Asia Cup 2022 ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ 3 ಮಹತ್ವದ ಬದಲಾವಣೆ..?

First Published Sep 4, 2022, 12:13 PM IST

ಬೆಂಗಳೂರು: ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಮತ್ತೊಮ್ಮೆ ಮುಖಾಮುಖಿಗೆ ಸಜ್ಜಾಗಿವೆ. ಈಗಾಗಲೇ ಗ್ರೂಪ್‌ ಹಂತದಲ್ಲಿ ಪಾಕ್‌ ಎದುರು ಭರ್ಜರಿ ಜಯ ಸಾಧಿಸಿದ್ದ ಟೀಂ ಇಂಡಿಯಾ, ಇದೀಗ ಮತ್ತೊಮ್ಮೆ ಪ್ರಾಬಲ್ಯ ಮೆರೆಯಲು ಎದುರು ನೋಡುತ್ತಿದೆ. ಪಾಕ್ ಎದುರಿನ ಸೂಪರ್ 4 ಹಂತದ ಪಂದ್ಯದಲ್ಲಿ ಟೀಂ ಇಂಡಿಯಾ ಮೂರು ಪ್ರಮುಖ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವುದು ಖಚಿತ ಎನಿಸಿದೆ. ಪಾಕಿಸ್ತಾನ ಎದುರಿನ ಸೂಪರ್ 4 ಹಂತದ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಹೀಗಿದೆ ನೋಡಿ
 

1. ಕೆ ಎಲ್ ರಾಹುಲ್‌: ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್‌ ಪಾಕ್ ಎದುರಿನ ಮೊದಲ ಪಂದ್ಯದಲ್ಲಿ ಶೂನ್ಯ ಸುತ್ತಿದ್ದರು. ಇನ್ನು ಹಾಂಕಾಂಗ್ ಎದುರು 39 ಎಸೆತಗಳಲ್ಲಿ 36 ರನ್ ಬಾರಿಸಿದ್ದರು. ಇದೀಗ ಪಾಕ್ ಎದುರಿನ ಮಹತ್ವದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಲು ಸಜ್ಜಾಗಿದ್ದಾರೆ.
 

Image credit: Getty

2. ರೋಹಿತ್ ಶರ್ಮಾ: ನಾಯಕ ರೋಹಿತ್ ಶರ್ಮಾ ಬ್ಯಾಟಿಂದ ಕೂಡಾ ನಿರೀಕ್ಷಿತ ಮಟ್ಟದ ರನ್ ಹರಿದು ಬರುತ್ತಿಲ್ಲ. ನಾಯಕನಾಗಿ ಯಶಸ್ವಿಯಾಗಿರುವ ಹಿಟ್‌ ಮ್ಯಾನ್ ಇದೀಗ, ಬ್ಯಾಟ್ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿ ಕೊಡಬೇಕಿದೆ.
 

3. ವಿರಾಟ್ ಕೊಹ್ಲಿ: 6 ವಾರಗಳ ಬಿಡುವಿನ ಬಳಿಕ ತಂಡ ಕೂಡಿಕೊಂಡಿರುವ ವಿರಾಟ್ ಕೊಹ್ಲಿ ಲಯಕ್ಕೆ ಮರಳಿದಂತೆ ಕಂಡು ಬಂದಿದ್ದಾರೆ. ಕಳೆದ ಪಂದ್ಯದಲ್ಲಿ ಅಜೇಯ ಅರ್ಧಶತಕ ಬಾರಿಸಿದ್ದ ಕೊಹ್ಲಿ, ಇದೀಗ ಪಾಕ್ ಎದುರು ಘರ್ಜಿಸುವ ಆತ್ಮವಿಶ್ವಾಸದಲ್ಲಿದ್ದಾರೆ.
 

Image credit: Getty

4. ಸೂರ್ಯಕುಮಾರ್ ಯಾದವ್: ಭಾರತದ ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್, ಹಾಂಕಾಂಗ್ ಎದುರು ಸ್ಪೋಟಕ ಅರ್ಧಶತಕ ಚಚ್ಚಿದ್ದರು. ಇದೀಗ ಸೂರ್ಯ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿದ್ದಾರೆ.
 

