ಗಾಳಿಯಿಂದ್ಲೂ ಹರಡುತ್ತೆ ಕೊರೋನಾ: ಅಮೆರಿಕಾದ ವಿಜ್ಞಾನಿಗಳಿಂದ ಶಾಕಿಂಗ್ ವರದಿ!
First Published | Apr 2, 2020, 5:06 PM ISTವಿಶ್ವದಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ 8 ಲಕ್ಷ 60 ಸಾವಿರ ದಾಟಿದೆ. ಇಷ್ಟೇ ಅಲ್ಲದೇ, ಮೃತರ ಸಂಖ್ಯೆ 42 ಸಾವಿರ ದಾಟಿದೆ. ಹೀಗಿದ್ದರೂ ಅತ್ಯಂತ ವೇಗವಾಗಿ ಹಬ್ಬುತ್ತಿರುವ ಈ ವೈರಸ್‌ಗೆ ಬ್ರೇಕ್ ಹಾಕಬಲ್ಲ ಲಸಿಕೆ ಮಾತ್ರ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಸದ್ಯಕ್ಕೀಗ ಇದರಿಂದ ಪಾರಾಗುವ ಒಂದೇ ಮಾರ್ಗ ಎಂದರೆ ಸೋಂಕಿತರಿಂದ ಅಂತರ ಕಾಯ್ದುಕೊಳ್ಳುವುದು. ಇನ್ನು ಕೊರೋನಾ ಸೋಂಕಿತರು ಮುಟ್ಟುವ ವಸ್ತುಗಳಲ್ಲೂ ಈ ವೈರಸ್ ಉಳಿದುಕೊಳ್ಳುತ್ತದೆ ಎಂಬುವುದು ಮತ್ತೊಂದು ಆಘಾತಕಾರಿ ವಿಚಾರ. ಎಲ್ಲಾ ರೀತಿಯ ಕ್ರಮ ವಹಿಸಲಾಗುತ್ತಿದ್ದರೂ, ಲಾಕ್‌ಡೌನ್ ಹೇರಲಾಗಿದ್ದರೂ ಕೊರೋನಾ ಹತ್ತಿಕ್ಕುವುದು ಮಾತ್ರ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಿರುವಾಗ ಅಮೆರಿಕಾದ ವಿಜ್ಞಾನಿಗಳು ನಡೆಸಿರುವ ಸಂಶೋಧನೆಯಿಂದ ಈ ವೈರಸ್ ಗಾಳಿ ಮೂಲಕವೂ ಹರಡುತ್ತದೆ ಎಂಬ ಶಾಕಿಂಗ್ ವಿಚಾರ ಬಯಲಾಗಿದೆ.