ನಿಜಕ್ಕೂ ಆಘಾತಕಾರಿ ಸುದ್ದಿಯಿದು. ಡೀನ್ ಓರ್ವ ಅದ್ಭುತ ವ್ಯಕ್ತಿ. ನನ್ನ ಆಸ್ಟ್ರೇಲಿಯಾ ಮೊದಲ ಪ್ರವಾಸದಲ್ಲಿ ಡೀನ್ ವಿರುದ್ಧ ಆಡುವ ಅವಕಾಶ ಸಿಕ್ಕಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಟ್ವೀಟ್ ಮಾಡಿದ್ದಾರೆ.
ಡೀನ್ ಕೊನೆಯುಸಿರೆಳೆದ ಸುದ್ದಿ ನಿಜಕ್ಕೂ ಆಘಾತಕಾರಿ. ಅವರ ಕುಟುಂಬದವರಿಗೆ ಹಾಗೂ ಸ್ನೇಹಿತರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.
ಆಘಾತಕಾರಿ ಸುದ್ದಿಯಿದು. ನೀವು ಆಟಗಾರ ಎನ್ನುವುದಕ್ಕಿಂತ ಹೆಚ್ಚಾಗಿ ನನ್ನ ಸ್ನೇಹಿತ ಹಾಗೆಯೇ ಸಹೋದರಾಗಿದ್ದಿರಿ. ನಿಮ್ಮ ನಗು ಹಾಗೂ ನಿಮ್ಮ ಉಪಸ್ಥಿತಿಯನ್ನು ಕ್ರಿಕೆಟ್ ಜಗತ್ತು ಮಿಸ್ ಮಾಡಿಕೊಳ್ಳಲಿದೆ. ನೀವು ನಮ್ಮ ಮನಸ್ಸಿನಲ್ಲಿರುತ್ತೀರಿ ಎಂದು ವೀವಿನ್ ರಿಚರ್ಡ್ಸ್ ಟ್ವೀಟ್ ಮಾಡಿದ್ದಾರೆ.
ಸ್ನೇಹಿತ ಹಾಗೂ ಸಹಪಾಠಿ ಅಗಲುವಿಕೆಯ ಸುದ್ದಿ ನಿಜಕ್ಕೂ ಆಘಾತಕಾರಿ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ರವಿಶಾಸ್ತ್ರಿ ಟ್ವೀಟ್ ಮಾಡಿದ್ದಾರೆ.
ಡೀನ್ ಜೋನ್ಸ್ ನಿಧನದ ಸುದ್ದಿಯನ್ನು ನಂಬಲಾಗುತ್ತಿಲ್ಲ. ಅವರು ನೆಚ್ಚಿನ ವೀಕ್ಷಕ ವಿವರಣೆಗಾರರಲ್ಲಿ ಒಬ್ಬರಾಗಿದ್ದರು. ನನ್ನ ಹಲವಾರು ದಾಖಲೆಗಳಿಗೆ ಅವರು ಸಾಕ್ಷಿಯಾಗಿದ್ದರು. ನನ್ನೊಂದಿಗೆ ಅವರ ಸಾಕಷ್ಟು ನೆನಪುಗಳಿವೆ ಎಂದು ವಿರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ಸುದ್ದಿ ತಿಳಿದು ಆಘಾತವಾಗಿದೆ ಎಂದು ರವಿಚಂದ್ರನ್ ಅಶ್ವಿನ್ ಟ್ವೀಟ್ ಮಾಡಿದ್ದಾರೆ.
ಮಾತೇ ಬರುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಸೀಸ್ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಟ್ವೀಟ್ ಮಾಡಿದ್ದಾರೆ.