ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್
ಮಧ್ಯಪ್ರದೇಶದ ಇಂದೋರ್‌ನಲ್ಲಿ 1973 ರ ಜನವರಿ 11 ರಂದು ಜನಿಸಿದ ರಾಹುಲ್ ದ್ರಾವಿಡ್ 1996 ರಿಂದ 2012 ರವರೆಗೆ ಭಾರತ ತಂಡವನ್ನು ಪ್ರತಿನಿಧಿಸಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ವಿಕೆಟ್ ಕೀಪರ್ ಮತ್ತು ನಾಯಕರಾಗಿ ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದಾರೆ.
ಬೆಂಗಳೂರಿನ ಸೇಂಟ್ ಜೋಸೆಫ್ ಶಾಲೆಯಲ್ಲಿ ಶಿಕ್ಷಣ ಪಡೆದಿರುವ ರಾಹುಲ್ ದ್ರಾವಿಡ್, ಸೇಂಟ್ ಜೋಸೆಫ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಕ್ರಿಕೆಟ್ ಮೇಲಿನ ಅಪಾರ ಆಸಕ್ತಿಯಿಂದಾಗಿ 12 ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದ ಅವರು ಅಂಡರ್ 15, ಅಂಡರ್ 17 ಮತ್ತು ಅಂಡರ್ 19 ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.
ರಾಹುಲ್ ದ್ರಾವಿಡ್ ರಣಜಿ ಪಂದ್ಯ
1991 ರ ಫೆಬ್ರವರಿಯಲ್ಲಿ ಕರ್ನಾಟಕ ತಂಡದ ಪರವಾಗಿ ರಣಜಿ ಟ್ರೋಫಿ ಟೂರ್ನಿಗೆ ಪಾದಾರ್ಪಣೆ ಮಾಡಿದರು. ದೇಶಿ ಕ್ರಿಕೆಟ್‌ನಲ್ಲಿ ಮಿಂಚಿದ ಬಳಿಕ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಅವರು ಟೆಸ್ಟ್, ಏಕದಿನ ಮತ್ತು ಟಿ20 ಕ್ರಿಕೆಟ್ ಆಡಿ ಸೈ ಎನಿಸಿಕೊಂಡಿದ್ದಾರೆ. ದ ವಾಲ್ ಖ್ಯಾತಿಯ ದ್ರಾವಿಡ್ ನಿವ್ವಳ ಮೌಲ್ಯ ರೂ.320 ಕೋಟಿಗಳಾಗಿವೆ ಎಂದು ವರದಿಯಾಗಿದೆ.
ರಾಹುಲ್ ದ್ರಾವಿಡ್
ಇದಲ್ಲದೆ, ಬ್ರಾಂಡ್ ಜಾಹೀರಾತುಗಳು, ಕೋಚಿಂಗ್ ಕೆಲಸಗಳಿಂದ ರಾಹುಲ್ ದ್ರಾವಿಡ್ ಅವರ ಗಳಿಕೆಯು ಅವರ ಜೀವನ ಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಟೀಂ ಇಂಡಿಯಾ ಹೆಡ್ ಕೋಚ್ ಹುದ್ದೆಯಿಂದ ಕೆಳಗಿಳಿದ ಬಳಿಕ ದ್ರಾವಿಡ್, ಇದೀಗ ಮತ್ತೊಮ್ಮೆ ರಾಜಸ್ಥಾನ ರಾಯಲ್ಸ್ ತಂಡದ ಹೆಡ್ ಕೋಚ್ ಆಗಿ ನೇಮಕವಾಗಿದ್ದಾರೆ.
ರಾಹುಲ್ ದ್ರಾವಿಡ್ ಕಾರು ಸಂಗ್ರಹ
ಬೆಂಗಳೂರಿನ ಇಂದಿರಾ ನಗರದಲ್ಲಿ ರಾಹುಲ್ ದ್ರಾವಿಡ್ ರೂ.4 ಕೋಟಿ ಮೌಲ್ಯದ ಐಷಾರಾಮಿ ಮನೆ ಹೊಂದಿದ್ದಾರೆ. ರೂ.80 ಲಕ್ಷ ಮೌಲ್ಯದ ಮರ್ಸಿಡಿಸ್ ಬೆನ್ಜ್ GLI, ರೂ.72 ಲಕ್ಷದ BMW 5 ಸರಣಿ, ರೂ.55 ಲಕ್ಷ ಮೌಲ್ಯದ ಆಡಿ Q5 SUV ಸೇರಿದಂತೆ ಹಲವು ಕಾರುಗಳನ್ನು ದ್ರಾವಿಡ್ ಹೊಂದಿದ್ದಾರೆ.
ರಾಹುಲ್ ದ್ರಾವಿಡ್ ಕ್ರಿಕೆಟ್ ಜೀವನ
ಭಾರತದ ಗೋಡೆ ಎಂದೇ ಖ್ಯಾತಿ ಪಡೆದಿದ್ದ ರಾಹುಲ್ ದ್ರಾವಿಡ್ ಕ್ರಿಕೆಟ್‌ನಲ್ಲಿ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಅದರಲ್ಲಿ ಮುಖ್ಯವಾದುದು 1999 ರ ವಿಶ್ವಕಪ್‌ನಲ್ಲಿ ಕೀನ್ಯಾ ವಿರುದ್ಧದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಜೊತೆಗೂಡಿ 237 ರನ್‌ಗಳ ಜೊತೆಯಾಟ ನೀಡಿದ್ದು. ಈ ಪಂದ್ಯದಲ್ಲಿ ದ್ರಾವಿಡ್ 104 ರನ್ ಗಳಿಸಿ ಅಜೇಯರಾಗಿದ್ದರು.
