಾರತದ ಆದಾಯ ತೆರಿಗೆ ಇಲಾಖೆಯು, Income Tax Officer(ಆದಾಯ ತೆರಿಗೆ ಅಧಿಕಾರಿಯಾಗಿ) ನೇಮಕ ಮಾಡಿಕೊಂಡಿದೆ.
 

click me!