ಬಹುನಿರೀಕ್ಷಿತ ಮಿನಿ ಹರಾಜು ಫೆಬ್ರವರಿ 18ರಂದು ಚೆನ್ನೈನಲ್ಲಿ ಮಧ್ಯಾಹ್ನ ಸರಿಯಾಗಿ 3 ಗಂಟೆಗೆ ಆಟಗಾರರ ಹರಾಜು ನಡೆಯಲಿದೆ.ಈ ಬಾರಿಯ ಹರಾಜಿನಲ್ಲಿ 164 ಭಾರತೀಯ ಆಟಗಾರರು, 125 ವಿದೇಶಿ ಆಟಗಾರರು ಹಾಗೂ 3 ಐಸಿಸಿ ಅಸೋಸಿಯೇಟ್ ರಾಷ್ಟ್ರಗಳ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ.
undefined
ಹರಾಜಿನ ಅಂತಿಮ ಕಣದಲ್ಲಿ ಒಟ್ಟು 292 ಆಟಗಾರರಿದ್ದು, ಈ ಪೈಕಿ ಎಲ್ಲಾ 8 ಫ್ರಾಂಚೈಸಿಗಳು ಸೇರಿ ಗರಿಷ್ಠವೆಂದರೆ 22 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 61 ಆಟಗಾರರನ್ನು ಖರೀದಿಸಬಹುದಾಗಿದೆ.
undefined
ಭಾರತದ ಇಬ್ಬರು ಆಟಗಾರರಾದ ಹರ್ಭಜನ್ ಸಿಂಗ್ ಹಾಗೂ ಕೇದಾರ್ ಜಾಧವ್ ಸೇರಿದಂತೆ ಒಟ್ಟು 10 ಆಟಗಾರರು 2 ಕೋಟಿ ರುಪಾಯಿ ಮೂಲಬೆಲೆಯನ್ನು ಹೊಂದಿದ್ದಾರೆ.
undefined
2 ಕೋಟಿ ಮೂಲಬೆಲೆ ಹೊಂದಿದ ಇತರ ಆಟಗಾರರೆಂದರೆ, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಶಕೀಬ್ ಅಲ್ ಹಸನ್, ಮೋಯಿನ್ ಅಲಿ, ಸ್ಯಾಮ್ ಬಿಲ್ಲಿಂಗ್ಸ್, ಲಿಯಾಮ್ ಫ್ಲಂಕೆಟ್, ಜೇಸನ್ ರಾಯ್ ಮತ್ತು ಮಾರ್ಕ್‌ವುಡ್.
undefined
12 ಆಟಗಾರರು 1.5 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದು, ಈ ಪಟ್ಟಿಯಲ್ಲಿ ಅಲೆಕ್ಸ್ ಹೇಲ್ಸ್, ಅಲೆಕ್ಸ್ ಕ್ಯಾರಿ, ಡೇವಿಡ್ ಮಲಾನ್, ಮಾರ್ನೆ ಮಾರ್ಕೆಲ್, ಗ್ರೆಗೋರಿ ಲೆವೀಸ್, ಡೇವಿಡ್ ವಿಲ್ಲೆ, ಟಾಮ್ ಕರ್ರನ್, ಶಾನ್ ಮಾರ್ಶ್, ಆದಿಲ್ ರಶೀದ್, ಮುಜೀಬ್ ಉರ್ ರೆಹಮಾನ್, ಜೇ ರಿಚರ್ಡ್‌ಸನ್ ಮತ್ತು ನೇಥನ್ ಕೌಲ್ಟರ್-ನೈಲ್.
undefined
ಇನ್ನು ಭಾರತದ ಉಮೇಶ್ ಯಾದವ್ ಮತ್ತು ಹನುಮ ವಿಹಾರಿ ಸೇರಿದಂತೆ 11 ಆಟಗಾರರು ಒಂದು ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದಾರೆ.
undefined
ಅಮೆರಿಕದ ಅಲಿ ಖಾನ್, ನೇಪಾಳದ ಸಂದೀಪ್ ಲಾಮಿಚ್ಚಾನೆ ಹಾಗೂ ಯುಎಇಯ ಕಾರ್ತಿಕ್ ಮರಿಯಪ್ಪನ್ ಐಸಿಸಿ ಅಸೋಸಿಯೇಟ್ ರಾಷ್ಟ್ರದ ಆಟಗಾರರಾಗಿದ್ದು, ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
undefined
ಕಿಂಗ್ಸ್ ಇಲೆವನ್ ಪಂಜಾಬ್ ಖಾತೆಯಲ್ಲಿ 53.2 ಕೋಟಿ ರುಪಾಯಿ ಹಣವಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಖಾತೆಯಲ್ಲಿ 34.9 ಕೋಟಿ ರುಪಾಯಿ ಹಣವಿದ್ದು 3 ವಿದೇಶಿ ಆಟಗಾರರು ಸೇರಿದಂತೆ 11 ಆಟಗಾರರನ್ನು ಖರೀದಿಸಬಹುದಾಗಿದೆ.
undefined
ಐಪಿಎಲ್ ಆಟಗಾರರ ಹರಾಜು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೇರ ಪ್ರಸಾರವಾಗಲಿದ್ದು, ಸುವರ್ಣ ನ್ಯೂಸ್.ಕಾಂ ಹರಾಜಿನ ಪ್ರತಿಕ್ಷಣದ ಮಾಹಿತಿಯನ್ನು ಬೆಳಕಿನ ವೇಗದಲ್ಲಿ ನಿಮಗೆ ತಲುಪಿಸಲಿದೆ.
undefined