Image credit: PTI

5. ರಿಷಭ್ ಪಂತ್: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್‌ಗೆ ಕಳೆದ ಪಂದ್ಯದಲ್ಲಿ ಬ್ಯಾಟಿಂಗ್‌ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಇಂದು ಪಾಕ್ ಎದುರು ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
 

Image credit: Getty

6. ಹಾರ್ದಿಕ್ ಪಾಂಡ್ಯ: ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಪಾಂಡ್ಯ ಭರ್ಜರಿ ಲಯದಲ್ಲಿದ್ದು, ಪಾಕ್ ತಂಡವನ್ನು ಮತ್ತೊಮ್ಮೆ ಕಾಡಲು ಸಜ್ಜಾಗಿದ್ದಾರೆ. ಪಾಂಡ್ಯಗೆ ಕಳೆದ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿತ್ತು. ಇಂದು ರವೀಂದ್ರ ಜಡೇಜಾ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ.
 

7. ಅಕ್ಷರ್ ಪಟೇಲ್‌: ಹಾಂಕಾಂಗ್ ಎದುರಿನ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿ ಏಷ್ಯಾಕಪ್ ಟೂರ್ನಿಯಿಂದ ರವೀಂದ್ರ ಜಡೇಜಾ ಹೊರಬಿದ್ದಿರುವುದರಿಂದ ಅಕ್ಷರ್‌ ಪಟೇಲ್‌ಗೆ ತಂಡದಲ್ಲಿ ಸ್ಥಾನ ದೊರೆಯುವುದು ಬಹುತೇಕ ಖಚಿತ ಎನಿಸಿದೆ. 
 

8. ರವಿಚಂದ್ರನ್ ಅಶ್ವಿನ್: ಅನುಭವಿ ಆಫ್‌ಸ್ಪಿನ್ನರ್ ಅಶ್ವಿನ್‌ ಮೊದಲೆರಡು ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದರು. ಆವೇಶ್ ಖಾನ್ ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಅಶ್ವಿನ್‌ಗೆ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಮಣೆ ಹಾಕುವ ಸಾಧ್ಯತೆಯಿದೆ.
 

Image credit: PTI

9.  ಭುವನೇಶ್ವರ್ ಕುಮಾರ್: ಟೀಂ ಇಂಡಿಯಾ ಅನುಭವಿ ವೇಗಿ ಭುವನೇಶ್ವರ್ ಕುಮಾರ್, ಬುಮ್ರಾ ಅನುಪಸ್ಥಿತಿಯಲ್ಲಿ ಜವಾಬ್ದಾರಿಯುತ ಪ್ರದರ್ಶನ ತೋರುತ್ತಿದ್ದಾರೆ. ಭುವಿ ಭಾರತ ಬೌಲಿಂಗ್ ಪಡೆಯನ್ನು ಮುನ್ನಡೆಸುತ್ತಿದ್ದಾರೆ. 
 

Image credit: PTI

10. ಯುಜುವೇಂದ್ರ ಚಹಲ್: ಅನುಭವಿ ಲೆಗ್‌ಸ್ಪಿನ್ನರ್ ಚಹಲ್ ಎದುರಾಳಿ ತಂಡದ ರನ್ ವೇಗಕ್ಕೆ ಕಡಿವಾಣ ಹಾಕುವುದಕ್ಕೆ ಯಶಸ್ವಿಯಾಗಿದ್ದಾರೆ. ಆದರೆ ವಿಕೆಟ್ ಕಬಳಿಸಲು ಮೊದಲೆರಡು ಪಂದ್ಯಗಳಲ್ಲಿ ವಿಫಲವಾಗಿದ್ದು, ಇಂದು ವಿಕೆಟ್‌ ಕಬಳಿಸಲು ರಣತಂತ್ರ ಹೆಣೆಯುತ್ತಿದ್ದಾರೆ
 

Arshdeep Singh

11. ಆರ್ಶದೀಪ್ ಸಿಂಗ್: ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿರುವ ಆರ್ಶದೀಪ್ ಸಿಂಗ್ ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದರು. ಇಂದಿನ ಪಂದ್ಯದಲ್ಲಿ ಲಯ ಕಂಡು ಕೊಳ್ಳಲು ಎಡಗೈ ವೇಗಿ ಎದುರು ನೋಡುತ್ತಿದ್ದಾರೆ.

click me!