ಆಸೀಸ್ ಎದುರಿನ ಸೀಮಿತ ಓವರ್‌ ಸರಣಿಯಲ್ಲಿ ಈ ಐವರು ರೋಹಿತ್ ಶರ್ಮಾ ಸ್ಥಾನ ತುಂಬಬಹುದು..!

First Published | Nov 20, 2020, 5:44 PM IST

ಸಿಡ್ನಿ: ಬರೋಬ್ಬರಿ 9 ತಿಂಗಳುಗಳ ಬಳಿಕ ಟೀಂ ಇಂಡಿಯಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಲು ಎದುರು ತುದಿಗಾಲಿನಲ್ಲಿ ನಿಂತಿದೆ. ಲಾಕ್‌ಡೌನ್‌ ಬಳಿಕ ಟೀಂ ಇಂಡಿಯಾ ಬಹುನಿರೀಕ್ಷಿತ ಆಸ್ಟ್ರೇಲಿಯಾ ವಿರುದ್ಧ ಸೀಮಿತ ಓವರ್‌ಗಳ ಸರಣಿಯ ಮೂಲಕ ತಮ್ಮ ಅಭಿಯಾನ ಆರಂಭಿಸಲು ಎದುರು ನೋಡುತ್ತಿದೆ.
ಆದರೆ ಫಿಟ್ನೆಸ್ ಸಮಸ್ಯೆಯಿಂದಾಗಿ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಆಸೀಸ್‌ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಇದೀಗ ಸೀಮಿತ ಓವರ್‌ಗಳ ಸರಣಿಯಲ್ಲಿ ಶಿಖರ್ ಧವನ್ ಜತೆ ಯಾರು ಇನಿಂಗ್ಸ್ ಆರಂಭಿಸಬಹುದು ಎನ್ನುವ ಚರ್ಚೆ ಜೋರಾಗಿದೆ.
 

1. ಕೆ.ಎಲ್ ರಾಹುಲ್:
undefined
13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಆರೆಂಜ್ ಕ್ಯಾಪ್ ವಿಜೇತ. ಆರಂಭಿಕ ಆಟಗಾರನಾಗಿ ಅಪಾರ ಯಶಸ್ಸು ಗಳಿಸಿರುವ ರಾಹುಲ್, ಈ ಬಾರಿ ಧವನ್ ಜತೆ ಇನಿಂಗ್ಸ್‌ ಆರಂಭಿಸಬಲ್ಲ ನೆಚ್ಚಿನ ಆಟಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
undefined

Latest Videos


2.ಸಂಜು ಸ್ಯಾಮ್ಸನ್:
undefined
ಕೇರಳದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್. ಐಪಿಎಲ್‌ನಲ್ಲಿ 24 ಬಾರಿ ಆರಂಭಿಕನಾಗಿ ಕಣಕ್ಕಿಳಿದು 559 ರನ್ ಬಾರಿಸಿ ಗಮನ ಸೆಳೆದಿದ್ದಾರೆ. ಆಸೀಸ್ ವಿರುದ್ಧ ಉತ್ತಮ ಪ್ರದರ್ಶನ ತೋರಿ ತಂಡದಲ್ಲಿ ನೆಲೆಯೂರುವ ಲೆಕ್ಕಾಚಾರದಲ್ಲಿದ್ದಾರೆ ಸಂಜು ಸ್ಯಾಮ್ಸನ್
undefined
3.ಮಯಾಂಕ್ ಅಗರ್‌ವಾಲ್:
undefined
ಕರ್ನಾಟಕದ ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಮಯಾಂಕ್ ಅಗರ್‌ವಾಲ್, ಈಗಾಗಲೇ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ತೋರಿ ಸೈ ಎನಿಸಿಕೊಂಡಿದ್ದಾರೆ. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲೂ ರನ್‌ ಮಳೆ ಹರಿಸಿರುವ ಮಯಾಂಕ್‌ಗೆ ಟೀಂ ಇಂಡಿಯಾ ಆರಂಭಿಕನಾಗಲು ಮತ್ತೊಮ್ಮೆ ಅವಕಾಶ ಸಿಗುವ ಸಾಧ್ಯತೆಯಿದೆ.
undefined
4. ಶುಭ್‌ಮನ್‌ ಗಿಲ್
undefined
ಅಂಡರ್ 19 ತಂಡ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಯಶಸ್ಸು ಗಳಿಸಿರುವ ಗಿಲ್‌, ಕೆಕೆಆರ್ ತಂಡದ ಪರ ಐಪಿಎಲ್‌ನಲ್ಲಿ 440 ರನ್ ಬಾರಿಸಿ ಗಮನ ಸೆಳೆದಿದ್ದಾರೆ. ಹೀಗಾಗಿ ಗಿಲ್‌ ಈ ಬಾರಿ ಆಸೀಸ್‌ ವಿರುದ್ಧ ಧವನ್‌ ಜತೆ ಇನಿಂಗ್ಸ್‌ ಆರಂಭಿಸಿದರೂ ಆರಂಭಿಸಬಹುದು.
undefined
5. ವಿರಾಟ್ ಕೊಹ್ಲಿ
undefined
ಈ ಆಯ್ಕೆ ನಿಮಗೆಲ್ಲಾ ಅಚ್ಚರಿಯಾಗಬಹುದು. ಆದರೆ ನೆನಪಿರಲಿ ಐಪಿಎಲ್‌ನಲ್ಲಿ ಬಾರಿಸಿದ 5 ಶತಕಗಳು ವಿರಾಟ್ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿದಾಗಲೇ ಬಂದಿದ್ದು ಎಂದು. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 13 ಬಾರಿ ಟೀಂ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿದ ಅನುಭವವಿದೆ.
undefined
click me!