2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಧೋನಿಗೆ ಸುಬ್ರಮಣಿಯನ್ ಸ್ವಾಮಿ ಸಲಹೆ!

First Published | Aug 16, 2020, 4:00 PM IST

ಟೀಂ ಇಂಡಿಯಾ ಕ್ರಿಕೆಟ್, ದಿಗ್ಗಜ ನಾಯಕ ಎಂ.ಎಸ್.ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆಗಸ್ಟ್ 15ರ ಸಂಜೆ ಸಾಮಾಜಿಕ ಜಾಲತಾಣದಲ್ಲಿ ಧೋನಿ ತಮ್ಮ ವಿದಾಯ ಘೋಷಿಸಿದ್ದಾರೆ. ಸದ್ಯ ದುಬೈನಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಗೆ ಅಭ್ಯಾಸ ಮಾಡುತ್ತಿರುವ ಧೋನಿಗೆ ಹಲವು ಕ್ರಿಕೆಟಿಗರು ವಿದಾಯದ ಜೀವನಕ್ಕೆ ಶುಭಕೋರಿದ್ದಾರೆ. ಇದರ ಜೊತೆಗೆ ಟೀಂ ಇಂಡಿಯಾ ಕೋಚ್ ಆಗುವಂತೆಯೂ ಸಲಹೆ ನೀಡಿದ್ದಾರೆ. ಆದರೆ ಬಿಜೆಪಿ ರಾಜ್ಯಸಭಾ MP , ಖ್ಯಾತ ವಕೀಲ ಸುಬ್ರಮಣಿಯನ್ ಸ್ವಾಮಿ ಚುನಾವಣೆಗೆ ಸ್ಪರ್ಧಿಸುವಂತೆ  ಸಲಹೆ ನೀಡಿದ್ದಾರೆ. 

74ನೇ ಸ್ವಾತಂತ್ರ್ಯ ದಿನಾಚರಣೆ(ಆ.15) ಸಂಜೆ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ, ಮಾಜಿ ನಾಯಕ ಎಂ.ಎಸ್.ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ
undefined
ಸಾಮಾಜಿಕ ಜಾಲತಾಣದಲ್ಲಿ ವಿದಾಯ ಘೋಷಿಸಿದ ಧೋನಿ, ಐಪಿಎಲ್ ಟೂರ್ನಿ ಅಭ್ಯಾಸಕ್ಕಾಗಿ ಚೆನ್ನೈನಲ್ಲಿ ಬೀಡು ಬಿಟ್ಟಿದ್ದಾರೆ
undefined

Latest Videos


39 ವರ್ಷದ ಧೋನಿ ಸೆಪ್ಟೆಂಬರ್ 19 ರಿಂದ ದುಬೈನಲ್ಲಿ ಆರಂಭವಾಗಲಿರುವ ಐಪಿಎಲ್ ಟೂರ್ನಿಗೆ ಅಭ್ಯಾಸ ನಡೆಸುತ್ತಿದ್ದಾರೆ
undefined
2019ರ ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾದಿಂದ ದೂರ ಉಳಿದಿದ್ದ ಧೋನಿ, ಟಿ20 ವಿಶ್ವಕಪ್ ಮೂಲಕ ಮತ್ತೆ ತಂಡಕ್ಕೆ ಮರಳಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು
undefined
ಟಿ20 ವಿಶ್ವಕಪ್ ಟೂರ್ನಿ ಧೋನಿ ವಿದಾಯದ ಧೋನಿ ಎಂದೇ ಹೇಳಲಾಗುತ್ತಿತ್ತು. ಆದರೆ ಕೊರೋನಾ ಕಾರಣ ಬಹುತೇಕ ಟೂರ್ನಿಗಳು ರದ್ದಾಗಿದ್ದರೆ, ಹಲವು ಟೂರ್ನಿಗಳು ಮುಂದೂಲ್ಪಟ್ಟಿದೆ.
undefined
ದಿಢೀರ್ ವಿದಾಯ ಹೇಳಿದ ಧೋನಿಗೆ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ವಿಶ್ರಾಂತಿ ಜೀವನಕ್ಕೆ ಶುಭಕೋರಿದ್ದಾರೆ. ಇದೇ ವೇಳೆ ಬಿಜೆಪಿ ರಾಜ್ಯಸಭಾ MP , ಖ್ಯಾತ ವಕೀಲ ಸುಬ್ರಮಣಿಯನ್ ಸ್ವಾಮಿ ಕೂಡ ಶುಭಕೋರಿದ್ದಾರೆ
undefined
ಧೋನಿ ನಾಯಕತ್ವವನ್ನು ಹೊಗಳಿದ ಸುಬ್ರಮಣಿಯನ್ ಸ್ವಾಮಿ, 2024ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಸಲಹೆ ನೀಡಿದ್ದಾರೆ
undefined
ಧೋನಿ ತನ್ನ ನಾಯಕತ್ವದಿಂದ ದಿಗ್ಗಜನಾಗಿ ಬೆಳೆದಿದ್ದಾರೆ. ಇಂತಹ ನಾಯಕತ್ವವಿರುವ ಧೋನಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸಲಹೆ ನೀಡಿದ್ದಾರೆ
undefined
ಧೋನಿ ಸಹೋದರ ನರೇಂದ್ರ ಸಿಂಗ್ ಧೋನಿ ರಾಂಚಿಯಲ್ಲಿ ರಾಜಕೀಯ ಪಕ್ಷಗಳ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದಾರೆ
undefined
click me!