ಲಾಕ್‌ಡೌನ್‌ ಬೆನ್ನಲ್ಲೇ ಕಾಂಡೋಂಮ್‌ಗೆ ಹೆಚ್ಚಿದ ಬೇಡಿಕೆ, ಶೆಲ್ಫ್‌ಗಳು ಖಾಲಿ ಖಾಲಿ!

First Published | Mar 26, 2020, 6:44 PM IST

ಮಾರಕ ಕೊರೋನಾ ವೈರಸ್‌ ಸೋಂಕು ಲಕ್ಷಾಂತರ ಮಂದಿಗೆ ತಗುಲಿದೆ.  ಇದರೊಂದಿಗೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಈ ವೈರಸ್ ನಾಲ್ಕು ಹಂತದಲ್ಲಿ ಹರಡುತ್ತದೆ. ಹಲವಾರು ದೇಶಗಳಲ್ಲಿ ಇದು ನಾಲ್ಕನೇ ಹಂತಕ್ಕೆ ತಲುಪಿದೆ. ಭಾರತದಲ್ಲೂ ಈ ವೈರಸ್ ಭಯಾನಕ ರೂಪ ತಾಳದಿರಲಿ ಎಂಬ ನಿಟ್ಟಿನಲ್ಲಿ 21  ದಿನಗಳ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ. ವಿಶ್ವದ ಅನೇಕ ರಾಷ್ಟ್ರಗಳಲ್ಲೂ ಲಾಖ್‌ಡೌನ್‌ ಹೇರಲಾಗಿದೆ. ಹೀಗಿರುವಾಗ ಕೆಸದ ನಿಮಿತ್ತ ದೂರವಿದ್ದ ಹಲವಾರು ಜೋಡಿಗಳು ಒಂದಾಗಿದ್ದಾರೆ ಎಂಬ ವರದಿಗಳು ಸೌಂಡ್ ಮಾಡಿವೆ. ತಮ್ಮ ಮನೆಗೆ ಮರಳಿರುವ ಜೋಡಿಗಳು, ಒಟ್ಟಾಗಿ ಸಮಯ ಕಳೆಯುತ್ತಿರುವ ಫೋಟೋಗಳನ್ನು  ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.  ಈ ಸಮಯ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಬೆಸ್ಟ್ ಎಂದಿದ್ದಾರೆ. ಆದರೆ ಈ ಎಲ್ಲಾ ಬೆಳವಣಿಗೆಗಳ ನಡುವೆ ಮಾರುಕಟ್ಟೆಯಲ್ಲಿ ಕಾಂಡೋಂಗಳೂ ಮುಗಿದಿವೆ.

ಬ್ರಿಟಿಷ್ ಇನ್ಸ್ಟಾಗ್ರಾಂ ಬಳಕೆದಾರ ಟಾಯ್ಮರ್ ಕೂಡಾ ತಾನು ಲಾಕ್‌ಡೌನ್ ಸಮಯದಲ್ಲಿ ತನ್ನ ಪ್ರಿಯತಮನ ಮನೆಯಲ್ಲಿ ಸಮಯ ಕಳೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
undefined
ನ್ಯೂ ಹೆಮಿಸ್ಪೆಯರ್‌ನಲ್ಲಿರುವ 19 ವರ್ಷದ ಹೆಲ್ಟನ್ ಹಾಗೂ ಮಿಕೇಲಾ ಲಾಕ್‌ಡೌನ್ ವೇಳೆ ಒಟ್ಟಾಗಿ ಇರುವ ನಿರ್ಧಾರ ತೆಗೆದುಕೊಂಡಿದ್ದಾರೆ. ಇವರಿಬ್ಬರೂ ಡೇಟಿಂಗ್ ಆರಂಭಿಸಿ ಕೇವಲ ಮೂರು ವಾರಗಳಾಗಿವೆ.
undefined

Latest Videos


ನಾರ್ಥ್ ಅಮೆರಿಕಾದಲ್ಲಿ ನೆಲೆಸುತ್ತಿರುವ ಈ ಕೆನಡಾ ದಂಪತಿ ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಐಸೋಲೇಷನ್‌ನಲ್ಲಿರುವುದೇ ಅತ್ಯುತ್ತಮ ಎಂದಿದ್ದಾರೆ.
undefined
ಪೆನಿಸ್ಲ್ವೇನಿಯಾದಲ್ಲಿ ಇರುವ ಕಾಸೆ ಕೂಡಾ ತನ್ನ ಪ್ರಿಯತಮೆ ಜೊತೆ ಕಾಲ ಕಳೆಯುತ್ತಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ.
undefined
ಈ ವೈರಸ್‌ನಿಂದಾಗಿ ಮಾರುಕಟ್ಟೆಯಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಕೊರತೆ ಕಾಣಿಸಿಕೊಂಡಿದೆ. ಜನರು ದಿನಸಿಯನ್ನೂ ಸ್ಟಾಕ್ ಮಾಡುತ್ತಿದ್ದಾರೆ. ಆದರೆ ಇವೆಲ್ಲದರ ನಡುವೆ ಹಲವಾರು ದೇಶಗಳಲ್ಲಿ ಕಾಂಡೋಂ ಕೊರತೆಯೂ ಎದುರಾಗಿದೆ ಎಂಬ ಮಾಹಿತಿ ಬಯಲಾಗಿದೆ.
undefined
ಡೈಲಿ ವೈರ್‌ನಲ್ಲಿ ಪ್ರಕಟವಾದ ವರದಿಯನ್ವಯ ಬ್ರಿಟನ್‌ನಲ್ಲಿ ಕೊರೋನಾ ಭೀತಿ ನಡುವೆ ಮೆಡಿಕಲ್ ಶಾಪ್‌ಗಳಲ್ಲಿ ಮಾಸ್ಕ್ ಹಾಗೂ ಸ್ಯಾನಿಟಟೈಸರ್ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ.
undefined
ಇವೆರಡು ವಸ್ತುಗಳ ಹೊರತು ಬ್ರಿಟನ್ ಮೆಡಿಕಲ್ ಶಾಪ್‌ಗಳಲ್ಲಿ ಕಾಂಡೋಗಳು ಕೂಡಾ ಖಾಲಿಯಾಗಿವೆ.
undefined
ವರದಿಗಳನ್ವಯ ಜನರು ಕೊರೋನಾ ಭೀತಿಯಿಂದ ಮನೆಯಲ್ಲಿದ್ದಾರೆ. ಹೀಗಿರುವಾಗ ಎಲ್ಲರೂ ಕಾಂಡೋಂಗಳನ್ನು ಖರೀದಿಸಿ ಸ್ಟಾಕ್ ಮಾಡುತ್ತಿದ್ದಾರೆ ಎನ್ನಲಾಗಿದೆ.
undefined
ಬ್ರಿಟನ್‌ನಂತೆ ಚೀನಾದಲ್ಲೂ ಇದೇ ಪರಿಸ್ಥಿತಿ ಕಂಡು ಬಂದಿದೆ. ಮಾಸ್ಕ್ ಸ್ಯಾನಿಟೈಸರ್ ಜೊತೆ ಕಾಂಡೋಂಗಳು ಕೂಡಾ ಭರ್ಜರಿಯಾಗಿ ಖರೀದಿಸಿದ್ದಾರೆ.
undefined
ಚೀನಾದ ಹಲವಾರು ಮೆಡಿಕಲ್ ಶಾಪ್‌ಗಳಲ್ಲಿ ಕಾಂಡೋಂ ಶೆಲ್ಫ್‌ಗಳು ಖಾಲಿಯಾಗಿವೆ.
undefined
ಇಟಲಿಯಲ್ಲೂ ಇದೇ ಪರಿಸ್ಥಿತಿ ಇದೆ. ಇಲ್ಲಿ ಲಾಕ್‌ಡೌನ್‌ನಿಂದಾಗಿ ಜನರು ಮನೆಯಿಂದ ಹೊರ ಬರುವಂತಿಲ್ಲ.
undefined
ಇರಾನ್‌ನಲ್ಲೂ ಮೆಡಿಕಲ್ ಶಾಪ್‌ಗಳಲ್ಲಿ ಕಾಂಡೋಂಗಳು ಮಾಯವಾಗಿವೆ. ಭಾರತದಲ್ಲೂ ಇದೇ ಪರಿಸ್ಥಿತಿ ಕಂಡು ಬಂದಿದೆ
undefined
ಇಟಲಿಯಲ್ಲೂ ಇದೇ ಪರಿಸ್ಥಿತಿ ಇದೆ. ಇಲ್ಲಿ ಲಾಕ್‌ಡೌನ್‌ನಿಂದಾಗಿ ಜನರು ಮನೆಯಿಂದ ಹೊರ ಬರುವಂತಿಲ್ಲ.
undefined
click me!