ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಆರೆಸ್ಟ್..!

First Published | Dec 22, 2020, 1:57 PM IST

ಮುಂಬೈ: ಕ್ರಿಕೆಟ್‌ ವಲಯದಿಂದ ಆಘಾತಕಾರಿಯಾದಂತ ಸುದ್ದಿಯೊಂದು ಹೊರಬಿದ್ದಿದ್ದು, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಸುರೇಶ್ ರೈನಾ ಮಾತ್ರವಲ್ಲದೇ ಖ್ಯಾತ ನಟಿ ಸುಸೇನ್ ಖಾನ್, ಗಾಯಕ ಗುರು ರಾಂಧವ ಸೇರಿದಂತೆ 43 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಅಷ್ಟಕ್ಕೂ ರೈನಾ ಮಾಡಿದ್ದೇನು? ಆಮೇಲೇನಾಯ್ತು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ್ದ ಸುರೇಶ್ ರೈನಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಸುರೇಶ್ ರೈನಾ ಮಾತ್ರವಲ್ಲದೇ ಪಂಜಾಬಿನ ಖ್ಯಾತ ಗೀತ ರಚನೆಕಾರ ಹಾಗೂ ಗಾಯಕ ಗುರು ರಾಂಧವ, ಬಾಲಿವುಡ್ ಸೆಲಿಬ್ರಿಟಿ ಸುಸೇನ್ ಖಾನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Tap to resize

ಮುಂಬೈ ವಿಮಾನ ನಿಲ್ದಾಣದ ಸಮೀಪವಿರುವ ಡ್ರ್ಯಾಗನ್‌ಫ್ಲೈ ಕ್ಲಬ್‌ನಲ್ಲಿ ಪಾರ್ಟಿ ಮಾಡುತ್ತಿರುವಾಗಲೇ ಪೊಲೀಸರು ರೈನಾ ಅವರನ್ನು ವಶಕ್ಕೆ ಪಡೆದಿದ್ದಾರೆ.
ಮುಂಬೈನ ಡ್ರ್ಯಾಗನ್‌ಫ್ಲೈ ಕ್ಲಬ್‌ನ 7 ಸಿಬ್ಬಂದಿ ಸೇರಿದಂತೆ ಒಟ್ಟು 34 ಮಂದಿಯನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದು, ಆ ಬಳಿಕ ಬೇಲ್‌ ಮೇಲೆ ಬಿಡುಗಡೆ ಮಾಡಿದ್ದಾರೆ.
ಕೋವಿಡ್ 19 ಶಿಷ್ಟಾಚಾರಗಳನ್ನು ಉಲ್ಲಂಘಿಸಿದ ತಪ್ಪಿಗಾಗಿ ಸುರೇಶ್ ರೈನಾ ಸೇರಿದಂತೆ 34 ಮಂದಿಯನ್ನು ಬಂಧಿಸಿದ್ದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ.
ಸುರೇಶ್ ರೈನಾ ಸೇರಿದಂತೆ 34 ಮಂದಿಯ ವಿರುದ್ದ ಐಪಿಸಿ 188, 269, 34 ಸೆಕ್ಷನ್ ಅಡಿ ಕೇಸ್ ದಾಖಲು ಮಾಡಲಾಗಿತ್ತು. ಆಮೇಲೆ ಬೇಲ್ ನಡಿ ಬಿಡುಗಡೆ ಮಾಡಲಾಗಿದೆ.
ಅವಧಿಗೂ ಮೀರಿ ಕ್ಲಬ್ ತೆರೆದಿದ್ದಕ್ಕೆ ಹಾಗೂ ಕೋವಿಡ್ ನಿಯಮಾವಳಿಗಳನ್ನು ಪಾಲಿಸದಿರುವುದಕ್ಕೆ ಮುಂಬೈ ಪೊಲೀಸರು ಕೇಸ್ ದಾಖಲಿಸಿದ್ದರು.
ಕೊರೋನಾ ಮುನ್ನೆಚ್ಚರಿಕಾ ಕಾರಣದಿಂದ ಮುಂಬೈನಲ್ಲಿ ಹೊಸ ವರ್ಷಾಚರಣೆಗೂ ಮುನ್ನ ಮಹಾರಾಷ್ಟ್ರ ಸರ್ಕಾರ ಹಲವು ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿಗೊಳಿಸಿದೆ.

Latest Videos

click me!