ಕೊರೋನಾ ಬಂದ್ರೂ ಬುದ್ಧಿ ಬಂದಿಲ್ಲ: ಚೀನಾದ ಡೆಡ್ಲಿ ವೆಟ್ ಮಾರುಕಟ್ಟೆ ಮತ್ತೆ ಓಪನ್!

First Published Mar 30, 2020, 5:01 PM IST

ಚೀನಾದಿಂದ ಆರಂಭವಾದ ಕೊರೋನಾ ವೈರಸ್ ಸದ್ಯ ಜಗತ್ತಿನ ಬಹುತೇಕ ಎಲ್ಲಾ ರಾಷ್ಟ್ರಗಳಿಗೆ ವ್ಯಾಪಿಸಿದ್ದು, ಮರಣ ಮೃದಂಗ ಬಾರಿಸುತ್ತಿದೆ. ಹೀಗಿರುವಾಗ ಚೀನಾದಲ್ಲಿ ಮಾತ್ರ ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದು, ಲಾಕ್‌ಡೌನ್‌ ಕೂಡಾ ಹಿಂಪಡೆಯಲಾಗಿದೆ. ಹೀಗಿದ್ದರೂ ಚೀನಿಯರು ಮಾತ್ರ ಕೊರೋನಾದಿಂದ ಯಾವುದೇ ಪಾಠ ಕಲಿತಿಲ್ಲ.  ಲಾಕ್‌ಡೌನ್‌ ತೆರವುಗೊಳಿಸಿದ್ದೇ ತಡ ಕೊರೋನಾ ಹುಟ್ಟಿಕೊಂಡಿದ್ದು ಎನ್ನಲಾದ ವುಹಾನ್‌ನ ಮಾಂಸದ ಮಾರುಕಟ್ಟೆಯತ್ತ ಹಿಂಡು ಹಿಂಡಾಗಿ ತೆರಳಿದ್ದಾರೆ.