ರಾಹುಲ್ ದ್ರಾವಿಡ್ ಕ್ರಿಕೆಟ್ ವೃತ್ತಿಜೀವನ
ಅದೇ ರೀತಿ 2001 ರ ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ವಿವಿಎಸ್ ಲಕ್ಷ್ಮಣ್ ಜೊತೆಗೂಡಿ 376 ರನ್‌ಗಳ ಜೊತೆಯಾಟ ನೀಡಿದ್ದರು. ಈ ಪಂದ್ಯದಲ್ಲಿ ದ್ರಾವಿಡ್ 180 ರನ್ ಗಳಿಸಿದ್ದರು. ಆ ಪಂದ್ಯದಲ್ಲಿ ಫಾಲೋ ಆನ್‌ಗೆ ಒಳಗಾಗಿದ್ದ ಭಾರತ ಬಲಿಷ್ಠ ಆಸೀಸ್ ಎದುರು ಗೆದ್ದು ಬೀಗುವಲ್ಲಿ ದ್ರಾವಿಡ್ ಪ್ರಮುಖ ಪಾತ್ರ ವಹಿಸಿದ್ದರು.
ರಾಹುಲ್ ದ್ರಾವಿಡ್ ಸಂಬಳ
ಇದಲ್ಲದೆ, ಹಲವಾರು ಬಾರಿ ದ್ರಾವಿಡ್ ಅದ್ಭುತ ಜತೆಯಾಟ ನಿಭಾಯಿಸಿದ್ದಾರೆ. ಈ ಪೈಕಿ 2003 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ವಿವಿಎಸ್ ಲಕ್ಷ್ಮಣ್ ಜೊತೆಗೂಡಿ 303 ರನ್‌ಗಳ ಜೊತೆಯಾಟವಾಡಿದ್ದರು. ಈ ಪಂದ್ಯದಲ್ಲಿ ದ್ರಾವಿಡ್ 233 ರನ್ ಗಳಿಸಿದ್ದರು.
ರಾಹುಲ್ ದ್ರಾವಿಡ್ ಪ್ರಶಸ್ತಿಗಳು
ಪ್ರಶಸ್ತಿಗಳು:
1998 ರಲ್ಲಿ ಕ್ರಿಕೆಟ್‌ನಲ್ಲಿನ ಸಾಧನೆಗಾಗಿ ಅರ್ಜುನ ಪ್ರಶಸ್ತಿ ಪಡೆದರು.
2004 ರಲ್ಲಿ ಭಾರತ ಸರ್ಕಾರದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ ಪದ್ಮಶ್ರೀ ಪ್ರಶಸ್ತಿ ಪಡೆದರು.
2004 ರಲ್ಲಿ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ಪಡೆದರು.
2012 ರಲ್ಲಿ ಸರ್ ಡಾನ್ ಬ್ರಾಡ್‌ಮನ್ ಪ್ರಶಸ್ತಿ ಪಡೆದರು.
2013 ರಲ್ಲಿ ಭಾರತ ಸರ್ಕಾರದ ಮೂರನೇ ಅತ್ಯುನ್ನತ ನಾಗರಿಕ ಗೌರವ ಪದ್ಮಭೂಷಣ ಪ್ರಶಸ್ತಿ ಪಡೆದರು.
ರಾಹುಲ್ ದ್ರಾವಿಡ್ ನಿವ್ವಳ ಮೌಲ್ಯ
ಟೆಸ್ಟ್ ಕ್ರಿಕೆಟ್‌ನಲ್ಲಿ ಯಾವ ಬ್ಯಾಟ್ಸ್‌ಮನ್ ಮಾಡದಂತಹ ಅಪರೂಪದ ಸಾಧನೆ ಮಾಡಿರುವ ರಾಹುಲ್ ದ್ರಾವಿಡ್, ಅತಿ ಹೆಚ್ಚು ಸಮಯ ಕ್ರೀಡಾಂಗಣದಲ್ಲಿ ನಿಂತು ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ದಾಖಲೆ ಹೊಂದಿದ್ದಾರೆ. 31,258 ಎಸೆತಗಳನ್ನು ಎದುರಿಸಿರುವ ರಾಹುಲ್ ದ್ರಾವಿಡ್ 44,152 ನಿಮಿಷಗಳ ಕಾಲ ಕ್ರೀಡಾಂಗಣದಲ್ಲಿ ನಿಂತಿದ್ದಾರೆ. ರಾಹುಲ್ ದ್ರಾವಿಡ್ ಕ್ರಿಕೆಟ್‌ಗೆ ನೀಡಿದ ಸಾಧನೆಯನ್ನು ಗಮನಿಸಿ 2018ರಲ್ಲಿ ಐಸಿಸಿ ಹಾಲ್ ಆಫ್ ಫೇಮ್ ಪ್ರಶಸ್ತಿ ನೀಡಿ ಗೌರವಿಸಿದೆ.