Big Breaking: ಭಾರತದಲ್ಲೇ ನಡೆಯಲಿದೆ IPL 2022, ಈ ಎರಡು ನಗರಗಳಲ್ಲಿ ಟೂರ್ನಿಗೆ ಆತಿಥ್ಯ..!

Suvarna News   | Asianet News
Published : Feb 11, 2022, 02:29 PM IST

ಬೆಂಗಳೂರು: ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯು ಈ ಬಾರಿ ಅಂದರೆ 2022ರ ಐಪಿಎಲ್ (IPL 2022) ಟೂರ್ನಿಯು ಭಾರತದಲ್ಲಿಯೇ ನಡೆಯಲಿದೆ. 2019ರ ಬಳಿಕ ಸಂಪೂರ್ಣ ಐಪಿಎಲ್ ಟೂರ್ನಿಯನ್ನು ಭಾರತದ ಎರಡು ನಗರಗಳ 5 ಸ್ಟೇಡಿಯಂನಲ್ಲಿ ಆಯೋಜಿಸಲು ಬಿಸಿಸಿಐ (BCCI) ತೀರ್ಮಾನಿಸಿದೆ. ಈ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ನೀಡಿದೆ. ಈ ಕುರಿತಂತೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. 

PREV
16
Big Breaking: ಭಾರತದಲ್ಲೇ ನಡೆಯಲಿದೆ IPL 2022, ಈ ಎರಡು ನಗರಗಳಲ್ಲಿ ಟೂರ್ನಿಗೆ ಆತಿಥ್ಯ..!

2019ರ ಬಳಿಕ ಇದೀಗ 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಸಂಪೂರ್ಣ ಟೂರ್ನಿಯನ್ನು ಭಾರತದಲ್ಲಿಯೇ ಆಯೋಜಿಸಲು ಬಿಸಿಸಿಐ ತೀರ್ಮಾನಿಸಿದೆ. ಸಂಪೂರ್ಣ ಐಪಿಎಲ್ 2022 ಟೂರ್ನಿಯು ಭಾರತದಲ್ಲಿಯೇ ನಡೆಯಲಿದೆ. ಆದರೆ ಕೇವಲ ಎರಡು ನಗರಗಳಲ್ಲಿ ಮಾತ್ರ ಐಪಿಎಲ್ ಟೂರ್ನಿಯು ನಡೆಯಲಿದೆ. 

26

ಹೌದು, ಮುಂಬೈ ಮತ್ತು ಪುಣೆಯಲ್ಲಿ ಈ ಬಾರಿಯ ಐಪಿಎಲ್ ನಡೆಯಲಿದೆ. ಮಹಾರಾಷ್ಟ್ರದ ಈ ಎರಡು ನಗರಗಳಲ್ಲಿ 5 ಸ್ಟೇಡಿಯಂಗಳಲ್ಲಿ ಸಂಪೂರ್ಣ ಟೂರ್ನಿಯು ನಡೆಯಲಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ ಸೋದರ ಸಂಸ್ಥೆಯಾದ Asianet Newsable ಗೆ ಉನ್ನತ ಮೂಲಗಳು ಖಚಿತ ಪಡಿಸಿವೆ.

36

ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಮಂಡಳಿಯು ಇದುವರೆಗೂ 15ನೇ ಆವೃತ್ತಿಯ ಐಪಿಎಲ್ ಟೂರ್ನಿ ಯಾವಾಗಿಂದ ಆರಂಭವಾಗಲಿದೆ ಎನ್ನುವ ವಿಚಾರವನ್ನು ಇನ್ನೂ ಖಚಿತಪಡಿಸಿಲ್ಲ. ಆದಾಗಿಯೂ ಮುಂಬೈನ ವಾಂಖೆಡೆ ಮೈದಾನ, ಬ್ರಬೋರ್ನ್‌ ಸ್ಟೇಡಿಯಂ, ಡಿ.ವೈ. ಪಾಟೀಲ್ ಸ್ಟೇಡಿಯಂ ಹಾಗೂ ಪುಣೆಯ ಸಮೀಪದಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಂ ಹಾಗೂ ನವಿ ಮುಂಬೈನಲ್ಲಿರುವ ರಿಲಯನ್ಸ್ ಕ್ರಿಕೆಟ್ ಸ್ಟೇಡಿಯಂ, ಹೀಗೆ 5 ನಗರದಲ್ಲಿ ಟೂರ್ನಿ ನಡೆಸಲು ಬಿಸಿಸಿಐ ತೀರ್ಮಾನಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
 

46

ಈ ವಿಚಾರದ ಕುರಿತಂತೆ ಬೆಂಗಳೂರಿನಲ್ಲಿ ಇದೇ ಫೆಬ್ರವರಿ 12 ಹಾಗೂ 13ರಂದು ನಡೆಯಲಿರುವ ಐಪಿಎಲ್ ಆಟಗಾರರ ಹರಾಜು ಮುಕ್ತಾಯದ ಬಳಿಕ ಬಿಸಿಸಿಐ ಅಧಿಕೃತ ಘೋಷಣೆ ಮಾಡಲಿದೆ ಎಂದು ತಿಳಿದು ಬಂದಿದೆ.

56

ಕೋವಿಡ್‌ ಕಾರಣದಿಂದಾಗಿ ಐಪಿಎಲ್ ಟೂರ್ನಿಯನ್ನು ಮೈದಾನಕ್ಕೆ ಹೋಗಿ ಎಂಜಾಯ್ ಮಾಡಲು ಕ್ರಿಕೆಟ್ ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. 2020ರ ಸಂಪೂರ್ಣ ಐಪಿಎಲ್ ಟೂರ್ನಿಯು ಯುಎಇನಲ್ಲಿ ನಡೆದರೆ, 2021ರ ಐಪಿಎಲ್ ಟೂರ್ನಿಯ ಅರ್ಧ ಪಂದ್ಯಾವಳಿಗಳು ಯುಎಇಗೆ ಸ್ಥಳಾಂತರವಾಗಿತ್ತು. 

66

ಯುಎಇನಲ್ಲಿ ಕೇವಲ ಮೂರು ಸ್ಟೇಡಿಯಂಗಳಲ್ಲಿ ಐಪಿಎಲ್‌ ಟೂರ್ನಿಯು ನಡೆದಿತ್ತು. ಅಬುಧಾಬಿ, ಶಾರ್ಜಾ ಹಾಗೂ ದುಬೈನಲ್ಲಿ ಐಪಿಎಲ್ ಪಂದ್ಯಾವಳಿಗಳು ನಡೆದಿದ್ದವು. ಆದರೆ ಈ ಬಾರಿ ಐಪಿಎಲ್‌ ಫ್ರಾಂಚೈಸಿಗಳು ಯುಎಇನಲ್ಲಿ ಟೂರ್ನಿ ನಡೆಸುವುದು ಬೇಡ ಎಂದು ಮನವಿ ಮಾಡಿದ್ದಾಗಿಯೂ ವರದಿಯಾಗಿತ್ತು.

Read more Photos on
click me!

Recommended Stories