ವುಹಾನ್‌ನ ಭಯಾನಕ ಮಾಂಸದ ಮಾರುಕಟ್ಟೆ ಎರಡು ತಿಂಗಳ ಕಠಿಣ ಲಾಕ್‌ಡೌನ್ ತೆರವುಗೊಳಿಸಿದ ಬಳಿಕ ಮತ್ತೆ ಓಪನ್ ಆಗಿದೆ.
undefined
ನೂರಕ್ಕೂ ಅಧಿಕ ಪ್ರಾಣಿಗಳ ಮಾಂಸ ಮಾರಾಟವಾಗುವ ಈ ಮಾರುಕಟ್ಟೆಯಿಂದಲೇ 2019 ಕೊನೆಯಲ್ಲಿ ಮಾರಕ ಕೊರೋನಾ ವೈರಸ್ ಹಬ್ಬಿಕೊಂಡಿತ್ತು.
undefined
ಬಾವಲಿಗಳಿಂದ ಈ ಮಾರಕ ವೈರಸ್ ಹಬ್ಬಿದ್ದು ಎನ್ನಲಾಗಿದೆ. ವುಹಾನ್‌ ಮಾರುಕಟ್ಟೆಯಲ್ಲಿ ಬಾವಲಿ ಮಾಂಸ ಹೇರಳವಾಗಿ ಮಾರಾಟ ಮಾಡಲಾಗುತ್ತದೆ.
undefined
ಇನ್ನು ಇಲ್ಲಿನ ಸೀ ಫುಡ್‌ ಮಾರ್ಕೆಟ್‌ ಜನವರಿಯಲ್ಲಿ ಮುಚ್ಚಲಾಗಿದ್ದು, ಫೆಬ್ರವರಿಯಲ್ಲಿ ಎಲ್ಲಾ ರೀತಿಯ ಮಾಂಸ ಮಾರಾಟ ಸ್ಥಗಿತಗೊಳಿಸಲಾಗಿತ್ತು.
undefined
ಆದರೀಗ ಕೊರೋನಾ ಪ್ರಕರಣಗಳು ಕಡಿಮೆಯಾದ ಹಾಗೂ ಲಾಕ್‌ಡೌನ್ ತೆರವುಗೊಳಿಸಿದ ಬೆನ್ನಲ್ಲೇ ಮತ್ತೆ ಈ ಹಿಂದಿನಂತೆ ಮಾಂಸ ಮಾರಾಟ ಆರಂಭವಾಗಿದೆ ಎಂದು ಹಲವಾರು ವರದಿಗಳು ತಿಳಿಸಿವೆ.
undefined
ಆದರೆ ಮಾರ್ಕೆಟ್ ಮತ್ತೆ ತೆರೆದ ಬಳಿಕ ಇಲ್ಲಿನ ಚಿತ್ರಗಳನ್ನು ತೆಗೆಯಲು ಸೆಕ್ಯುರಿಟಿ ಸಿಬ್ಬಂದಿಗಳು ಅವಕಾಶ ನೀಡುತ್ತಿಲ್ಲ ಎಂಬುವುದನ್ನು ಹೊರಉಪಡಿಸಿ ಉಳಿದೆಲ್ಲಾ ಚಟುವಟಿಕೆಗಳು ಮೊದಲಿನಂತಿವೆ ಎಂಬುವುದು ಇಲ್ಲಿ ಭೇಟಿ ನೀಡಿದ ಕೆಲವರ ಮಾತಾಗಿದೆ.
undefined
ಇನ್ನು ಚೀನಾದ ಗುಲಿನ್‌ನಲ್ಲಿರುವ ನಾಯಿ ಹಾಗೂ ಬೆಕ್ಕಿನ ಮಾಂಸ ಮಾರಾಟ ಮಾಡುವ ಮಾರುಕಟ್ಟೆಯೂ ತೆರೆಯಲಾಗಿದ್ದು, ಪ್ರಾಣಿಗಳ ಹನನ ಆರಂಭವಾಗಿದೆ ಎನ್ನಲಾಗಿದೆ.
undefined
ಈ ಮಾರುಕಟ್ಟೆಗಳನ್ನು ಪ್ರಾಣಿಗಳ ಮೇಲಿನ ಹಿಂಸಾಚಾರಕ್ಕಾಗಿ ಅಲ್ಲ, ಶುಚಿತ್ವ ಕಾಪಾಡುತ್ತಿಲ್ಲ ಎಂಬ ಕಾರಣಕ್ಕೆ ಜನರು ದೂರುತ್ತಾರೆ.
undefined
wuhan
undefined
ಇಂತ ಮಾರುಕಟ್ಟೆಯ ಮಾಂಸಾಹಾರ ಸೇವನೆ ಟೈಂ ಬಾಂಬ್‌ನಂತೆ ಎಂದು ಹಾಂಗ್‌ ಕಾಂಗ್‌ ವಿಶ್ವವಿದ್ಯಾನಿಲಯ ತನ್ನ 2007ರಲಲ್ಲಿ ನಡೆಸಿದ್ದ ಅಧ್ಯಯನದಲ್ಲಿ ತಿಳಿಸಿತ್ತು.
undefined
ಸದ್ಯ ಚೀನಾದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿದೆ. ಹೀಗಿದ್ದರೂ ಅದು ಪಾಠ ಕಲಿತಿಲ್ಲ.
undefined
ಯಾವ ಮಾರುಕಟ್ಟೆಯಿಂದ ಜಗತ್ತಿನಾದ್ಯಂತ ಅಪಾರ ಸಾವು ನೋವು ಉಂಟು ಮಾಡಿದ ವೈರಸ್ ಹಬ್ಬಿತ್ತೋ ಅಲ್ಲಿ ಕನಿಷ್ಟ ಪಕ್ಷ ಸ್ವಚ್ಛತೆಯನ್ನೂ ಕಾಪಾಡುವ ಕೆಲಸ ಮಾಡುತ್ತಿಲ್ಲ ಎಂಬುವುದು ಶಾಕಿಂಗ್ ವಿಚಾರ.
undefined
click me!