Ban vs NZ Test: ಕಿವೀಸ್ ದೈತ್ಯ ಸಂಹಾರ ಮಾಡಿ 5 ದಾಖಲೆ ನಿರ್ಮಿಸಿದ ಬಾಂಗ್ಲಾದೇಶ..!

Suvarna News   | Asianet News
Published : Jan 05, 2022, 03:09 PM IST

ಮೌಂಟ್‌ ಮ್ಯಾಂಗ್ಯುಯಿನಿ: ಮೊಮಿನುಲ್ ಹಕ್ ನೇತೃತ್ವದ ಬಾಂಗ್ಲಾದೇಶ ಕ್ರಿಕೆಟ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ ನ್ಯೂಜಿಲೆಂಡ್ ಎದುರು ಅವರದ್ದೇ ನೆಲದಲ್ಲಿ ಮಣಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಇಲ್ಲಿನ ಬೇ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು 8 ವಿಕೆಟ್‌ಗಳ ಅಂತರದ ಭರ್ಜರಿ ಜಯ ಸಾಧಿಸಿ ದೈತ್ಯ ಸಂಹಾರ ಮಾಡುವಲ್ಲಿ ಯಶಸ್ವಿಯಾಗಿದೆ.

PREV
16
Ban vs NZ Test: ಕಿವೀಸ್ ದೈತ್ಯ ಸಂಹಾರ ಮಾಡಿ 5 ದಾಖಲೆ ನಿರ್ಮಿಸಿದ ಬಾಂಗ್ಲಾದೇಶ..!
1. ನ್ಯೂಜಿಲೆಂಡ್ ನೆಲದಲ್ಲಿ  ಚೊಚ್ಚಲ ಟೆಸ್ಟ್ ಗೆಲುವು ದಾಖಲಿಸಿದ ಬಾಂಗ್ಲಾದೇಶ ತಂಡ

ಬಾಂಗ್ಲಾದೇಶ ತಂಡವು ಇದುವರೆಗೂ ನ್ಯೂಜಿಲೆಂಡ್ ನೆಲದಲ್ಲಿ 9 ಟೆಸ್ಟ್ ಪಂದ್ಯಗಳನ್ನಾಡಿತ್ತು. ಆದರೆ ಒಮ್ಮೆಯೂ ಕಿವೀಸ್ ನೆಲದಲ್ಲಿ ಟೆಸ್ಟ್ ಗೆಲುವು ದಾಖಲಿಸಿರಲಿಲ್ಲ. ಇದೀಗ ಮೊಮಿನುಲ್ ಹಕ್ ಪಡೆಯು ಇತಿಹಾಸ ನಿರ್ಮಿಸಿದೆ. ಇದಷ್ಟೇ ಅಲ್ಲದೇ ನ್ಯೂಜಿಲೆಂಡ್‌ ಪ್ರವಾಸದಲ್ಲಿ ಮೂರು ಮಾದರಿಯಿಂದ ಬಾಂಗ್ಲಾದೇಶ ತಂಡವು 32 ಪಂದ್ಯಗಳನ್ನಾಡಿ ಎಲ್ಲಾ ಪಂದ್ಯಗಳಲ್ಲೂ ಮುಗ್ಗರಿಸಿತ್ತು. ಆದರೆ ಈಗ ಕಿವೀಸ್‌ ನೆಲದಲ್ಲಿ ಮೊದಲ ಗೆಲುವಿನ ರುಚಿ ಕಂಡಿದೆ ಬಾಂಗ್ಲಾದೇಶ
 

26
2. ಟಾಪ್ 5 ಶ್ರೇಯಾಂಕಿತ ತಂಡದೆದುರು ವಿದೇಶಿ ನೆಲದಲ್ಲಿ ಬಾಂಗ್ಲಾಗೆ ದಕ್ಕಿದ ಮೊದಲ ಗೆಲುವು

ಬಾಂಗ್ಲಾದೇಶ ತಂಡವು ತವರಿನಾಚೆ 61 ಟೆಸ್ಟ್ ಪಂದ್ಯಗಳನ್ನಾಡಿ ಕೇವಲ 6 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಈ ಮೊದಲು ಬಾಂಗ್ಲಾದೇಶ ತಂಡವು ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ತಂಡವನ್ನು ಎರಡೆರಡು ಬಾರಿ ಸೋಲಿಸಿದೆ. ಇನ್ನು ಶ್ರೀಲಂಕಾವನ್ನು ಅವರದ್ದೇ ನೆಲದಲ್ಲಿ ಬಾಂಗ್ಲಾದೇಶ ತಂಡವು ಮಣ್ಣು ಮುಕ್ಕಿಸಿದೆ.

