ಫ್ರೆಂಡ್ ಮದುವೇಲಿ ಧೋನಿ ಹಾಗೂ ಸಾಕ್ಷಿ - ಎಥ್ನಿಕ್ ವೇರ್ ಲುಕ್ ವೈರಲ್!
First Published | Feb 17, 2021, 12:28 PM ISTಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಎಮ್.ಎಸ್.ಧೋನಿ ಹಾಗೂ ಪತ್ನಿ ಸಾಕ್ಷಿ ಧೋನಿ ಈ ದಿನಗಳಲ್ಲಿ ಅವರ ಫ್ರೆಂಡ್ ಪ್ರಿಯಾಂಶು ಚೋಪ್ರಾ ಅವರ ಮದುವೆಯಲ್ಲಿ ಪಾಲ್ಗೊಂಡಿದ್ದರು. ಫೆಬ್ರವರಿ 15ರಂದು ನಡದ ಈ ಮದುವೆಯ ಸಂದರ್ಭದಲ್ಲಿನ ಧೋನಿ ಹಾಗೂ ಸಾಕ್ಷಿ ಫೋಟೋಗಳು ವೈರಲ್ ಆಗಿವೆ. ಪಿಂಕ್ ಕಲರ್ ಲೆಹಂಗಾ ಧರಿಸಿದ್ದ ಸಾಕ್ಷಿ ಧೋನಿ ತುಂಬಾ ಸುಂದರವಾಗಿ ಕಾಣಿಸುತ್ತಿದ್ದರು. ಅದೇ ಸಮಯದಲ್ಲಿ ಧೋನಿ ಡಿಸೈನರ್ ಕುರ್ತಾ ಹಾಗೂ ಪೈಜಾಮದಲ್ಲಿ ಮಿಂಚಿದರು. ಸಾಕ್ಷಿ ತಮ್ಮ ಸೋಶಿಯಲ್ ಮೀಡಿಯಾ ಆಕೌಂಟ್‌ನಲ್ಲಿ ಮದುವೆಯ ಹಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.