ಹಾವೇರಿ(ಏ.08): ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿಂದ ವಾಪಸಾದ ಇಲ್ಲಿಯ ಇಬ್ಬರು ಸಾಫ್ಟ್‌ವೇರ್ ಉದ್ಯೋಗಿಗಳು ತರಕಾರಿ ಮಾರುತ್ತಿರುವ ಘಟನೆ ನಗರದಲ್ಲಿ ನಡೆದಿದೆ. ಟೆಕ್ಕಿಗಳು ತಮ್ಮ ಗೆಳೆಯರೊಂದಿಗೆ ಸೇರಿ ತರಕಾರಿ ಅಂಗಡಿ ತೆರೆದಿದ್ದಾರೆ. ತರಕಾರಿಗಳನ್ನು ಎಡಿಬಲ್ ಸ್ಯಾನಿಟೈಸರ್‌ನಿಂದ ಶುದ್ಧೀಕರಿಸಿ, ನೋ ಲಾಸ್ ನೋ ಪ್ರಾಫಿಟ್ ಆಧಾರದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದಾರೆ.