India vs Ireland T20: ಐರ್ಲೆಂಡ್ ಟೂರ್‌ಗೆ ಮುನ್ನವೇ ಭಾರತಕ್ಕೆ ಆಘಾತ! ಸ್ಟಾರ್ ಆಲ್‌ರೌಂಡರ್ ತಂಡದಿಂದ ಔಟ್

Published : Jun 23, 2026, 01:00 PM IST

ಐರ್ಲೆಂಡ್‌ ಟೂರ್‌ಗೆ ಮುನ್ನವೇ ಟೀಂ ಇಂಡಿಯಾಗೀ ದೊಡ್ಡ ಆಘಾತ ಎದುರಾಗಿದೆ. ಅಲ್‌ರೌಂಡರ್‌ ಆಟಗಾರನ ಮೊಣಕಾಲಿನ ಗಾಯದ ಪರಿಣಾಮ ಅವರು ಟಿ 20 ಸರಣಿಯಿಂದ ಹೊರಗುಳಿದಿರುವುದು ದೊಡ್ಡ ಹಿನ್ನೆಡೆ ಎಂದೇ ಹೇಳಲಾಗಿದೆ. ಆ ಆಟಗಾರ ಯಾರು, ಏನಾಯ್ತು ವಿವರವಾಗಿ ತಿಳಿಯಿರಿ

PREV
15
ಐರ್ಲೆಂಡ್‌ ಪ್ರವಾಸಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ದೊಡ್ಡ ಆಘಾತ!

ಟೀಂ ಇಂಡಿಯಾದ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಗಾಯದ ಕಾರಣದಿಂದ ತಂಡದಿಂದ ಹೊರಗುಳಿದಿದ್ದಾರೆ. ಇದು ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾಗೆ ದೊಡ್ಡ ಹಿನ್ನೆಡೆ ಎನ್ನಬಹುದು. ಗಾಯದ ಕಾರಣದಿಂದ ಅವರನ್ನು ಐರ್ಲೆಂಡ್ ವಿರುದ್ಧದ T20 ಸರಣಿಯಿಂದ ಹೊರಗುಳಿಸಲಾಗಿದೆ. ಅವರಿಗಾಗಿರುವ ಗಾಯ ಇಂಗ್ಲೆಂಡ್‌ನಲ್ಲಿ ಮುಂಬರುವ ಸೀಮಿತ ಓವರ್‌ಗಳ ಸರಣಿಯಲ್ಲಿ ಆಡುವ ಬಗ್ಗೆಯೂ ಸಂದೇಹವಿದೆ.

25
ನಿತಿಶ್ ರೆಡ್ಡಿ ಮೊಣಕಾಲಿಗೆ ಗಂಭೀರ ಗಾಯ

ಭಾರತದ T20 ನಾಯಕನಾಗಿರುವ ಶ್ರೇಯಸ್‌ ಅಯ್ಯರ್ ನೇತೃತ್ವದ ಟೀಂ ಇಂಡಿಯಾ ಜೂನ್ 26 ರಿಂದ ಐರ್ಲೆಂಡ್ ವಿರುದ್ಧ ಎರಡು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಆದರೆ ಸರಣಿ ಪ್ರಾರಂಭವಾಗುವ ಮೊದಲೇ ಭಾರತೀಯ ತಂಡಕ್ಕೆ ನಿತೀಶ್ ರೆಡ್ಡಿ ಗಾಯಗೊಂಡು ಪಂದ್ಯದಿಂದ ಹೊರಗುಳಿದಿರುವುದು ಹಿನ್ನೆಡೆಯಾಗಿದೆ. ಪಿಟಿಐ ವರದಿಯ ಪ್ರಕಾರ, ಎಂಆರ್‌ಐ ಸ್ಕ್ಯಾನ್ ನಲ್ಲಿ ನಿತೀಶ್ ಅವರ ಎಡ ಮಂಡಿಯಲ್ಲಿ ಸ್ನಾಯುವಿನ ಊತ ಕಂಡು ಬಂದಿದೆ. 

ಈ ಕಾರಣದಿಂದಾಗಿ, ಹೆಚ್ಚಿನ ಪರೀಕ್ಷೆಗಾಗಿ ಅವರನ್ನು ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ ಗೆ ಹಾಜರಾಗಲು ಸೂಚಿಸಲಾಗಿದೆ. ನಿತೀಶ್ ಅವರ ಗಾಯವು ಗಂಭೀರವಾಗಿದೆ. ಮುಂಬರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಡಲು ಕೂಡ ಅವರಿಗೆ ಕಷ್ಟವಾಗಲಿದೆ

35
ಸ್ಪಿನ್ನರ್ ವರುಣ್ ಚಕ್ರವರ್ತಿಯೂ ಐರ್ಲೆಂಡ್ ಪ್ರವಾಸಕ್ಕಿಲ್ಲ!

ಇದರ ನಡುವೆ ಸ್ಪಿನ್ನರ್ ವರುಣ್ ಚಕ್ರವರ್ತಿ ಕೂಡ ಐರ್ಲೆಂಡ್ ಪ್ರವಾಸಕ್ಕೆ ಹೋಗುವುದಿಲ್ಲ. ಐಪಿಎಲ್ 2026 ರ ಸಮಯದಲ್ಲಿ ಅವರು ಎಡಗಾಲಿನ ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಪ್ರಸ್ತುತ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಪುನರ್ವಸತಿ(Rehabilitated) ಪಡೆಯುತ್ತಿದ್ದಾರೆ. ಈ ಕಾರಣದಿಂದಾಗಿ, ಅವರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಆಟಗಾರರ ಸಂಪೂರ್ಣ ಫಿಟ್‌ನೆಸ್‌ಗೆ ಆದ್ಯತೆ ನೀಡಿ, ಯಾವುದೇ ಆತುರವಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಐರ್ಲೆಂಡ್ ಪ್ರವಾಸವನ್ನು ಭಾರತೀಯ ತಂಡಕ್ಕೆ ಪ್ರಮುಖವೆಂದು ಪರಿಗಣಿಸಲಾಗಿದೆ. ಏಕೆಂದರೆ ಅದರ ನಂತರ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಮತ್ತು ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಆದ್ದರಿಂದ, ತಂಡದ ಆಡಳಿತವು ಆಟಗಾರರ ಫಿಟ್‌ನೆಸ್ ಮೇಲೆ ವಿಶೇಷ ಗಮನ ಹರಿಸುತ್ತಿದೆ.

45
ಭಾರತ ಮತ್ತು ಐರ್ಲೆಂಡ್ T20 ಸರಣಿ ವೇಳಾಪಟ್ಟಿ

ಭಾರತ ಮತ್ತು ಐರ್ಲೆಂಡ್ ಡುವಿನ ಮೊದಲ T20 ಜೂನ್ 26 ರಂದು ಬೆಲ್‌ಫಾಸ್ಟ್‌ನ ಸ್ಟೋರ್‌ಮಾಂಟ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಎರಡನೇ ಮತ್ತು ಅಂತಿಮ ಪಂದ್ಯ ಜೂನ್ 28 ರಂದು ಅದೇ ಮೈದಾನದಲ್ಲಿ ನಡೆಯಲಿದೆ. ಈಗ ಎಲ್ಲರ ಗಮನ ನಿತೀಶ್ ರೆಡ್ಡಿ ಮೇಲಿದೆ. ಅವರ ಗಾಯ ಎಷ್ಟು ಬೇಗ ಗುಣವಾಗುತ್ತದೆ ಮತ್ತು ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಅವರು ಸಂಪೂರ್ಣವಾಗಿ ಫಿಟ್ ಆಗುತ್ತಾರೆಯೇ? ಇಲ್ಲವೇ ಎದುರು ನೋಡುತ್ತಿದ್ದಾರೆ.

55
ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡ:

ಶ್ರೇಯಸ್‌ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಿವಂ ದುಬೆ, ತಿಲಕ್ ವರ್ಮಾ (ಉಪನಾಯಕ), ಅಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಟೋಯ್, ಹರ್ಷಿತ್ ರಾಣಾ, ಅರ್ಷ್‌ ದೀಪ್ ಸಿಂಗ್, ರಾಜಕುಮಾರ ಯಾದವ್, ವೈಭವ್ ಯಾದವ್, ವೈಭವ್.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories