Asia Cup 2022: ಲಂಕಾ ಎದುರಿನ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ: ಸ್ಟಾರ್ ಆಟಗಾರನ ಕೈಬಿಡುತ್ತಾ ಟೀಂ ಇಂಡಿಯಾ?

First Published Sep 6, 2022, 2:38 PM IST

ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗುತ್ತಿವೆ. ಈಗಾಗಲೇ ಪಾಕಿಸ್ತಾನ ವಿರುದ್ದ ರೋಚಕ ಸೋಲು ಕಂಡಿರುವ ಟೀಂ ಇಂಡಿಯಾ, ಫೈನಲ್ ಪ್ರವೇಶಿಸಬೇಕಿದ್ದರೇ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಹೀಗಾಗಿ ಲಂಕಾ ಎದುರಿನ ಪಂದ್ಯಕ್ಕೆ ರೋಹಿತ್ ಶರ್ಮಾ ಪಡೆ ಕೆಲ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್‌ ಇಲ್ಲಿದೆ ನೋಡಿ.
 

1. ಕೆ ಎಲ್ ರಾಹುಲ್‌: ಟೀಂ ಇಂಡಿಯಾ ಉಪನಾಯಕ ಕೆ ಎಲ್ ರಾಹುಲ್ ದೊಡ್ಡ ಮೊತ್ತ ಗಳಿಸಲು ಪರದಾಡುತ್ತಿದ್ದಾರೆ. ಹೀಗಿದ್ದೂ ಕಳೆದ ಪಂದ್ಯದಲ್ಲಿ ಚುರುಕಾಗಿ ರನ್ ಗಳಿಸಿ ಗಮನ ಸೆಳೆದಿದ್ದರು.

Image credit: Getty

2. ರೋಹಿತ್ ಶರ್ಮಾ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂದ ಕೂಡಾ ದೊಡ್ಡ ಮೊತ್ತ  ಮೂಡಿಬರುತ್ತಿಲ್ಲ. ಲಂಕಾ ವಿರುದ್ದ ಒಳ್ಳೆಯ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ರೋಹಿತ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ

3. ವಿರಾಟ್ ಕೊಹ್ಲಿ: ಮಾಜಿ ನಾಯಕ ವಿರಾಟ್ ಕೊಹ್ಲಿ ಏಷ್ಯಾಕಪ್ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದು, ಕಳೆದೆರಡು ಪಂದ್ಯಗಳಲ್ಲೂ ಆಕರ್ಷಕ ಅರ್ಧಶತಕ ಸಿಡಿಸಿದ್ದಾರೆ. ಕೊಹ್ಲಿ ಮೂರು ಪಂದ್ಯಗಳಿಂದ ಒಟ್ಟು 154 ರನ್ ಬಾರಿಸಿ ಟೂರ್ನಿಯಲ್ಲಿ ಎರಡನೇ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದಾರೆ.

Image credit: Getty

4. ಸೂರ್ಯಕುಮಾರ್ ಯಾದವ್: ಹಾಂಕಾಂಗ್ ಎದುರು ಅಬ್ಬರಿಸಿದ್ದ ಸೂರ್ಯ, ಅದೇ ಪ್ರದರ್ಶನವನ್ನು ಪಾಕಿಸ್ತಾನ ಎದುರು ಮರುಕಳಿಸುವಲ್ಲಿ ವಿಫಲವಾಗಿದ್ದರು. ಸೂರ್ಯಕುಮಾರ್ ಅಬ್ಬರಿಸಿದರೇ ಟೀಂ ಇಂಡಿಯಾಗೆ ಯಾವುದೇ ಗುರಿ ಕಷ್ಟವಾಗಲಾರದು.

5. ಹಾರ್ದಿಕ್ ಪಾಂಡ್ಯ: ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಪಾಕಿಸ್ತಾನ ಎದುರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದರು. ಇದೀಗ ಪಾಂಡ್ಯ ಲಂಕಾ ಎದುರು ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ

6. ದಿನೇಶ್ ಕಾರ್ತಿಕ್‌:  ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್, ಏಷ್ಯಾಕಪ್ ಟೂರ್ನಿಯಲ್ಲಿ ಘರ್ಜಿಸಲು ಸಾಧ್ಯವಾಗಿಲ್ಲ. ಹೀಗಾಗಿ ಲಂಕಾ ಎದುರಿನ ಪಂದ್ಯದಲ್ಲಿ ಡಿಕೆಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆಯಿದೆ.

7. ಅಕ್ಷರ್ ಪಟೇಲ್‌: ರವೀಂದ್ರ ಜಡೇಜಾ ಗಾಯಕ್ಕೆ ತುತ್ತಾಗಿ ಸರಣಿಯಿಂದ ಹೊರಬಿದ್ದಿರುವುದರಿಂದ ಎರಡನೇ ಆಲ್ರೌಂಡರ್‌ ಆಲ್ರೌಂಡರ್ ರೂಪದಲ್ಲಿ ಇಂದು ಅಕ್ಷರ್ ಪಟೇಲ್‌ಗೆ ಸ್ಥಾನ ದೊರೆಯುವ ಸಾಧ್ಯತೆಯಿದೆ. ಹೀಗಾದಲ್ಲಿ ದೀಪಕ್ ಹೂಡಾ ಹೊರಗುಳಿಯಬೇಕಾಗುತ್ತದೆ.

8. ರವಿಚಂದ್ರನ್ ಅಶ್ವಿನ್: ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕಳೆದ ಮೂರು ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದರು. ಇದೇ ವೇಳೆ ಚಹಲ್ ವಿಕೆಟ್ ಕಬಳಿಸಲು ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ ಅಶ್ವಿನ್‌ಗೆ ಮಣೆ ಹಾಕುವ ಸಾಧ್ಯತೆಯಿದೆ.

9. ಭುವನೇಶ್ವರ್ ಕುಮಾರ್: ಅನುಭವಿ ವೇಗಿ ಭುವಿ ಕಳೆದ ಪಂದ್ಯದಲ್ಲಿ ಪಾಕಿಸ್ತಾನ ಎದುರು ದುಬಾರಿಯಾಗಿದ್ದರು. ಹೀಗಿದ್ದೂ ಟೀಂ ಇಂಡಿಯಾ, ಲಂಕಾ ಎದುರು ಗೆಲ್ಲಬೇಕಿದ್ದರೇ ಭುವನೇಶ್ವರ್ ಕುಮಾರ್ ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ.

10. ಆರ್ಶದೀಪ್ ಸಿಂಗ್:
ಚಂಡೀಗಢ ಮೂಲದ ಯುವ ವೇಗಿ ಆರ್ಶದೀಪ್ ಸಿಂಗ್ ಶಿಸ್ತುಬದ್ದ ದಾಳಿ ನಡೆಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಹೀಗಾಗಿ ಬಹುತೇಕ ಆರ್ಶದೀಪ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಖಚಿತ ಎನಿಸಿದೆ.

Image credit: Getty

11. ರವಿ ಬಿಷ್ಣೋಯಿ: ಯುವ ಲೆಗ್‌ಸ್ಪಿನ್ನರ್ ಬಿಷ್ಣೋಯಿ ಕಳೆದ ಪಂದ್ಯದಲ್ಲಿ 4 ಓವರ್ ಬೌಲಿಂಗ್ ಮಾಡಿ ಕೇವಲ 26 ರನ್ ನೀಡಿ ಒಂದು ವಿಕೆಟ್ ಕಬಳಿಸಿದ್ದರು. ಬಿಷ್ಣೋಯಿ ಮತ್ತೆ ಕಣಕ್ಕಿಳಿಯುವುದು ಬಹುತೇಕ ಖಚಿತ.

click me!