ಒಂದು ವಾರದಲ್ಲಿ ಪಂದ್ಯಾವಳಿ ಪುನರಾರಂಭ ಮಾಡಲು ಬಿಸಿಸಿಐ ಚಿಂತನೆ ನಡೆಸಿದ್ದು ದಕ್ಷಿಣ ಭಾರತದ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ಪಂದ್ಯಾವಳಿ ನಡೆಸುವುದು ಸೂಕ್ತ ಎಂದು ಚಿಂತನೆ ನಡೆಸಿದೆಯಂತೆ. ಮುಂದಿನವಾರ ಐಪಿಎಲ್ ಲೀಗ್ ಪುನರಾರಂಭ ಮಾಡುವುದಾದರೆ ಕೋಲ್ಕತ್ತಾ, ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ನಡೆಸುವುದು ಸೇಫ್ ಎಂಬುದನ್ನು ಬಿಸಿಸಿಐ ಪರಿಗಣಿಸುತ್ತಿದೆಯಂತೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ಅನ್ನು ಶಾರ್ಟ್‌ಲಿಸ್ಟ್ ಮಾಡಿದೆಯಂತೆ. ಒಂದು ವೇಳೆ ಗಡಿಯಲ್ಲಿ ಪರಿಸ್ಥಿತಿ ಸುಧಾರಿಸಿದರೆ, ಮಂಡಳಿಯು ಈಗ ನಿಗದಿಯಾದ ಸ್ಥಳದಲ್ಲೇ ಮ್ಯಾಚ್ ನಡೆಸಲು ಚಿಂತಿಸಿದೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.