ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಸಂಸದನಾದ ಬಳಿಕ ಹಲವು ಸಾಮಾಜಿಕ ಕಾರ್ಯಗಳನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ. ದೆಹಲಿ ಕಸದ ಸಮಸ್ಯೆಗೆ ಮುಕ್ತಿ ನೀಡಲು ಅವಿರತ ಪ್ರಯತ್ನ ಮಾಡುತ್ತಿದ್ದಾರೆ.
undefined
ಇದೀಗ ಗೌತಮ್ ಗಂಭೀರ್ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಪೂರ್ವ ದೆಹಲಿಯ ತನ್ನ ಕ್ಷೇತ್ರದಲ್ಲಿ ಜನ ರಸೋಯಿ ಕ್ಯಾಂಟೀನ್ ಆರಂಭಿಸಿದ್ದಾರೆ.
undefined
ಈ ಕ್ಯಾಂಟೀನ್‌ನಲ್ಲಿ ಗೌತಮ್ ಗಂಭೀರ್ ಬಡವರಿಗೆ 1 ರೂಪಾಯಿ ತಮ್ಮ ಕ್ಯಾಂಟೀನ್ ಮೂಲಕ ಊಟ ನೀಡುತ್ತಿದ್ದಾರೆ. ಇದೀಗ ಗಾಂಧೀನಗರದಲ್ಲಿ ಮೊದಲ ಕ್ಯಾಂಟೀನ್ ಆರಂಭಿಸಿದ್ದಾರೆ.
undefined
ಗೌತಮ್ ಗಂಭೀರ್ ತಮ್ಮ 10 ಅಸೆಂಬ್ಲಿಯಲ್ಲಿ ತಲಾ ಒಂದೊಂದು ಜನ ರಸೋಯಿ ಕ್ಯಾಂಟೀನ್ ಆರಂಭಿಸಲು ಯೋಜನೆ ಹಾಕಿಕೊಂಡಿದ್ದಾರೆ. ಬಡವರಿಗೆ ಉತ್ತಮ ಆಹಾರ ಸಿಗಬೇಕು ಎಂದು ಗಂಭೀರ್ ಹೇಳಿದ್ದಾರೆ.
undefined
ಬಡವರು ಒಂದು ಹೊತ್ತಿನ ಊಟಕ್ಕೆ ಪರದಾಡುವ ಪರಿಸ್ಥಿತಿ ನೋಡಿದಾಗ ಮನಸ್ಸಿಗೆ ತುಂಬಾ ನೋವಾಗಿದೆ. ಹೀಗಾಗಿ ಕಡಿಮೆ ಹಣದಲ್ಲಿ ಬಡವರಿಗೆ ಉತ್ತಮ ಊಟ ಸಿಗುವಂತಾಗಬೇಕು ಎಂಬುದೇ ಈ ಕ್ಯಾಂಟೀನ್ ಉದ್ದೇಶ ಎಂದು ಗಂಭೀರ್ ಹೇಳಿದ್ದಾರೆ.
undefined
ಗಾಂಧೀನಗರದಲ್ಲಿ ಉದ್ಘಾಟನೆ ಮಾಡಿರುವ ಹೊಟೆಲ್ 100 ಮಂದಿ ಕುಳಿತು ಊಟ ಮಾಡಬುಹುದಾಗಿದೆ. ಈ ಕ್ಯಾಂಟೀನ್‌ಗೆ ಸರ್ಕಾರದಿಂದ ಯಾವುದೇ ಹಣ ಪಡೆಯುತ್ತಿಲ್ಲ.
undefined
ಕ್ರಿಕೆಟಿಗ ಗೌತಮ್ ಗಂಭೀರ್ ವೈಯುಕ್ತಿ ಹಣ ಹಾಗೂ ಗಂಭೀರ್ ಫೌಂಡೇಶನ್ ಈ ಕ್ಯಾಂಟೀನ್ ಉಸ್ತುವಾರಿ ನೋಡಿಕೊಳ್ಳಲಿದ. ಇದರ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಲಿದೆ.
undefined