ಚೆನ್ನೈ ಪಿಚ್‌ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡಿದ ಜೋಫ್ರಾ ಆರ್ಚರ್‌..!

Suvarna News   | Asianet News
Published : Feb 11, 2021, 04:06 PM IST

ಚೆನ್ನೈ: ಭಾರತ-ಇಂಗ್ಲೆಂಡ್ ನಡುವಿನ 4 ಪಂದ್ಯಗಳ ಟೆಸ್ಟ್‌ ಸರಣಿ ಆರಂಭವಾಗಿದ್ದು, ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಚೆನ್ನೈನ ಚೆಪಾಕ್ ಮೈದಾನ ಆತಿಥ್ಯ ವಹಿಸಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ಭಾರತ ವಿರುದ್ದ ಜೋ ರೂಟ್‌ ನೇತೃತ್ವದ ಇಂಗ್ಲೆಂಡ್‌ ತಂಡ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿದೆ. ಇದೀಗ ಚೆಪಾಕ್‌ ಪಿಚ್‌ ಕುರಿತಂತೆ ಇಂಗ್ಲೆಂಡ್‌ ಡೆಡ್ಲಿ ವೇಗಿ ಜೋಫ್ರಾ ಆರ್ಚರ್‌ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅಷ್ಟಕ್ಕೂ ಎಂ.ಎ. ಚಿದಂಬರಂ ಪಿಚ್‌ ಬಗ್ಗೆ ಆರ್ಚರ್‌ ಏನಂದ್ರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.  

PREV
17
ಚೆನ್ನೈ ಪಿಚ್‌ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡಿದ ಜೋಫ್ರಾ ಆರ್ಚರ್‌..!

ಭಾರತ-ಇಂಗ್ಲೆಂಡ್‌ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಿದ್ದು, ಮೊದಲ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್‌ 227 ರನ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡಿದೆ.

27

ಬ್ಯಾಟಿಂಗ್, ಬೌಲಿಂಗ್‌ ಹಾಗೂ ಫೀಲ್ಡಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಇಂಗ್ಲೆಂಡ್‌ ತಂಡ ಬಲಿಷ್ಠ ಟೀಂ ಇಂಡಿಯಾಗೆ ತವರಿನಲ್ಲೇ ಸೋಲಿನ ಕಹಿಯುಣಿಸಿದೆ.

37

ಹೀಗಿದ್ದೂ ಚೆಪಾಕ್‌ ಪಿಚ್‌ ಕುರಿತಂತೆ ಇಂಗ್ಲೆಂಡ್‌ ವೇಗಿ ಜೋಫ್ರಾ ಆರ್ಚರ್ ಕಟು ಶಬ್ಧಗಳಿಂದ ಟೀಕಿಸಿದ್ದು, ನಾನಾಡಿದ ಅತ್ಯಂತ ಕೆಟ್ಟ ಪಿಚ್‌ ಇದಾಗಿತ್ತು ಎಂದು ಹೇಳಿದ್ದಾರೆ.

47

5ನೇ ದಿನದಾಟದಲ್ಲಿ ಇದ್ದ ಪಿಚ್‌, ಪ್ರಾಯಶಃ ನಾನಾಡಿದ ಅತ್ಯಂತ ಪಿಚ್‌ ಅದಾಗಿತ್ತು. ಕಿತ್ತಳೆ ಬಣ್ಣದ ಒರಟು ಪಿಚ್‌ನಲ್ಲಿ ಅಂದುಕೊಂಡಂತೆ ಬೌಲಿಂಗ್‌ ಮಾಡುವುದು ಕಷ್ಟಕರವಾಗಿತ್ತು ಎಂದು ಆರ್ಚರ್‌ ಹೇಳಿದ್ದಾರೆ.

57

ಕೊನೆಯ ದಿನ ನಾವು ಗೆಲ್ಲಲು ಆತಿಥೇಯ ಟೀಂ ಇಂಡಿಯಾದ 9 ವಿಕೆಟ್ ಕಬಳಿಸಬೇಕಿತ್ತು, ನಮಗೆ ಟೀಂ ಇಂಡಿಯಾವನ್ನು ಆಲೌಟ್‌ ಮಾಡುವ ವಿಶ್ವಾಸವಿತ್ತು ಎಂದು ಡೇಲಿ ಮೇಲ್‌ಗೆ ಬರೆದ ಅಂಕಣದಲ್ಲಿ ತಿಳಿಸಿದ್ದಾರೆ.

67

ಮೊದಲ ಹಾಗೂ ಎರಡನೇ ಟೆಸ್ಟ್ ಪಂದ್ಯದ ನಡುವೆ ಕೇವಲ 3 ದಿನಗಳು ಮಾತ್ರ ಬಾಕಿ ಇದ್ದು, ಚೆನ್ನೈನ ಬಿಸಿಲಿನ ವಾತಾವರಣದಲ್ಲೂ ಉತ್ತಮ ಪ್ರದರ್ಶನ ತೋರುವ ವಿಶ್ವಾಸವನ್ನು ವೇಗಿ ಆರ್ಚರ್‌ ಹೊಂದಿದ್ದಾರೆ.

77

ಭಾರತ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಜೋಫ್ರಾ ಆರ್ಚರ್‌ 3 ವಿಕೆಟ್‌ ಕಬಳಿಸಿದ್ದರು. ಎರಡನೇ ಟೆಸ್ಟ್‌ ಪಂದ್ಯ ಫೆಬ್ರವರಿ 13ರಿಂದ ಆರಂಭವಾಗಲಿದೆ.

click me!

Recommended Stories