ಗ್ಯುಡ್‌ ನ್ಯೂಸ್‌ ನೀಡಿದ ವಿರುಷ್ಕಾ - 2021 ಜನವರಿಗೆ ಬರಲಿರುವ ಹೊಸ ಅತಿಥಿ

Suvarna News   | Asianet News
Published : Aug 27, 2020, 03:17 PM ISTUpdated : Aug 27, 2020, 03:29 PM IST

ಕರೀನಾ ಕಪೂರ್ ಪ್ರೆಗ್ನೆಂಸಿ ನ್ಯೂಸ್‌ ನಂತರ, ಈಗ ಬಾಲಿವುಡ್‌ನ ಇನೊಬ್ಬ ಸ್ಟಾರ್‌ ತಾಯಿಯಾಗಲಿರುವ ಸಿಹಿ ಸುದ್ದಿ ಹೊರ ಬಿದ್ದಿದೆ. ನಟಿ ಅನುಷ್ಕ ಶರ್ಮಾ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಫ್ಯಾಮಿಲಿ ಬೆಳೆಯುತ್ತಿರುವ ವಿಷಯ ಹಂಚಿಕೊಂಡಿದ್ದಾರೆ.  ಇಬ್ಬರೂ ಸೋಶಿಯಲ್‌ ಮೀಡಿಯಾದಲ್ಲಿ  2021ರ ಜನವರಿಯಲ್ಲಿ ತಮ್ಮ ಮಗು  ಬರಲಿದೆ ಎಂದು ಹೇಳಿಕೊಂಡಿದ್ದು, ಬಾಲಿವುಡ್ ನಟರ, ಕ್ರಿಕೆಟಿಗರ ಶುಭ ಹಾರೈಕೆಗಳು ಹರಿದು ಬರುತ್ತಿವೆ.  

PREV
111
ಗ್ಯುಡ್‌ ನ್ಯೂಸ್‌ ನೀಡಿದ ವಿರುಷ್ಕಾ - 2021 ಜನವರಿಗೆ ಬರಲಿರುವ ಹೊಸ ಅತಿಥಿ

ಬಾಲಿವುಡ್‌ ಹಾಗೂ ಭಾರತೀಯ ಕ್ರಿಕೆಟಿನ ಮೋಸ್ಟ್ ಅಮೇಜಿಂಗ್ ಕಪಲ್ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿಯನ್ನು ಶೇರ್ ಮಾಡಿಕೊಂಡಿದ್ದಾರೆ.

211

ವಿರಾಟ್ ಹಾಗೂ ಅನು‍ಷ್ಕಾ ಗುಡ್‌ ನ್ಯೂಸ್‌ ನೀಡಲು ಶೇರ್‌ ಮಾಡಿಕೊಂಡಿರುವ ಈ ಫೋಟೋದಲ್ಲಿ ಅನುಷ್ಕಾ ಶರ್ಮಾರ  ಅವರ ಬೇಬಿ ಬಂಪ್ ಕಾಣಿಸುತ್ತಿದೆ.

311

ವಿರುಷ್ಕಾ ಇಬ್ಬರೂ ಇನ್ಸ್ಟಾಗ್ರಾಮ್‌ ಹಾಗೂ ಟ್ವಿಟರ್‌ ಫಾಲೋವರ್ಸ್‌ ಜೊತೆ ಸುದ್ದಿ ಹಂಚಿಕೊಂಡಿದ್ದಾರೆ.

411

ಬೇಬಿ ಬಂಪ್ ಕಾಣಿಸುವ ಈ ಫೋಟೋಗೆ  ನಾವು ಮೂರು ಆಗುತ್ತೇವೆ. ಜನವರಿ 2021ರಲ್ಲಿ ಬರಲಿದೆ ಎಂದು ಕ್ಯಾಪ್ಷನ್‌ ನೀಡಿರುವ ಕಪಲ್‌.
 
