ಬಾಕ್ಸಿಂಗ್ ಡೇ ಟೆಸ್ಟ್‌ಗೂ ಮುನ್ನ ಹೆಚ್ಚಾಯ್ತು ಟೀಂ ಇಂಡಿಯಾಗೆ ತಲೆನೋವು..!

First Published Dec 20, 2020, 1:55 PM IST

ಬೆಂಗಳೂರು: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ 8 ವಿಕೆಟ್‌ಗಳ ಹೀನಾಯ ಸೋಲು ಕಂಡಿದೆ. ಭಾರತೀಯ ಬ್ಯಾಟ್ಸ್‌ಮನ್‌ಗಳ ದಯನೀಯ ವೈಫಲ್ಯದಿಂದಾಗಿ 5 ದಿನಗಳ ಕಾಲ ನಡೆಯಬೇಕಿದ್ದ ಟೆಸ್ಟ್‌ ಪಂದ್ಯ ಕೇವಲ ಮೂರು ದಿನದೊಳಗೆ ಮುಕ್ತಾಯವಾಗಿದೆ.
ಈ ಆಘಾತಕಾರಿ ಸೋಲಿನ ಶಾಕ್‌ ಒಂದು ಕಡೆಯಾದರೆ, 26ರಿಂದ ಮೆಲ್ಬರ್ನ್‌ ಕ್ರಿಕೆಟ್‌ ಮೈದಾನದಲ್ಲಿ ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೂ ಟೀಂ ಇಂಡಿಯಾ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಬಾಕ್ಸಿಂಗ್ ಡೇ ಟೆಸ್ಟ್‌ಗೂ ಮುನ್ನ ಟೀಂ ಇಂಡಿಯಾ ಮುಂದಿರುವ ಸವಾಲುಗಳೇನು ಎನ್ನುವುದರ ಡೀಟೈಲ್ಸ್‌ ಇಲ್ಲಿದೆ ನೋಡಿ.

1. ಆಸ್ಟ್ರೇಲಿಯಾ ತಂಡಕ್ಕೆ ವಾಪಾಸಾಗಲಿರುವ ಡೇವಿಡ್ ವಾರ್ನರ್:
undefined
ಗಾಯದ ಸಮಸ್ಯೆಯಿಂದ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದ ಡೇವಿಡ್‌ ವಾರ್ನರ್ ಮೆಲ್ಬರ್ನ್‌ ಟೆಸ್ಟ್‌ಗೆ ಕಾಂಗರೂ ಪಡೆಯನ್ನು ಕೂಡಿಕೊಳ್ಳಲಿದ್ದಾರೆ. ವಾರ್ನರ್ ಟೀಂ ಇಂಡಿಯಾ ಬೌಲರ್‌ಗಳನ್ನು ಕಾಡುವ ಸಾಧ್ಯತೆಯಿದೆ.
undefined
2. ಭಾರತಕ್ಕೆ ಹಿಂದಿರುಗಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ
undefined
ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತವರಿಗೆ ವಾಪಾಸಾಗಲಿದ್ದು, ಕೊಹ್ಲಿ, ರೋಹಿತ್ ಶರ್ಮಾ ಅನುಪಸ್ಥಿತಿ ಭಾರತಕ್ಕೆ ಸವಾಲಾಗುವ ಸಾಧ್ಯತೆಯಿದೆ.
undefined
3. ಮೆಲ್ಬರ್ನ್ ಕ್ರಿಕೆಟ್‌ ಮೈದಾನದಲ್ಲಿ ಭಾರತ ತಂಡದ ಕಳಪೆ ಸಾಧನೆ
undefined
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಇದುವರೆಗೂ 13 ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 8 ಪಂದ್ಯಗಳಲ್ಲಿ ಆಸೀಸ್ ಗೆಲುವು ದಾಖಲಿಸಿದ್ದರೆ, ಭಾರತ ಕೇವಲ 3 ಪಂದ್ಯಗಳಲ್ಲಿ ಮಾತ್ರ ಗೆಲುವಿನ ನಗೆ ಬೀರಿದೆ. ಇನ್ನೆರಡು ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ.
undefined
4. ಮೊಹಮ್ಮದ್ ಶಮಿಗೆ ಗಾಯ; ಅನುಭವಿ ವೇಗಿಯ ಕೊರತೆ
undefined
ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಮೊಣಕೈ ಮೂಳೆ ಗಾಯಕ್ಕೆ ತುತ್ತಾಗಿರುವ ಮೊಹಮ್ಮದ್ ಶಮಿ ಬಹುತೇಕ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದು, ಟೀಂ ಇಂಡಿಯಾಗೆ ಅನುಭವಿ ವೇಗಿಯ ಕೊರತೆ ಕಾಡುವ ಸಾಧ್ಯತೆಯಿದೆ.
undefined
5. ತಂಡದ ಆಯ್ಕೆಯಲ್ಲಿ ಮತ್ತಷ್ಟು ಗೊಂದಲಗಳು ಉಂಟಾಗಬಹುದು..!
undefined
ಕೊಹ್ಲಿ ಅನುಪಸ್ಥಿತಿಯಲ್ಲಿ ಯಾರಿಗೆ ತಂಡದಲ್ಲಿ ಸ್ಥಾನ ನೀಡಬೇಕು? ಆರಂಭಿಕರು ಯಾರಾಗಬೇಕು? ಸಾಹ ಬದಲು ಪಂತ್‌ಗೆ ಅವಕಾಶ ನೀಡಬೇಕೇ ಹೀಗೆ ಬಾಕ್ಸಿಂಗ್ ಡೇ ಟೆಸ್ಟ್‌ಗೂ ಮುನ್ನ ಹತ್ತು-ಹಲವು ಗೊಂದಲಗಳು ಟೀಂ ಇಂಡಿಯಾ ತಲೆನೋವು ಮತ್ತಷ್ಟು ಹೆಚ್ಚುವಂತೆ ಮಾಡಿದೆ.
undefined
click me!