ಪ್ರತಿ ಐಪಿಎಲ್‌ ತಂಡದ ಈ ವಿದೇಶಿ ಸ್ಟಾರ್ ಆಟಗಾರರ ಬೆಂಚ್ ಕಾಯಿಸೋದು ಪಕ್ಕಾ..!

Suvarna News   | Asianet News
Published : Mar 09, 2021, 02:46 PM IST

ಬೆಂಗಳೂರು: 14ನೇ  ಆವೃತ್ತಿಯ ಐಪಿಎಲ್‌ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಎಲ್ಲಾ 8 ಫ್ರಾಂಚೈಸಿಗಳು ಕಪ್‌ ಗೆಲ್ಲಲು ಈಗಿನಿಂದಲೇ ಪೂರ್ವ ತಯಾರಿ ಮಾಡಲಾರಂಭಿಸಿವೆ. ಏಪ್ರಿಲ್‌ 9ರಂದು ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಐಪಿಎಲ್‌ ಟೂರ್ನಿಯ ಆಡುವ ಹನ್ನೊಂದರ ಬಳಗದಲ್ಲಿ ಕೇವಲ 4 ವಿದೇಶಿ ಆಟಗಾರರಿಗೆ ಮಾತ್ರ ಅವಕಾಶವಿದ್ದು, ಸಾಕಷ್ಟು ಪ್ರತಿಭೆ ಹಾಗೂ ಸಾಮರ್ಥ್ಯವಿದ್ದರೂ ಕೆಲವು ಸ್ಟಾರ್ ವಿದೇಶಿ ಆಟಗಾರರು ಈ ಬಾರಿಯ ಐಪಿಎಲ್‌ನಲ್ಲಿ ಬೆಂಚ್‌ ಕಾಯಿಸಬೇಕಾಗಬಹುದು. ಪ್ರತಿ ತಂಡದಲ್ಲೂ ಬೆಂಚ್‌ ಕಾಯಿಸಲಿರುವ ಆಟಗಾರರ ಕಂಪ್ಲೀಟ್ ಡೀಟೈಲ್ಸ್‌ ಇಲ್ಲಿದೆ ನೋಡಿ.  

PREV
116
ಪ್ರತಿ ಐಪಿಎಲ್‌ ತಂಡದ ಈ ವಿದೇಶಿ ಸ್ಟಾರ್ ಆಟಗಾರರ ಬೆಂಚ್ ಕಾಯಿಸೋದು ಪಕ್ಕಾ..!

1. ಮುಂಬೈ ಇಂಡಿಯನ್ಸ್‌: ಕ್ರಿಸ್‌ ಲಿನ್‌

1. ಮುಂಬೈ ಇಂಡಿಯನ್ಸ್‌: ಕ್ರಿಸ್‌ ಲಿನ್‌

216

ಆಸ್ಟ್ರೇಲಿಯಾದ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ ಲಿನ್‌ ಮುಂಬೈ ತಂಡದಲ್ಲಿದ್ದರೂ ಈ ಬಾರಿ ಸಹ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದು ಅನುಮಾನ. ತಂಡದಲ್ಲಿ ಡಿ ಕಾಕ್‌, ಬೌಲ್ಟ್, ಪೊಲ್ಲಾರ್ಡ್ ಹಾಗೂ ನೇಥನ್‌ ಕೌಲ್ಟರ್-ನೈಲ್‌ ವಿದೇಶಿ ಆಟಗಾರರಾಗಿ ತಂಡದಲ್ಲಿ ಸ್ಥಾನ ಪಡೆಯಬಹುದು.

316

2.ಚೆನ್ನೈ ಸೂಪರ್ ಕಿಂಗ್ಸ್‌: ಜೋಸ್ ಹೇಜಲ್‌ವುಡ್‌

416

ಆಸೀಸ್‌ ಅನುಭವಿ ವೇಗಿ ಜೋಸ್‌ ಹೇಜಲ್‌ವುಡ್‌ ಟೆಸ್ಟ್ ಕ್ರಿಕೆಟ್‌ ಹಾಗೂ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಹೀಗಿದ್ದು ಹೇಜಲ್‌ವುಡ್‌ಗೆ ಸಿಎಸ್‌ಕೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ದೊರೆಯುವುದು ಕಷ್ಟ. ಕಾರಣ ಫಾಫ್ ಡುಪ್ಲೆಸಿಸ್‌, ಮೋಯಿನ್‌ ಅಲಿ, ಸ್ಯಾಮ್‌ ಕರನ್‌ ಹಾಗೂ ಇಮ್ರಾನ್ ತಾಹೀರ್‌ ಆಡುವ ಹನ್ನೊಂದರ ಬಳಗದಲ್ಲಿರುವ ಸಾಧ್ಯತೆಯಿದೆ.
 
