IPL 2026 Winner: ಈ ಬಾರಿ RCB ಕಪ್‌ ಗೆಲ್ಲತ್ತಾ?: ಟ್ಯಾರೋ ರೀಡರ್‌ ಭವಿಷ್ಯ ಕೇಳಿ ದಿಗ್ಭ್ರಮೆಗೊಂಡ ಕನ್ನಡಿಗರು!

Published : Apr 17, 2026, 10:56 PM IST

IPL 2026 Winner: ಹದಿನಾರು ವರ್ಷಗಳಿಂದ ಐಪಿಎಲ್‌ ಆಡುತ್ತಿದ್ದರೂ ಕೂಡ ನಮ್ಮ ಬೆಂಗಳೂರಿನ ಆರ್‌ಸಿಬಿ ತಂಡ ಮಾತ್ರ ಟ್ರೋಫಿ ಗೆದ್ದಿರಲಿಲ್ಲ. ಆದರೆ ಕಳೆದ ವರ್ಷ ಟ್ರೋಫಿ ಗೆದ್ದರೂ ಕೂಡ, ಕಾಲ್ತುಳಿತದ ಕಾರಣಕ್ಕೆ ಸಂಭ್ರಮದ ಬದಲು ಸೂತಕ ಬಂದಿತ್ತು. ಈ ಬಾರಿ ಕಪ್‌ ನಮ್ದಾಗತ್ತಾ? 

PREV
15
ಆರ್‌ಸಿಬಿ ಅಭಿಮಾನಿ ಬಳಗ

RCB ಕೇವಲ ಒಂದು ಕ್ರಿಕೆಟ್ ತಂಡವಲ್ಲ, ಅದು ಕೋಟ್ಯಂತರ ಕನ್ನಡಿಗರ, ಕ್ರಿಕೆಟ್ ಪ್ರೇಮಿಗಳ ಭಾವನೆ. ಟ್ರೋಫಿ ಇರಲಿ ಬಿಡಲಿ, ಅವರ ಆಕ್ರಮಣಕಾರಿ ಆಟ ಎಂದಿಗೂ ಜನಮಾನಸದಲ್ಲಿ ಉಳಿಯುತ್ತದೆ. ಈ ಬಾರಿ ಟ್ರೋಫಿ ಗೆಲ್ಲಲಿದೆಯಾ ಎಂದು ಕಾದು ನೋಡಬೇಕಿದೆ. ಈ ತಂಡಕ್ಕೆ ಇದ್ದಷ್ಟು ಅಭಿಮಾನಿ ಬಳಗ ಯಾವ ಟೀಂಗೂ ಇಲ್ಲ.

25
ವಿರಾಟ್‌ ಕೊಹ್ಲಿ ಹೇಗೆ ಆಡ್ತಾರೆ?

ವಿರಾಟ್ ಕೊಹ್ಲಿ ಈಗ ತುಂಬ ಆಧ್ಯಾತ್ಮಿಕವಾಗಿದ್ದಾರೆ. ಅವರು ಮೈದಾನದಲ್ಲಿ ಶತಕಗಳನ್ನು ಸಿಡಿಸಲಿದ್ದಾರೆ. ಅವರ ಏಕದಿನ (ODI) ವೃತ್ತಿಜೀವನವು 2028 ಸುಮಾರಿಗೆ ಇದ್ದಕ್ಕಿದ್ದಂತೆ ಕೊನೆಗೊಳ್ಳಬಹುದು.

35
ಟ್ರೋಫಿ ಗೆಲ್ಲಲಿದೆಯಾ?

ಆರ್‌ಸಿಬಿ ಕಪ್‌ ಗೆಲ್ಲಲಿದೆಯಾ ಎಂದು ಪ್ರಶ್ನೆ ಇದೆ. ಟ್ಯಾರೋ ಕಾರ್ಡ್ ರೀಡರ್ ಅಮಾಯ್ರಾ ಅವರು ಆರ್‌ಸಿಬಿ ಗೆಲ್ಲಲಿದೆಯಾ ಎಂದು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಮುಂಬೈ ಇಂಡಿಯನ್ಸ್ ಟೀಂ ಚೆನ್ನಾಗಿ ಆಡುತ್ತಾರೆ, ಆದರೆ ಫೈನಲ್ ಗೆಲ್ಲುವ ಸಾಧ್ಯತೆ ಕಡಿಮೆ ಇದೆ. RCB ತಂಡವು ಕೊನೇವರೆಗೂ ಹೋದರೂ ಕೂಡ ಟ್ರೋಫಿ ಗೆಲ್ಲುವುದು ಕಷ್ಟ ಎಂದು ಅಮಾಯ್ರಾ ಹೇಳಿದ್ದಾರೆ.

45
ಯಾರು ಗೆಲ್ತಾರೆ?

ಗುಜರಾತ್ ಟೈಟನ್ಸ್ ಮತ್ತು ಕೆಕೆಆರ್ ಟೀಂ ನಡುವೆ ತೀವ್ರ ಪೈಪೋಟಿ ಇರಲಿದೆ. ಶುಭ್‌ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ.

55
ಇಂಡಿಯಾ ಟೀಂ ವಿಶ್ವಕಪ್‌ ಗೆಲ್ಲಲಿದೆಯಾ?

ಭಾರತವು 2027 ರ ವಿಶ್ವಕಪ್ ಗೆಲ್ಲುವ ಸಾಧ್ಯತೆ ಕಡಿಮೆ ಎಂದು ಅವರು ತಿಳಿಸಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories