ಕೊರೋನಾವನ್ನು ಚೀನಾ ಸೋಲಿಸಿದ್ದು ಹೇಗೆ? ರಾತ್ರೋ ರಾತ್ರಿ ನಡೆದಿತ್ತು ಈ ಬೆಳವಣಿಗೆ

First Published Mar 26, 2020, 5:59 PM IST

ವಿಶ್ವದೆಲ್ಲೆಡೆ ಕೊರೋನಾ ವೈರಸ್ ಆಕ್ರಮಣಕಾರಿ ರೂಪ ತಾಳಿದೆ. ಈ ಸೋಂಕು ತಗುಲಿದವರ ಸಂಖ್ಯೆ ಐದು ಲಕ್ಷ ಗಡಿ ದಾಟಿದೆ. ಇದರಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿದೆ. ಭಾರತದಲ್ಲೂ ಪರಿಸ್ಥಿತಿ ಗಂಭೀರವಾಗಿದೆ. ಇನ್ನು ಸ್ಪೇನ್ ಹಾಗೂ ಇಟಲಿ ಸಾವಿನ ಸಂಖ್ಯೆಯಲ್ಲಿ ಚೀನಾವನ್ನೇ ಮೀರಿಸಿದೆ. ವಿಶ್ವದ ಅನೇಕ ರಾಷ್ಟ್ರಗಳು ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್‌ಡೌನ್ ಹೇರಿವೆ. ಹೀಗಿರುವಾಗ ಚೀನಾದಲ್ಲಿ ಹೊಸ ಪ್ರಕರಣಗಳು ಕಡಿಮೆಯಾಗಲಾರಂಭಿಸಿವೆ. ಹಾಗಾದ್ರೆ ಚೀನಾ ಇಷ್ಟು ವೇಗವಾಗಿ ಪರಿಸ್ಥಿತಿ ಕಂಟ್ರೋಲ್ ಮಾಡಿದ್ದು ಹೇಗೆ? ಇಲ್ಲಿದೆ ನೋಡಿ ಕೈಗೊಂಡ ಕ್ರಮ

ನವೆಂಬರ್ ಅಂತ್ಯಕ್ಕೆ ಚೀನಾದಲ್ಲಿ ಕೊರೋನಾ ಪ್ರಕರಣ ಬೆಳಕಿಗೆ ಬಂದಿತ್ತು. ಇದಾದ ಕೆಲವೇ ವಾರದಲ್ಲಿ ಇದು ಭಯಾನಕ ರೂಪ ಪಡೆದುಕೊಂಡಿತ್ತು. ರೋಗಿಗಳ ಸಂಖ್ಯೆ ಎಷ್ಟು ಹೆಚ್ಚಿತ್ತೆಂದರೆ ಅವರನ್ನು ದಾಖಲಿಸಲು ಆಸ್ಪತ್ರೆಗಳಲ್ಲಿ ಜಾಗವೇ ಇರಲಿಲ್ಲ.
undefined
ಆದರೆ ಇಂತಹ ಪರಿಸ್ಥಿತಿಯಲ್ಲೂ ಚೀನಾ ಧೃತಿಗೆಡಲಿಲ್ಲ. ಚೀನಾ ಕೇವಲ 10 ದಿನದಲ್ಲಿ ಒಂದು ಸಾವಿರ ಬೆಡ್‌ಗಳ ಆಸ್ಪತ್ರೆ ನಿರ್ಮಿಸಿತು.
undefined
ಚೀನಾ ಹಲವಾರು ಸ್ಟೇಡಿಯಂಗಳನ್ನೇ ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಿತು.
undefined
ವುಹಾನ್‌ನ ಕನ್ವೆಂಷನ್‌ ಸೆಂಟರ್‌ನ್ನೇ ಆಸ್ಪತ್ರೆಯನ್ನಾಗಿ ಮಾಡಲಾಯ್ತು.
undefined
ಚೀನಾ ಕಟ್ಟುನಿಟ್ಟಾಗಿ ಲಾಕ್‌ಡೌನ್ ಹೇರಿತು. ಕಳೆದೆರಡು ತಿಂಗಳಿಂದ ಜನರು ಮನೆಯೊಳಗೇ ಕೈದಿಗಳಂತಿದ್ದರು.
undefined
ಚೀನಾದ ವೈದ್ಯಕೀಯ ಸಿಬ್ಬಂದಿ ಪ್ರತಿಯೊಬ್ಬರ ಮನೆಗೆ ತೆರಳಿ ಟೆಂಪರೇಚರ್ ತಪಾಸಣೆ ನಡೆಸುತ್ತಿದ್ದರು. ತಂಡ ಒತ್ತಾಯಪೂರ್ವಕವಾಗಿ ರೋಗಿಗಳನ್ನು ಆಸ್ಪತ್ರೆಗೆ ಎಳೆದು ತಂದರು.
undefined
ಈ ವೈರಸ್ ಹೊಡೆದೋಡಿಸಲು ಚೀನಾ ಬಹಳ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತು. ಸೋಂಕು ತಗುಲಿರುವುದನ್ನು ಮುಚ್ಚಿಟ್ಟವರನ್ನು ಹುಡುಕಿ ತಂದು ಆಸ್ಪತ್ರೆಗೆ ದಾಖಲಿಸಲಾಯ್ತು.
undefined
ಕಳೆದ ಮೂರು ತಿಂಗಳಲ್ಲಿ ಹಲವಾರು ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸಲಾಯ್ತು. ಈ ಆಸ್ಪತ್ರೆಗಳನ್ನು ಕೊರೋನಾ ಶಂಕಿತರನ್ನಿಡಲಾಯ್ತು.
undefined
ಈ ತಾತ್ಕಾಲಿಕ ಆಸ್ಪತ್ರೆಯಲ್ಲಿ ಮಾಡಿದ್ದ ತಯಾರಿ ಶ್ಲಾಘಿಸಲು ಅರ್ಹವಾದದ್ದು. ರೋಗಿಗಳನ್ನು ಪ್ರತ್ಯೇಕವಾಗಿಟ್ಟು, ಆರೋಗ್ಯ ಸುಧಾರಿಸುತ್ತಿಇರುವವರನ್ನು ಮತ್ತೊಂದೆಡೆ ಇರಿಸಲಾಯ್ತು.
undefined
ಚೀನಾದ ರಸ್ತೆಗಳನ್ನೂ ಸ್ಯಾನಿಟೈಸರ್ ಮೂಲಕ ಸ್ವಚ್ಛಗೊಳಿಸಲಾಯ್ತು. ಬಹುಶಃ ಇವೆಲ್ಲದರ ಪರಿಣಾಮವೆಂಬಂತೆ ಇಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದು, ಲಾಕ್‌ಡೌನ್‌ ಮುಕ್ತಾಯಗೊಂಡಿದೆ. ರಸ್ತೆಗಳಲ್ಲಿ ಜನರ ಓಡಾಟ ಆರಮಭವಾಗಿದೆ. ಆದರೆ ಜನರಿನ್ನೂ ಮಾಸ್ಕ್ ಬಳಕೆ ಮುಂದುವರೆಸಿದ್ದಾರೆ.
undefined
click me!