516

3. ಡೆಲ್ಲಿ ಕ್ಯಾಪಿಟಲ್ಸ್‌: ಕ್ರಿಸ್ ವೋಕ್ಸ್:

3. ಡೆಲ್ಲಿ ಕ್ಯಾಪಿಟಲ್ಸ್‌: ಕ್ರಿಸ್ ವೋಕ್ಸ್:

616

ಇಂಗ್ಲೆಂಡ್‌ ಸ್ಟಾರ್ ಆಲ್ರೌಂಡರ್ ಕ್ರಿಸ್‌ ವೋಕ್ಸ್‌ ಕಳೆದ ಆವೃತ್ತಿಯ ಐಪಿಎಲ್‌ನಿಂದ ಹಿಂದೆ ಸರಿದಿದ್ದರು. ವೋಕ್ಸ್‌ ಬದಲಿಗೆ ತಂಡ ಕೂಡಕೊಂಡಿದ್ದ ಏನ್ರಿಚ್ ನೊಕಿಯೇ ತಂಡದ ಪಾಲಿಗೆ ವೇಗದ ಅಸ್ತ್ರವಾಗಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಈ ಬಾರಿ ಸಹ ವೋಕ್ಸ್‌ ಡೆಲ್ಲಿ ತಂಡದಲ್ಲಿ ಬೆಂಚ್‌ ಕಾಯಿಸುವ ಸಾಧ್ಯತೆ ಹೆಚ್ಚು.

716

4. ಪಂಜಾಬ್‌ ಕಿಂಗ್ಸ್: ಫ್ಯಾಬಿಯನ್ ಅಲನ್‌

4. ಪಂಜಾಬ್‌ ಕಿಂಗ್ಸ್: ಫ್ಯಾಬಿಯನ್ ಅಲನ್‌

816

ಕೆರಿಬಿಯನ್‌ ಸ್ಟಾರ್ ಆಲ್ರೌಂಡರ್‌ ಫ್ಯಾಬಿಯನ್‌ ಅಲನ್‌ ಟಿ20 ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಆದರೆ ಪಂಜಾಬ್‌ ತಂಡದಲ್ಲಿ ಕ್ರಿಸ್ ಗೇಲ್, ನಿಕೋಲಸ್ ಪೂರನ್‌, ಜೇ ರಿಚರ್ಡ್‌ಸನ್ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದು, ಇನ್ನೊಂದು ಸ್ಥಾನಕ್ಕೆ ಡೇವಿಡ್ ಮಲಾನ್‌, ಮೊಯ್ಸಿಸ್‌ ಹೆನ್ರಿಕೇಸ್‌ ನಡುವೆ ಫೈಟ್ ಇರೋದ್ರಿಂದ ಅಲನ್‌ ಬೆಂಚ್‌ ಕಾಯಿಸೋದು ಬಹುತೇಕ ಪಕ್ಕಾ

916

5. ಕೋಲ್ಕತ ನೈಟ್‌ ರೈಡರ್ಸ್‌: ಬೆನ್ ಕಟ್ಟಿಂಗ್

5. ಕೋಲ್ಕತ ನೈಟ್‌ ರೈಡರ್ಸ್‌: ಬೆನ್ ಕಟ್ಟಿಂಗ್

1016

ಆಸೀಸ್‌ ಆಲ್ರೌಂಡರ್‌ ಬೆನ್‌ ಕಟ್ಟಿಂಗ್ ಕೆಕೆಆರ್ ತಂಡ ಕೂಡಿಕೊಂಡಿದ್ದರೂ ಸಹಾ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳೋದು ಅನುಮಾನ. ಯಾಕೆಂದರೆ ನಾಯಕ ಮಾರ್ಗನ್‌, ಶಕೀಬ್ ಅಲ್‌ ಹಸನ್‌, ಆಂಡ್ರೆ ರಸೆಲ್ ಹಾಗೂ ಪ್ಯಾಟ್‌ ಕಮಿನ್ಸ್‌ ಕೆಕೆಆರ್‌ ತಂಡದಲ್ಲಿ ವಿದೇಶಿ ಆಟಗಾರರ ರೂಪದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.

1116

6. ಸನ್‌ ರೈಸರ್ಸ್ ಹೈದರಾಬಾದ್‌: ಮುಜೀಬ್ ಉರ್ ರೆಹಮಾನ್‌

1216

ಟಿ20 ಕ್ರಿಕೆಟ್‌ನಲ್ಲಿ ಮಿಂಚಿನ ಸಂಚಲನ ಮೂಡಿಸಿರುವ ಆಫ್ಘಾನ್‌ ಸ್ಪಿನ್ನರ್ ಮುಜೀಬ್‌ ಈ ಬಾರಿ ಸನ್‌ರೈಸರ್ಸ್ ಪರ ಬೆಂಚ್‌ ಕಾಯಿಸುವ ಸಾಧ್ಯತೆ ಹೆಚ್ಚು. ನಾಯಕ ವಾರ್ನರ್, ಕೇನ್ ವಿಲಿಯಮ್ಸನ್, ಜೇಸನ್ ಹೋಲ್ಡರ್ ಹಾಗೂ ರಶೀದ್ ಖಾನ್‌ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

1316

7. ರಾಜಸ್ಥಾನ ರಾಯಲ್ಸ್: ಡೇವಿಡ್ ಮಿಲ್ಲರ್

7. ರಾಜಸ್ಥಾನ ರಾಯಲ್ಸ್: ಡೇವಿಡ್ ಮಿಲ್ಲರ್

1416

ಕಿಲ್ಲರ್ ಮಿಲ್ಲರ್ ಎಂದೇ ಪ್ರಖ್ಯಾತಿ ಪಡೆದಿರುವ ಡೇವಿಡ್‌ ಮಿಲ್ಲರ್ ಈ ಬಾರಿ ಸಹ ರಾಜಸ್ಥಾನ ರಾಯಲ್ಸ್‌ ತಂಡದಲ್ಲಿ ಬಹುತೇಕ ಬೆಂಚ್ ಕಾಯಿಸೋದು ಫಿಕ್ಸ್‌. ಕಾರಣ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್‌, ಜೋಸ್‌ ಬಟ್ಲರ್ ಹಾಗೂ ಕ್ರಿಸ್ ಮೋರಿಸ್ ಆಡುವ ಹನ್ನೊಂದರ ಬಳಗದಲ್ಲಿ ಬಹುತೇಕ ಸ್ಥಾನ ಪಡೆಯಲಿದ್ದಾರೆ.

1516

8. ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆಡಂ ಜಂಪಾ

8. ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆಡಂ ಜಂಪಾ

1616

ಚೊಚ್ಚಲ ಆವೃತ್ತಿಯ ಕನವರಿಕೆಯಲ್ಲಿರುವ ಆರ್‌ಸಿಬಿ ಈ ಬಾರಿ ಜಂಪಾ ಅವರನ್ನು ಬೆಂಚ್ ಕಾಯಿಸುವಂತೆ ಮಾಡುವ ಸಾಧ್ಯತೆಯಿದೆ. ಕಾರಣ ಸ್ಪಿನ್‌ ವಿಭಾಗದಲ್ಲಿ ಚಹಲ್‌, ಸುಂದರ್ ಜತೆಗೆ ಮ್ಯಾಕ್ಸ್‌ವೆಲ್‌ ಕೂಡಾ ತಂಡಕ್ಕೆ ಸಾಥ್ ನೀಡಲಿದ್ದಾರೆ. ಇನ್ನುಳಿದಂತೆ ಎಬಿಡಿ, ಕೈಲ್‌ ಜೇಮಿಸನ್‌ ಹಾಗೂ ಡೇನಿಯಲ್ ಸ್ಯಾಮ್ಸ್‌ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.

click me!

Recommended Stories