ಕೊರೋನಾ ತಾಂಡವ: ಚೀನಾದ ಒಂದು ನಿರ್ಧಾರ, ಉಳಿಯಿತು 7 ಲಕ್ಷ ಜನರ ಪ್ರಾಣ!

First Published | Apr 2, 2020, 4:10 PM IST

ಚೀನಾದ ವುಹಾನ್‌ನಿಂದ ಹರಡಿದ ಕೊರೋನಾ ವೈರಸ್‌ ಸದ್ಯ ಇಡೀ ವಿಶ್ವದ ನಿದ್ದೆಗೆಡಿಸಿದೆ. ಅಮೆರಿಕಾ, ಇಟಲಿಯಲ್ಲಂತೂ ಇದು ಮರಣ ಮೃದಂಗ ಬಾರಿಸುತ್ತಿದೆ. ಹೀಗಿರುವಾಗ ಅಧ್ಯಯನ ವರದಿಯೊಂದು ಬೆಳಕಿಗೆ ಬಂದಿದ್ದು, ಇದರಲ್ಲಿ ಚೀನಾ ಇಷ್ಟು ಶೀಘ್ರವಾಗಿ ಕೊರೋನಾ ತಡೆಯಲು ಹೇಗೆ ಯಶಸ್ವಿಯಾಯಿತು ಎಂಬುವುದನ್ನು ತಿಳಿಸಲಾಗಿದೆ. ಅಲ್ಲದೇ ಚೀನಾದ ಒಂದು ನಿರ್ಧಾರದಿಂದ ಹೇಗೆ ಏಳು ಲಕ್ಷ ಮಂದಿಯ ಪ್ರಾಣ ಉಲೀಯಿತು ಎಂಬಬುವುದನ್ನೂ ಉಲ್ಲೇಖಿಸಲಾಗಿದೆ.

ಕೊರೋನಾ ವಿರುದ್ಧ ಹೋರಾಡಲು ಚೀನಾ ತೆಗೆದುಕೊಂಡ ಕೆಲ ಕ್ರಮಗಳಿಂದ ಲಕ್ಷಾಂತರ ಮಂದಿಯ ಜೀವ ಉಳಿದಿದೆ. ಒಂದು ವೇಳೆ ಚೀನಾ ಕೊಂಚ ಎಚ್ಚರ ತಪ್ಇದ್ದರೂ ಕೊರೋನಾಗೆ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದರು.
undefined
ಅಧ್ಯಯನ ತಂಡವೊಂದರ ವರದಿಯಲ್ಲಿ ಚೀನಾವು ವುಹಾನ್‌ನಲ್ಲಿ ಈ ವೈರಸ್‌ ಪತ್ತೆಯಾಗಿದೆ ಎಂಬ ಮಾಹಿತಿ ಸಿಕ್ಕ ಬೆನ್ನಲ್ಲೇ ಎಚ್ಚೆತ್ತುಕೊಂಡು ಅಗತ್ಯ ಕ್ರಮ ವಹಿಸಿತ್ತೆನ್ನಲಾಗಿದೆ. ಕ್ವಾರೆಂಟೈನ್ ಮಾಡುವುದರೊಂದಿಗೆ ಹೊರಿನವರು ಬಂದು ಹೋಗುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಯ್ತು.
undefined

