ಮದುವೆಯಾಗುತ್ತೇನೆಂದು ನಂಬಿಸಿ ಗರ್ಭಿಣಿ ಮಾಡಿದ; ಪಾಕ್‌ ನಾಯಕನ ಮೇಲೆ ಅತ್ಯಾಚಾರದ ಆರೋಪ..!

First Published | Nov 29, 2020, 3:30 PM IST

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಮೇಲೆ ಯುವತಿಯೊಬ್ಬರು ಅತ್ಯಾಚಾರದ ಆರೋಪ ಮಾಡಿದ್ದಾರೆ. ಪಾಕಿಸ್ತಾನ ಪಾಲಿಗೆ ಆಧುನಿಕ ಕ್ರಿಕೆಟ್‌ನ ರನ್‌ ಮಷೀನ್ ಎಂದೇ ಗುರುತಿಸಿಕೊಂಡಿರುವ ಬಾಬರ್ ಅಜಂ ಮೇಲೆ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
26 ವರ್ಷದ ಬಾಬರ್ ಅಜಂ ತಮ್ಮ ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪಾಕಿಸ್ತಾನ 3 ಮಾದರಿಯ ತಂಡದ ನಾಯಕನಾಗಿರುವ ಅಜಂ ಮೇಲೆ ಮತ್ತಷ್ಟು ಆರೋಪ ಮಾಡಿದ್ದಾರೆ.

ಬಾಬರ್ ಅಜಂ ತಮ್ಮ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದು, ಇದೀಗ ಅವರ ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿದೆ.
ತಮ್ಮನ್ನು ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡು ಬಾಬರ್ ಅಜಂ ತಮ್ಮನ್ನು ಮೋಸ ಮಾಡಿರುವುದಾಗಿ ಯುವತಿಯೊಬ್ಬಳು ಆರೋಪಿಸಿದ್ದಾರೆ.
Tap to resize

ನಾನು ಮತ್ತು ಬಾಬರ್ ಅಜಂ ನಡುವೆ ಶಾಲೆಯಲ್ಲೇ ಗೆಳೆತನವಾಗಿತ್ತು. 2010ರಲ್ಲಿ ನನಗೆ ಬಾಬರ್ ಪ್ರೇಮ ನಿವೇದನೆ ಮಾಡಿದ್ದರು.
ನಮ್ಮಿಬ್ಬರ ನಡುವೆ ಪ್ರೀತಿ-ಪ್ರೇಮ ನಡೆಯುವಾಗ ಬಾಬರ್ ಅಜಂ ಯಾರೆಂಬುದೇ ಕ್ರಿಕೆಟ್‌ ಜಗತ್ತಿಗೆ ಗೊತ್ತಿರಲಿಲ್ಲ.
ನನ್ನನ್ನು ಅಜಂ ಮದುವೆಯಾಗುವುದಾಗಿ ಹೇಳಿದ್ದರು. ಆದರೆ ನಮ್ಮ ಮದುವೆಗೆ ಕುಟುಂಬದವರು ಒಪ್ಪಿರಲಿಲ್ಲ. ಹೀಗಾಗಿ ನಾವಿಬ್ಬರು ಕೋರ್ಟ್‌ ಮೂಲಕ ಮದುವೆಯಾಗುವುದಾಗಿ ತೀರ್ಮಾನಿಸಿದ್ದೆವು.
2011ರಲ್ಲಿ ನನ್ನನ್ನು ಮನೆಬಿಟ್ಟು ಹೊರಬರಲು ಬಾಬರ್ ಅಜಂ ಸಹಾಯ ಮಾಡಿದ್ದರು. ಜತೆಗೆ ಕೋರ್ಟ್‌ ಮದುವೆಯಾಗೋಣ ಎಂದು ಪ್ರಾಮೀಸ್ ಮಾಡಿದ್ದರು.
ನನ್ನನ್ನು ಬಾಡಿಗೆ ಮನೆಯಲ್ಲಿರಲು ಬಿಟ್ಟು, ಬಾಬರ್ ನನ್ನನ್ನು ಬಳಸಿಕೊಂಡರು. ಮದುವೆ ವಿಚಾರವನ್ನು ಆ ಬಳಿಕ ತಡ ಮಾಡುತ್ತಲೇ ಬಂದರು.
ಬಾಬರ್ ಅಜಂ ನನ್ನನ್ನು ಗರ್ಭಿಣಿ ಮಾಡಿದರು, ದೈಹಿಕವಾಗಿ ಹಲ್ಲೆ ಮಾಡಿದರು. ನನ್ನನ್ನು ಬೆದರಿಸಿದರು ಹಾಗೆಯೇ ಬಳಸಿಕೊಂಡರು ಎಂದು ಯುವತಿ ಕಣ್ಣೀರಿಟ್ಟಿದ್ದಾರೆ.
ಯುವತಿಯ ಆರೋಪಕ್ಕೆ ಪಾಕಿಸ್ತಾನ ನಾಯಕ ಬಾಬರ್ ಅಜಂ ಯಾವ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಬಾಬರ್ ಅಜಂ ಸದ್ಯ ಪಾಕಿಸ್ತಾನ ಪ್ರವಾಸದಲ್ಲಿ ಡಿಸೆಂಬರ್‌ನಲ್ಲಿ ಕಿವೀಸ್ ವಿರುದ್ಧ ಟಿ20 ಹಾಗೂ ಟೆಸ್ಟ್ ಸರಣಿಯಾಡಲಿದೆ.

Latest Videos

click me!