ನಿವೃತ್ತಿ ಬೆನ್ನಲ್ಲೇ ಚೆನ್ನೈಗೆ ಶಾಕ್ ಕೊಟ್ಟ ಡ್ವೇನ್ ಬ್ರಾವೋ!

First Published Sep 29, 2024, 5:06 PM IST

ಇತ್ತೀಚೆಗೆ ನಿವೃತ್ತಿ ಘೋಷಿಸಿದ ವೆಸ್ಟ್ ಇಂಡೀಸ್ ಆಲ್ರೌಂಡರ್ ಡ್ವೇನ್ ಬ್ರಾವೋ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡದ ಹೊಸ ಮಾರ್ಗದರ್ಶಕರನ್ನಾಗಿ ನೇಮಿಸಲಾಗಿದೆ. ಐಪಿಎಲ್ ಮೆಗಾ ಹರಾಜು ಸಮೀಪಿಸುತ್ತಿರುವ ಕೆಕೆಆರ್‌ ತಂಡವನ್ನು ಬಲಪಡಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ.

ಡ್ವೇನ್ ಬ್ರಾವೋ ಕೆಕೆಆರ್ ಸೇರ್ಪಡೆ

ವೆಸ್ಟ್ ಇಂಡೀಸ್ ತಂಡದ ಅತ್ಯುತ್ತಮ ಆಲ್ರೌಂಡರ್ ಡ್ವೇನ್ ಬ್ರಾವೋ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ. ನಿವೃತ್ತಿ ಘೋಷಿಸಿದ ಕೆಲವೇ ಸಮಯದಲ್ಲಿ  ಕೋಲ್ಕತಾ ನೈಟ್ ರೈಡರ್ಸ್ ತಂಡದ ಹೊಸ ಮಾರ್ಗದರ್ಶಕರಾಗಿ ನೇಮಕಗೊಂಡಿದ್ದಾರೆ.

ಐಪಿಎಲ್ ಮೆಗಾ ಹರಾಜು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. 2011 ರಲ್ಲಿ ಸಿಎಸ್‌ಕೆ ತಂಡ ಸೇರಿದ್ದ ಬ್ರಾವೋ, ಕಳೆದ 2022 ರ ಐಪಿಎಲ್ ಟೂರ್ನಿಯಿಂದ ನಿವೃತ್ತಿ ಘೋಷಿಸಿದ್ದರು. ನಂತರ 2023 ರಲ್ಲಿ ಸಿಎಸ್ ಕೆ ತಂಡದ ಬೌಲಿಂಗ್ ಕೋಚ್ ಆಗಿದ್ದರು.

Latest Videos


ಆ ಸೀಸನ್ ನಲ್ಲಿ ಸಿಎಸ್‌ಕೆ 5 ನೇ ಬಾರಿಗೆ ಟ್ರೋಫಿ ಗೆದ್ದಿತ್ತು. ಕೋಚ್ ಆಗಿ ಬ್ರಾವೋ ಅವರ ಮೊದಲ ಸೀಸನ್ ಅದು. ಐಪಿಎಲ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ 3 ನೇ ಬೌಲರ್ ಎಂಬ ಹೆಗ್ಗಳಿಕೆ ಬ್ರಾವೋ ಅವರದ್ದು. 2 ಬಾರಿ ಪರ್ಪಲ್ ಕ್ಯಾಪ್ ಸಹ ಗೆದ್ದಿದ್ದಾರೆ. ಇದುವರೆಗೆ 582 ಟಿ20 ಪಂದ್ಯಗಳನ್ನು ಆಡಿರುವ ಡ್ವೇನ್ ಬ್ರಾವೋ 631 ವಿಕೆಟ್ ಪಡೆದಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಸಹ ಅವರ ಹೆಸರಿನಲ್ಲಿದೆ.

ಬರುವ ಅಕ್ಟೋಬರ್ ತಿಂಗಳಿನಲ್ಲಿ 41 ವರ್ಷ ಪೂರೈಸಲಿರುವ ಬ್ರಾವೋ, ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕಳೆದ 10 ವರ್ಷಗಳಿಂದ ಟ್ರಿನ್ಬಾಗೋ ನೈಟ್ ರೈಡರ್ಸ್ ತಂಡದ ಪರ ಆಡುತ್ತಿದ್ದಾರೆ. ಐಪಿಎಲ್ ನಲ್ಲಿ ಕೆಕೆಆರ್ ತಂಡ ಸೇರುವ ಮುನ್ನ ಬ್ರಾವೋ ಕೋಲ್ಕತ ತಂಡದ ಪರವಾಗಿ ಎಂ.ಎಲ್.ಸಿ ಟೂರ್ನಿಯಲ್ಲಿ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಮತ್ತು ಐಎಲ್ ಟಿ20 ಟೂರ್ನಿಯಲ್ಲಿ ಅಬುಧಾಬಿ ನೈಟ್ ರೈಡರ್ಸ್ ತಂಡದ ಪರ ಆಡಿದ್ದಾರೆ.

ಮಾಜಿ ಸಿಎಸ್ ಕೆ ಆಟಗಾರ ಬ್ರಾವೋ ಪ್ರಸ್ತುತ ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಟ್ರಿನ್ಬಾಗೋ ನೈಟ್ ರೈಡರ್ಸ್ ತಂಡದ ಪರ ಆಡುತ್ತಿದ್ದಾರೆ. ಕಳೆದ 2024 ರ ಐಪಿಎಲ್ ಟೂರ್ನಿಯಲ್ಲಿ ಗೌತಮ್ ಗಂಭೀರ್ ಕೋಲ್ಕತಾ ತಂಡದ ಮೆಂಟರ್‌ ಆಗಿದ್ದರು. ಅದಕ್ಕೂ ಮುನ್ನ 2 ವರ್ಷಗಳ ಕಾಲ ಲಖನೌ ಸೂಪರ್ ಜೈಂಟ್ಸ್ ತಂಡದಲ್ಲಿದ್ದರು.

ಪ್ರಸ್ತುತ ಭಾರತ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ನೇಮಕಗೊಂಡಿರುವುದರಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಹೊಸ ಮಾರ್ಗದರ್ಶಕರನ್ನು ಹುಡುಕುವ ಅನಿವಾರ್ಯತೆ ಎದುರಾಗಿತ್ತು. ಸಿಎಸ್ ಕೆ ಜೊತೆಗೆ ಮುಂಬೈ ಇಂಡಿಯನ್ಸ್ ತಂಡದ ಪರವಾಗಿಯೂ ಬ್ರಾವೋ ಆಡಿದ್ದಾರೆ.

ಐಪಿಎಲ್ 2025 ಮೆಗಾ ಹರಾಜು

ಐಪಿಎಲ್ 2025 ರ ಮೆಗಾ ಹರಾಜು ಸಮೀಪಿಸುತ್ತಿರುವ ಸಂದರ್ಭದಲ್ಲಿ ಪ್ರತಿಯೊಂದು ತಂಡವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆಯಲ್ಲಿದೆ. ಅಂದರೆ, ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು, ಯಾರನ್ನು ಬಿಡುಗಡೆ ಮಾಡಬೇಕು ಎಂಬುದು ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ತಂಡದ ಆಡಳಿತ ಮಂಡಳಿ ತೆಗೆದುಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕೋಲ್ಕತಾ ತಂಡದ ಮಾರ್ಗದರ್ಶಕರಾಗಿ ಬ್ರಾವೋ ಅವರನ್ನು ನೇಮಿಸಲಾಗಿದೆ. ಪ್ರಸ್ತುತ ಅವರಿಗೆ ಹೆಚ್ಚುವರಿ ಜವಾಬ್ದಾರಿಗಳು ಕಾದಿವೆ.

ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡ್ವೇನ್ ಬ್ರಾವೋ, ಇದೀಗ ನಿವೃತ್ತಿಯ ಬೆನ್ನಲ್ಲೇ ಸಿಎಸ್‌ಕೆಗೆ ಶಾಕ್ ಕೊಟ್ಟು ಕೆಕೆಆರ್ ಪಾಳಯ ಕೂಡಿಕೊಂಡಿರುವುದು ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಜತೆಗೆ ಹಾಗೂ ನಾಯಕ ಧೋನಿ ಜತೆಗೆ ಡ್ವೇನ್ ಬ್ರಾವೋ ಒಳ್ಳೆಯ ಗೆಳೆತನ ಹೊಂದಿದ್ದಾರೆ. ಆದರೆ ಮುಂಬರುವ ಐಪಿಎಲ್‌ನಲ್ಲಿ ಚೆನ್ನೈ ಎದುರು ತೊಡೆ ತಟ್ಟಲು ಬ್ರಾವೋ ಸಜ್ಜಾಗಿದ್ದಾರೆ.

click me!