ಸಚಿನ್ ತೆಂಡುಲ್ಕರ್ ಹೆಸರಿನಲ್ಲಿರುವ 5 ಅಪರೂಪದ ಬೌಲಿಂಗ್ ದಾಖಲೆಗಳಿವು..!

First Published Apr 5, 2020, 8:09 PM IST

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೂರಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ತಮ್ಮ 24 ವರ್ಷಗಳ ಸುದೀರ್ಘ ಕ್ರಿಕೆಟ್‌ ಜರ್ನಿಯಲ್ಲಿ ಮುಂಬೈಕರ್ ರನ್‌ಗಳ ರಾಶಿಯನ್ನೇ ಗುಡ್ಡೆ ಹಾಕಿದ್ದಾರೆ. ಈಗಲೂ ಸಚಿನ್ ಆಟವನ್ನು ಬ್ಯಾಟಿಂಗ್‌ನಿಂದಲೇ ನೆನಪಿಸಿಕೊಳ್ಳುವವರು ಹೆಚ್ಚು.
ಆದರೆ ನೆನಪಿರಲಿ ಸಚಿನ್ ಬೌಲಿಂಗ್‌ನಲ್ಲೂ ಕಮಾಲ್ ಮಾಡಿದ್ದಾರೆ. ಬೌಲಿಂಗ್‌ನಲ್ಲಿ ಪಾರ್ಟ್ನರ್‌ಶಿಪ್‌ ಬ್ರೇಕರ್ ಆಗಿಯೂ ಟೀಂ ಇಂಡಿಯಾ ಪಾಲಿಗೆ ತೆಂಡುಲ್ಕರ್ ಆಪತ್ಬಾಂದವ ಆಗಿದ್ದು ಬಹುತೇಕ ಮಂದಿ ಮರೆತಿರಬಹುದು. ಕುತೂಹಲಕರ ಸಂಗತಿ ಎಂದರೆ ಏಕದಿನ ಕ್ರಿಕೆಟ್‌ನಲ್ಲಿ ಕೆಲ ಬೌಲಿಂಗ್ ದಿಗ್ಗಜರಾದ ಶೇನ್ ವಾರ್ನ್, ಕಪಿಲ್ ದೇವ್, ಜಹೀರ್ ಖಾನ್, ಇಮ್ರಾನ್ ಖಾನ್ ಅವರಿಗಿಂತ ಹೆಚ್ಚು ಬಾರಿ ಸಚಿನ್ 5+ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಬೌಲಿಂಗ್‌ನಲ್ಲಿ ಸಚಿನ್ ಹೆಸರಿನಲ್ಲಿರುವ 5 ಅಪರೂಪದ ದಾಖಲೆಗಳು ನಿಮ್ಮ ಮುಂದೆ.

