ದೀಪಾವಳಿ ಸಡಗರದಲ್ಲಿ ವಿರುಷ್ಕಾ ದಂಪತಿ, ಬೇಬಿ ಬಂಪ್‌ಗೆ ದುಪ್ಪಟ್ಟಾ ಅಡ್ಡ ಹಿಡಿದು ನಸುನಕ್ಕ ಅನುಷ್ಕಾ!

First Published | Nov 12, 2023, 3:43 PM IST

ಟೀಂ ಇಂಡಿಯಾ ಕ್ರಿಕೆಟಿಗರು ಸಾಂಪ್ರದಾಯಿಕ ಉಡುಗೆ ತೊಟ್ಟು ದೀಪಾವಳಿ ಹಬ್ಬ ಆಚರಿಸಿದ್ದಾರೆ. ಕೊಹ್ಲಿ ಹಾಗೂ ಅನುಷ್ಕಾ ದಂಪತಿ ಈ ಸಡಗರದಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಕ್ಯಾಮೆರಾ ಕಾಣಿಸುತ್ತಿದ್ದಂತೆ ಅನುಷ್ಕಾ ದುಪಟ್ಟಾ ಮೂಲಕ ಬೇಬಿ ಬಂಬ್ ಮೆರಮಾಚಿ ನಸುನಕ್ಕಿದ್ದಾರೆ.
 

ನೆದರ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಬೆಂಗಳೂರಿನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ದೀಪಾವಳಿ ಹಬ್ಬ ಆಚರಿಸಿದ್ದಾರೆ. ಅದ್ಧೂರಿಯಾಗಿ, ವಿಜ್ರಂಭಣೆಯಿಂದ ಹಬ್ಬ ಆಚರಿಸಲಾಗಿದೆ.

ಟೀಂ ಇಂಡಿಯಾ ಕ್ರಿಕೆಟಿಗರು ಕುಟುಂಬ ಸಮೇತ ದೀಪಾವಳಿ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ. ಸಾಂಪ್ರದಾಯಿಕ ಉಡುಗೆ ತೊಟ್ಟು, ಬೆಳಕಿನ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದಾರೆ.
 

Tap to resize

ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಜೊತೆ ದೀಪಾವಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಕೊಹ್ಲಿ ಹಸಿರು ಬಣ್ಣದ ಕುರ್ತಾ ಧರಿಸಿದ್ದರೆ, ಅನುಷ್ಕಾ ಪಿಂಕ್ ಬಣ್ಣದ ಚೂಡಿದಾರ್‌ನಲ್ಲಿ ಕಾಣಿಸಿಕೊಂಡಿದ್ದರು.

ಕ್ಯಾಮೆರಾ ಕಾಣಿಸುತ್ತಿದ್ದಂತೆ ಅನುಷ್ಕಾ ಶರ್ಮಾ ಮೆಲ್ಲನೆ ದುಪ್ಪಟ್ಟಾ ಎಳೆದು ಬೇಬಿ ಬಂಪ್ ಮರೆ ಮಾಚಿದ್ದಾರೆ. ಅನುಷ್ಕಾ ಕೊಹ್ಲಿ ಜೊತೆಗೆ ದೀಪಾವಳಿ ಹಬ್ಬ ಆಚರಣೆಗೆ ಆಗಮಿಸಿದ ಅನುಷ್ಕಾ ಮತ್ತೆ ತಮ್ಮ ಬೇಬಿ ಬಂಪ್ ಮರೆಮಾಚುವಲ್ಲಿ ಯಶಸ್ವಿಯಾಗಿದ್ದಾರೆ.

ಕೋಲ್ಕತಾದಲ್ಲಿನ ಪಂದ್ಯ ಮುಗಿಸಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಬೆಂಗಳೂರಿಗೆ ಆಗಮಿಸಿದ್ದರ. ಇತ್ತ ಅನುಷ್ಕಾ ಶರ್ಮಾ ಮುಂಬೈನಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿ ಸಿಕ್ಕಿದ ವಿಶ್ರಾಂತಿ ದಿನವನ್ನು ಜೊತೆಯಾಗಿ ಕಳೆದಿದ್ದರು.

ಅನುಷ್ಕಾ ಶರ್ಮಾ ಬೆಂಗಳೂರಿಗೆ ಆಗಮಿಸುವ ವೇಳೆ ದೊಡ್ಡ ಸೈಜ್ ಟೀ ಶರ್ಟ್ ಧರಿಸಿ ತಮ್ಮ ಬೇಬಿ ಬಂಪ್ ಮರೆಮಾಚಿದ್ದರು ಅನ್ನೋ ಮಾತುಗಳು ಕೇಳಿಬಂದಿತ್ತು. ಇದಕ್ಕೆ ಪೂರಕವಾದ ವಿಡಿಯೋಗಳು ಬಹಿರಂಗವಾಗಿತ್ತು.
 

ಅಕ್ಟೋಬರ್ 26 ರಂದು ಅನುಷ್ಕಾ ಶರ್ಮಾ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಅನುಷ್ಕಾ ಶರ್ಮಾ ಬೇಬಿ ಬಂಪ್ ಕಾಣಿಸುತ್ತಿದೆ ಎಂದು ಭಾರಿ ಚರ್ಚೆಯಾಗಿತ್ತು.

ಅನುಷ್ಕಾ 2ನೇ ಬಾರಿಗೆ ಗರ್ಭಿಣಿಯಾಗಿದ್ದಾರೆ ಅನ್ನೋ ಚರ್ಚೆಗಳು ಶುರುವಾಗಿತ್ತು. ಬಳಿಕ ಅನುಷ್ಕಾ ಶರ್ಮಾ ಬಹಿರಂಗವಾಗಿ ಕಾಣಿಸಿಕೊಳ್ಳುವ ಎಲ್ಲಾ ಸಂದರ್ಭದಲ್ಲೂ ದೊಡ್ಡ ಸೈಜ್ ಶರ್ಟ್, ದುಪ್ಪಟ್ಟಾ ಮೂಲಕ ಬೇಬಿ ಬಂಪ್ ಮರೆಮಾಚುವ ಪ್ರಯತ್ನ ಮಾಡಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

Latest Videos

click me!