36

ಆದರೆ ಇದೇ ಮೊದಲ ಬಾರಿಗೆ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರ 5ರ ಸ್ಥಾನದೊಳಗಿರುವ ತಂಡದೆದುರು ಅವರದ್ದೇ ನೆಲದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡವು ಗೆಲುವು ಸಾಧಿಸಿದ್ದು ಇದೇ ಮೊದಲು. ಇನ್ನು ಬಾಂಗ್ಲಾದೇಶಕ್ಕೆ  ತವರಿನಾಚೆ 8 ವಿಕೆಟ್‌ಗಳ ಅಂತರದ ಟೆಸ್ಟ್ ಗೆಲುವು ಕೂಡಾ ಇದೇ ಮೊದಲು 
 

46
3. ಒಂದು ದಶಕದ ಬಳಿಕ ನ್ಯೂಜಿಲೆಂಡ್ ನೆಲದಲ್ಲಿ ಮೊದಲ ಟೆಸ್ಟ್ ಗೆಲುವು ಸಾಧಿಸಿದ ಏಷ್ಯಾದ ಮೊದಲ ತಂಡ

ಕಿವೀಸ್‌ ನೆಲದಲ್ಲಿ ಏಷ್ಯಾದ ತಂಡವೊಂದು ಕಡೆಯ ಬಾರಿಗೆ ಟೆಸ್ಟ್ ಗೆಲುವು ಸಾಧಿಸಿದ್ದು 2011ರಲ್ಲಿ. ಹೌದು, ಪಾಕಿಸ್ತಾನ ತಂಡವು 2011ರಲ್ಲಿ ನ್ಯೂಜಿಲೆಂಡ್ ವಿರುದ್ದ 10 ವಿಕೆಟ್‌ಗಳ ಅಂತರದ ಜಯ ಸಾಧಿಸಿತ್ತು. ಇದಾದ ಬಳಿಕ ಏಷ್ಯಾದ ಯಾವ ತಂಡವು ಕಿವೀಸ್ ನೆಲದಲ್ಲಿ ಟೆಸ್ಟ್ ಗೆಲುವು ಸಾಧಿಸಿರಲಿಲ್ಲ. ಇದೀಗ ಬಾಂಗ್ಲಾದೇಶ ಇತಿಹಾಸ ನಿರ್ಮಿಸಿದೆ 

56
4. ತವರಿನಲ್ಲಿ ನ್ಯೂಜಿಲೆಂಡ್  ತಂಡದ 17 ಟೆಸ್ಟ್ ಗೆಲುವಿನ ನಾಗಾಲೋಟಕ್ಕೆ ಬಿತ್ತು ಬ್ರೇಕ್‌

ನ್ಯೂಜಿಲೆಂಡ್ ತಂಡವು ತವರಿನಲ್ಲಿ 2017ರಲ್ಲಿ ದಕ್ಷಿಣ ಆಫ್ರಿಕಾ ಎದುರು ಸೋಲು ಕಂಡಿತ್ತು. ಇದಾದ ಬಳಿಕ ತವರಿನಲ್ಲಿ ನಡೆದ ಕಳೆದ 17 ಪಂದ್ಯಗಳಲ್ಲಿ ಸೋಲು ಕಂಡಿರಲಿಲ್ಲ. ಇದೀಗ ಬಾಂಗ್ಲಾದೇಶ ತಂಡವು ಕಿವೀಸ್ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದೆ.

66
5. ನ್ಯೂಜಿಲೆಂಡ್ ತಂಡದ ಸತತ 8ನೇ ಟೆಸ್ಟ್‌ ಸರಣಿ ಗೆಲುವಿಗೂ ಬಿತ್ತು ಬ್ರೇಕ್

ನ್ಯೂಜಿಲೆಂಡ್ ತಂಡವು ತವರಿನಲ್ಲಿ ನಡೆದ ಕಳೆದ ಎಂಟು ಟೆಸ್ಟ್ ಸರಣಿಗಳನ್ನು ಜಯಿಸಿತ್ತು. ಆದರೆ ಇದೀಗ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶ ತಂಡವು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವುದರಿಂದ, ಸತತ 9ನೇ ಟೆಸ್ಟ್ ಸರಣಿ ಗೆಲ್ಲುವ ಕಿವೀಸ್ ಕನಸು ಭಗ್ನವಾಗಿದೆ.

Read more Photos on
click me!

Recommended Stories