ಲಾಕ್‌ಡೌನ್‌: ಮನೆ ಬಿಟ್ಟು ಆಚೆ ಬಂದ್ರೆ ಮಂಗಳಾರತಿ ಗ್ಯಾರಂಟಿ!

First Published | Apr 3, 2020, 3:21 PM IST

ಕೊಪ್ಪಳ(ಏ.03): ಲಾಕ್‌ಡೌನ್ ಇರುವ ಸಮಯದಲ್ಲಿ ಮನೆ ಬಿಟ್ಟು ಹೊರಗಡೆ ಬರುವ ಜನರನ್ನ ಹಿಮ್ಮೆಟ್ಟಿಸಲು ಪೊಲೀಸರು ಹೊಸದೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ. ಸರ್ಕಾರದ ಆದೇಶ ಉಲ್ಲಂಘಿಸಿ ಮನೆಯಿಂದ ಆಚೆ ಬಂದವರಿಗೆ ಸ್ವತಃ ಡಿವೈಎಸ್ಪಿ ವೆಂಕಟಪ್ಪ ನಾಯಕ ಅವರೇ ದೃಷ್ಟಿ ತೆಗೆದು ಈಡುಗಾಯಿ ಒಡೆದಿದ್ದಾರೆ. 

ಲಾಕ್‌ಡೌನ್‌ ಆದೇಶ ಮೀರಿ ಹೊರಗೆ ಬರುವ ಜನರನ್ನು ಹಿಮ್ಮೆಟ್ಟಿಸಲು ದಿನಕ್ಕೊಂದು ಉಪಾಯ ಕಂಡುಕೊಳ್ಳುತ್ತಿರುವ ಕೊಪ್ಪಳದ ಪೊಲೀಸರು
ಲಾಠಿ ಬೀಸದಿರುವಂತೆ ಕಟ್ಟುನಿಟ್ಟಿನ ಆದೇಶ ಬಂದ ಮೇಲೆ ವಿನೂತನ ಪ್ರಯೋಗಕ್ಕೆ ಮುಂದಾದ ಆರಕ್ಷಕರು
Tap to resize

ಬಂದಿದ್ದೀರಿ ಬರ್ರೀ, ನಿಮಗೆ ಎಷ್ಟು ಹೇಳಿದರೂ ಬುದ್ಧಿ ಬರವಲ್ದು, ನಿಮಗೆ ಯಾರ ದೃಷ್ಟಿತಾಗದಿರಲಿ ಎಂದು ದೃಷ್ಟಿತೆಗೆದು ಈಡುಗಾಯಿ ಒಡೆದ ಪೊಲೀಸರು
ಪ್ರಾರಂಭದಲ್ಲಿ ಲಾಠಿ ಏಟು ನೀಡಿ, ಹಿಮ್ಮೆಟ್ಟಿಸಿದ ಪೊಲೀಸರು ಇದೀಗ ಮನೆಯಿಂದ ಹೊರ ಬಂದವರಿಗೆ ದೃಷ್ಟಿ ತೆಗೆಯುತ್ತಿದ್ದಾರೆ
ಲಾಠಿ ಕೆಳಗಿಟ್ಟು, ಪರ್ಯಾಯ ಮಾರ್ಗ ಕಂಡುಕೊಂಡ ಕೊಪ್ಪಳದ ಪೊಲೀಸರು

Latest Videos

click me!