ಇಂಗ್ಲೆಂಡ್ ಕ್ರಿಕೆಟ್ ತಂಡವು, ಆಸ್ಟ್ರೇಲಿಯಾ ಪ್ರವಾಸದಲ್ಲಿ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡಿದ್ದು, ಹೀನಾಯ ಪ್ರದರ್ಶನದ ಮೂಲಕ ಮುಖಭಂಗ ಅನುಭವಿಸಿದೆ. 2021-22ನೇ ಸಾಲಿನ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಜೋ ರೂಟ್ ಪಡೆ ಈಗಾಗಲೇ 0-3 ಅಂತರದಲ್ಲಿ ಸರಣಿಯನ್ನು ಕೈಚೆಲ್ಲಿದೆ.
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಸೋಲು ಅನುಭವಿಸಿರುವ ಇಂಗ್ಲೆಂಡ್ ತಂಡವು, ಜನವರಿ 05ರಿಂದ ಸಿಡ್ನಿಯಲ್ಲಿ ಆರಂಭವಾಗಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಜೋ ರೂಟ್ ಪಡೆಗೆ ಬಿಗ್ ಶಾಕ್ ಎದುರಾಗಿದ್ದು, ಈ ಟೆಸ್ಟ್ ಪಂದ್ಯದಿಂದ ಇಂಗ್ಲೆಂಡ್ ಕೋಚ್ ಕ್ರಿಸ್ ಸಿಲ್ವರ್‌ವುಡ್ ಹೊರಗುಳಿಯಲಿದ್ದಾರೆ.
ಕ್ರಿಸ್ ಸಿಲ್ವರ್‌ವುಡ್ ಕೋವಿಡ್-19 ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ. ಹೀಗಾಗಿ ಕ್ರಿಸ್ ಸಿಲ್ವರ್‌ವುಡ್ ಐಸೋಲೇಷನ್‌ಗೆ ಒಳಗಾಗಿದ್ದು, ಸಿಡ್ನಿ ಟೆಸ್ಟ್ ಪಂದ್ಯದಿಂದ ಇಂಗ್ಲೆಂಡ್ ಕೋಚ್ ಹೊರಗುಳಿದಿದ್ದಾರೆ.
ಕ್ರಿಸ್ ಸಿಲ್ವರ್‌ವುಡ್ ಕೊರೋನಾ ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ. ಹೀಗಾಗಿ ಅವರನ್ನು 10 ದಿನಗಳ ಕಾಲ ಐಸೋಲೇಷನ್‌ನಲ್ಲಿಡಲಾಗಿದೆ. ಸಿಲ್ವರ್‌ವುಡ್ ಕುಟುಂಬಸ್ಥರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಅದೃಷ್ಟವಶಾತ್ ಇಂಗ್ಲೆಂಡ್‌ನ ಯಾವೊಬ್ಬ ಆಟಗಾರನಿಗೂ ಸಹ ಕೋವಿಡ್ 19 ಸೋಂಕು ದೃಢಪಟ್ಟಿಲ್ಲ.
silverwood
ಕ್ರಿಸ್ ಸಿಲ್ವರ್‌ವುಡ್ ಅನುಪಸ್ಥಿತಿಯಲ್ಲಿ ಗ್ರಹಾಂ ಥ್ರೋಪ್ ಇಂಗ್ಲೆಂಡ್ ಕ್ರಿಕೆಟ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಸಿಡ್ನಿಗೆ ತೆರಳುವ ಮುನ್ನ ಇಂಗ್ಲೆಂಡ್ ತಂಡದ ಆಟಗಾರರು ಮತ್ತೊಮ್ಮೆ RT-PCR ಟೆಸ್ಟ್‌ಗೆ ಒಳಗಾಗಲಿದ್ದಾರೆ.
ಮೆಲ್ಬೊರ್ನ್ ಟೆಸ್ಟ್ ಪಂದ್ಯದ ಎರಡನೇ ದಿನದಾಟವು ಕೋವಿಡ್ ಭೀತಿಯಿಂದಾಗಿ 30 ನಿಮಿಷಗಳ ಕಾಲ ತಡವಾಗಿ ಆರಂಭವಾಗಿತ್ತು. ಇಂಗ್ಲೆಂಡ್ ಪಾಳಯದಲ್ಲಿ ಕೋವಿಡ್ ಭೀತಿ ಎದುರಾದ ಬೆನ್ನಲ್ಲೇ, ಆಟಗಾರರ ಕೋವಿಡ್ ರಿಪೋರ್ಟ್ ನೆಗೆಟಿವ್ ಬಂದ ಬಳಿಕವಷ್ಟೇ ಪಂದ್ಯ ಆರಂಭವಾಗಿತ್ತು.