Latest Videos


ವುಹಾನ್‌ನ ನಿರ್ಜನ ರಸ್ತೆಯಲ್ಲೂ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ನಡೆದುಕೊಂಡು ಹೋಗುತ್ತಿರುವ ನಾಗರಿಕರು
undefined
ಲಾಕ್‌ಡೌನ್‌ ಹೇರಿದ್ದ ಆರಂಭದಲ್ಲಿ ಅಗತ್ಯ ಕೆಲಸದ ನಿಮಿತ್ತ ತೆರಳುವವರಿಗೆ ಅವಕಾಶ ನೀಡಲಾಗುತ್ತಿತ್ತು. ಆದರೆ ಬಳಿಕ ಇದನ್ನು ಸಂಪೂರ್ಣವಾಗಿ ನಿಷೇಧಿಸಲಾಯ್ತು.
undefined
ಕೊರೋನಾ ತಪಾಸಣೆ ಹಾಗೂ ಚಿಕಿತ್ಸೆ ನೀಡುವ ವಿಚಾರದಲ್ಲೂ ಚೀನಾ ಅತಿ ಶೀಘ್ರವಾಗಿ ಸ್ಪಂದಿಸಿತು.
undefined
ವುಹಾನ್‌ನಲ್ಲಿರುವ ಚೀನಾದ ಮಾಂಸದ ಮಾರುಕಟ್ಟೆ ಹಾಗೂ ಮೀನು ಮಾರುಕಟ್ಟೆಯನ್ನೂ ಸಂಪೂರ್ಣವಾಗಿ ಮುಚ್ಚಲಾಯ್ತು.
undefined
ಈ ಮೂಲಕ ಕೊರೋನಾ ಹೊರಗೆ ಹೆಚ್ಚು ಹರಡದಂತೆ ಕ್ರಮ ವಹಿಸಲಾಯ್ತು. ಇದೇ ಕಾರಣದಿಂದ ವುಹಾನ್‌ನಿಂದ ಚೀನಾದ ಇತರ ಭಾಗಗಗಳಿಗೆ ಕೊರೋನಾ ಹೆಚ್ಚು ಹರಡಲಿಲ್ಲ.
undefined
ಒಂದು ವೇಳೆ ಚೀನಾ ಈ ಕ್ರಮ ವಹಿಸದಿದ್ದರೆ ಸುಮಾರು 7 ಲಕ್ಷ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದರು. ಅತ್ತ ಇಟಲಿ ಹಾಗೂ ಅಮೆರಿಕಾ ಕೂಡಾ ಚೀನಾದ ಈ ನಡೆಯನ್ನು ಶ್ಲಾಘಿಸಿದೆ.
undefined
ಕೊರೋನಾವನ್ನು ಹತ್ತಿಕ್ಕಲು ಹಾಗೂ ಇದರಿಂದ ರಕ್ಷಿಸಿಕೊಳ್ಳಲು ಜನರು ಹತ್ತಿ ಬಾರದಂತೆ ತಡೆಯುವುದು ಹಾಗೂ ಅವರ ಓಡಾಟವನ್ನು ಸಂಪೂರ್ಣವಾಗಿ ನಿಷೇಧಿಸುವುದೊ ಒಂದೇ ದಾರಿ.
undefined
ಚೀನಾದ ವೈದ್ಯಾಧಿಕಾರಿಗಳು ಕೊರೋನಾ ಸೋಂಕಿತನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವ ದೃಶ್ಯ
undefined
ಕೊರೋನಾವವನ್ನು ಹಿಮ್ಮೆಟ್ಟಿಸಿದ ಬಳಿಕ ಇಲ್ಲಿನ ವೈದ್ಯಾಧಿಕಾರಿಗಳು ಸಂಭ್ರಮಿಸಿದ ಕ್ಷಣ
undefined
ಕೊರೋನಾ ವಿಚಾರವಾಗಿ ಯಾರು ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲವೋ ಅಲ್ಲಿ ಇಂದು ಸೋಂಕಿತರ ಹಾಗೂ ಮೃತ ಪಡುತ್ತಿರುವವರ ಸಂಖ್ಯೆ ಗಣನೀಯವಾಗಿ ಏರಲಾರಂಭಿಸಿದೆ. ಅಲ್ಲದೇ ಇಂತಹ ದೇಶಗಳಲ್ಲಿ ಸೋಂಕಿತರ ಹಾಗೂ ಮೃತರ ಸಂಖ್ಯೆಯೂ ಹೆಚ್ಚುತ್ತಿದೆ.
undefined
ಹೀಗಿದ್ದರೂ ಚೀನಾ ಹೊರ ಜಗತ್ತಿಗೆ ಮೃತಪಟ್ಟವರ ಬಗ್ಗೆ ಸರಿಯಾದ ಅಂಕಿ ಅಂಶ ನೀಡಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ. ಚೀನಾ ಅಧಿಕೃತವಾಗಿ ತನ್ನ ದೇಶದಲ್ಲಿ 3,312 ಮಂದಿ ಕೊರೋನಾಗೆ ಬಲಿಯಾಗಿರುವುದಾಗಿ ತಿಳಿಸಿದೆ. ಇನ್ನು ಕೆಲ ಮಾಹಿಯಂತೆ ಇಲ್ಲಿ ಸುಮಾರು ನಲ್ವತ್ತು ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆನ್ನಲಾಗಿದೆ.
undefined
ಹೀಗಿದ್ದರೂ ವುಹಾನ್‌ನ ಸೀ ಫುಡ್ ಮಾರ್ಕಕೆಟ್‌ನಿಂದ ಹರಡಿದ ಈ ಮಾರಕ ವೈರಸ್‌ನ್ನು ಚೀನಾ ಕೇವಲ 50 ದಿನಗಳಲ್ಲಿ ನಿಯತ್ರಿಸಲು ಸಫಲವಾಗಿದೆ. ಆದರೆ ಅತ್ತ ಇಡೀ ವಿಶ್ವದಲ್ಲಿ ಇದರ ತಾಂಡವ ಹೆಚ್ಚುತ್ತಿದ್ದು, ಜನರನ್ನು ಆತಂಕಕ್ಕೀಡು ಮಾಡಿದೆ.
undefined
click me!