1. 50ನೇ ಓವರ್‌ನಲ್ಲಿ 66ಕ್ಕಿಂತ ರನ್ 2 ಕಾಪಾಡಿಕೊಂಡ ಏಕೈಕ ಸ್ಪಿನ್ನರ್..!
undefined
ಸಚಿನ್ 1993ರ ಹೀರೋ ಕಪ್ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಗೆಲ್ಲಲು 6 ರನ್ ಅವಶ್ಯಕತೆಯಿತ್ತು. ಆದರೆ ತೆಂಡುಲ್ಕರ್ ಕೇವಲ 3 ರನ್ ನೀಡಿ ತಂಡವನ್ನು ಗೆಲ್ಲಿಸಿದ್ದರು. ಇನ್ನು 1996ರ ಟೈಟಾನ್ ಕಪ್‌ನಲ್ಲೂ ಆಸ್ಟ್ರೇಲಿಯಾ ವಿರುದ್ಧ 50ನೇ ಓವರ್ ಬೌಲಿಂಗ್ ಮಾಡಿ ಮೊದಲ ಎಸೆತದಲ್ಲೇ ವಿಕೆಟ್ ಕಬಳಿಸುವ ಮೂಲಕ ತಂಡಕ್ಕೆ 5 ರನ್‌ಗಳ ಗೆಲುವು ಸಾಧಿಸುವಂತೆ ಮಾಡಿದ್ದರು.
undefined
2.ಏಕದಿನ ಕ್ರಿಕೆಟ್‌ನಲ್ಲಿ 4 ವಿಕೆಟ್ ಕಬಳಿಸಿದ ಅತಿ ಕಿರಿಯ ಭಾರತೀಯ ಬೌಲರ್..!
undefined
ಸಚಿನ್ ವೆಸ್ಟ್ ಇಂಡೀಸ್ ವಿರುದ್ಧ ಕೇವಲ 34 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಆಗ ಸಚಿನ್ ವಯಸ್ಸು 18 ವರ್ಷ 181 ದಿನಗಳಾಗಿದ್ದವು. ಈ ಮೂಲಕ ಈ ಸಾಧನೆ ಮಾಡಿದ ಅತಿ ಕಿರಿಯ ಬೌಲರ್ ಎನಿಸಿದ್ದರು. 2001ರವರೆಗೂ(ಎರಡನೇ ಅತಿ ಕಿರಿಯ ಬೌಲರ್ ಆಗಿ) ಈ ದಾಖಲೆ ಸಚಿನ್ ಹೆಸರಿನಲ್ಲೇ ಇತ್ತು. ಪ್ರಸ್ತುತ ಸಚಿನ್ 10ನೇ ಸ್ಥಾನದಲ್ಲಿದ್ದಾರೆ.
undefined
3. ಒಂದೇ ಮೈದಾನದಲ್ಲಿ 2 ಬಾರಿ 5+ ವಿಕೆಟ್ ಪಡೆದ ಸ್ಪಿನ್ನರ್..!
undefined
ಸಚಿನ್ ತೆಂಡುಲ್ಕರ್ ಕೊಚ್ಚಿಯ ನೆಹರೂ ಸ್ಟೇಡಿಯಂನಲ್ಲಿ ಎರಡೆರಡು ಬಾರಿ 5+ ವಿಕೆಟ್ ಪಡೆದ ಸಾದನೆ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ 32 ರನ್ ನೀಡಿ 5 ವಿಕೆಟ್ ಕಬಳಿಸಿದ್ದ ಸಚಿನ್, ಇದಾದ ಬಳಿಕ ಪಾಕಿಸ್ತಾನ ವಿರುದ್ಧ ಇದೇ ಮೈದಾನದಲ್ಲಿ ಸಚಿನ್ 50 ರನ್ ನೀಡಿ 5 ವಿಕೆಟ್ ಕಬಳಿಸಿದ್ದರು. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಬೌಲರ್ ಎನ್ನುವ ದಾಖಲೆ ಸಚಿನ್ ಹೆಸರಿನಲ್ಲಿದೆ.
undefined
4. ಏಕದಿನ ಕ್ರಿಕೆಟ್‌ನಲ್ಲಿ ಏಷ್ಯಾದಲ್ಲಿ ಅತಿಹೆಚ್ಚು 4+ ವಿಕೆಟ್ ಪಡೆದ ಭಾರತದ ಸ್ಪಿನ್ನರ್..!
undefined
ಸಚಿನ್ ತೆಂಡುಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ ಆರು ಬಾರಿ 4+ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಏಷ್ಯಾ ಖಂಡದಲ್ಲೇ ಸಚಿನ್ 6 ಬಾರಿಯೂ 4+ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಇನ್ನು ರವೀಂದ್ರ ಜಡೇಜಾ ಹಾಗೂ ಅನಿಲ್ ಕುಂಬ್ಳೆ 4 ಬಾರಿ 4+ ವಿಕೆಟ್ ಪಡೆದು ಜಂಟಿ ಎರಡನೇ ಸ್ಥಾನ ಕಾಯ್ದುಕೊಂಡಿದ್ದಾರೆ.
undefined
5. ಟೆಸ್ಟ್ ಕ್ರಿಕೆಟ್‌ನಲ್ಲಿ ಟೀನೇಜ್ ಹಾಗೂ 40 ವಯಸ್ಸಿನಲ್ಲಿ ವಿಕೆಟ್ ಕಬಳಿಸಿದ ಏಕೈಕ ಬೌಲರ್..!
undefined
ಸಚಿನ್ ತೆಂಡುಲ್ಕರ್ 20 ವರ್ಷ ತುಂಬುವುದರೊಳಗಾಗಿ ಮೆರ್ವೆ ಹ್ಯೂಸ್, ಅಲನ್ ಬಾರ್ಡರ್, ಮಾರ್ಕ್ ಟೇಲರ್ ಹಾಗೂ ಆಂಡ್ರ್ಯೂ ಹಡ್ಸನ್ ಅವರ ವಿಕೆಟ್ ಕಬಳಿಸಿದ್ದರು. ಇನ್ನು ವೃತ್ತಿಜೀವನದ ಕೊನೆಯ ಸರಣಿಯಲ್ಲೂ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ವಿಂಡೀಸ್ ಎದುರು ಕೋಲ್ಕತಾ ಟೆಸ್ಟ್‌ನಲ್ಲಿ ಶೇನ್ ಶಿಲ್ಲಿಂಗ್‌ಫೋರ್ಡ್ ವಿಕೆಟ್ ಕಬಳಿಸುವ ಮೂಲಕ ವಿನೂತನ ದಾಖಲೆಗೆ ಪಾತ್ರರಾದರು.
undefined
click me!