511

ಇತ್ತೀಚೆಗೆ ಮುಂಬೈ ಆಸ್ಪತ್ರೆ ಸಮೀಪ ಕಾಣಿಸಿದ್ದ ಅನುಷ್ಕಾ ಗರ್ಭಿಣಿ ಎಂಬ ರೂಮರ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. 

611

ಈ ಜೋಡಿಯ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ. ವಿರಾಟ್ ಮತ್ತು ಅನುಷ್ಕಾ ಫ್ಯಾನ್ಸ್‌ ಜೊತೆ ಸೆಲೆಬ್ರೆಟಿಗಳೂ ಸಹ ವಿಶ್‌ ಮಾಡುತ್ತಿದ್ದಾರೆ.

711

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ರಲ್ಲಿ ಭಾಗವಹಿಸಲು ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಪ್ರಸ್ತುತ ಯುಎಇಯಲ್ಲಿದ್ದಾರೆ, ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದಾರೆ.

811

ಲಾಕ್ ಡೌನ್‌ನ ಸಮಯವನ್ನು ವಿರಾಟ್ ಮತ್ತು ಅನುಷ್ಕಾ  ಒಟ್ಟಿಗೆ ಕಳೆದಿದ್ದರು. ತಂಡದೊಂದಿಗೆ ಯುಎಇಗೆ ಹೋಗುವುದು ಸರಿಯಲ್ಲವೆಂದು ಭಾವಿಸಿದ ಕೊಹ್ಲಿ, ಒಬ್ಬಂಟಿಯಾಗಿ ವಿಮಾನದಲ್ಲಿ ಪಯಣಿಸಿದ್ದರು.

911

ಆಡ್‌ ಶೂಟ್‌ ಸಮಯದಲ್ಲಿ ಇಬ್ಬರೂ ಮೊದಲ ಬಾರಿಗೆ ಭೇಟಿಯಾದರು ಮತ್ತು ಕೆಲವು ಭೇಟಿ ನಂತರ ಪರಸ್ಪರ ಇಷ್ಟಪಡಲು ಪ್ರಾರಂಭಿಸಿದರು.

1011

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ 12 ಡಿಸೆಂಬರ್ 2017 ರಂದು ಇಟಲಿಯಲ್ಲಿ ವಿವಾಹವಾದರು. ಆಪ್ತರು ಮತ್ತು ಕುಟುಂಬ ಸದಸ್ಯರು ಮಾತ್ರ ಉಪಸ್ಥಿತರಿದ್ದರು.  

1111

ಅನುಷ್ಕಾ-ವಿರಾಟ್ ಸಂಬಂಧವು ಕೆಲವು ವರ್ಷಗಳಿಂದಲ್ಲ, ಬಾಲ್ಯದಿಂದಲೇ ಪರಿಚಯವಂತೆ. ವಾಸ್ತವವಾಗಿ, ಅನುಷ್ಕಾ ಬೆಂಗಳೂರಿನಲ್ಲಿದ್ದಾಗ, ಆಕೆಯ ಸಹೋದರ ಕರ್ನೇಶ್ ಮತ್ತು ವಿರಾಟ್ ಕ್ರಿಕೆಟ್ ಆಡಲು ಒಂದೇ ಸ್ಥಳಕ್ಕೆ ಹೋಗುತ್ತಿದ್ದರಂತೆ. ವಿರಾಟ್ ಕ್ರಿಕೆಟ್ ತರಬೇತಿ ಪಡೆಯುತ್ತಿದ್ದರು. ನಿಧಾನವಾಗಿ ವಿರಾಟ್ ಕರ್ಣೇಶ್ ಜೊತೆ ಮನೆಗೆ ಬರಲು ಪ್ರಾರಂಭಿಸಿದರು. ಈ ಸಮಯದಲ್ಲಿ, ಅವರು ಅನುಷ್ಕಾ ಅವರೊಂದಿಗೆ ಸ್ನೇಹಿತರಾದರಂತೆ.

click me!

Recommended Stories